image image
ಬ್ರೇಕಿಂಗ್ ನ್ಯೂಸ್
ಬ್ರೇಕಿಂಗ್ ನ್ಯೂಸ್

ಭಾರತ ವಿರೋಧಿ ಕೆನಡಾ ಪ್ರಧಾನಿ ಟ್ರುಡೊಗೆ ಶಾಕ್

ಭಾರತ ವಿರೋಧಿ ಕೆನಡಾ ಪ್ರಧಾನಿ ಟ್ರುಡೊಗೆ ಶಾಕ್

ಕೆನಡಾ : ಭಾರತ ವಿರೋಧಿ ನಿಲುವು ತಳೆದಿರುವ ಕೆನಡಾ ಪ್ರಧಾನಿ ಜಸ್ಟೀನ್​ ಟ್ರುಡೊಗೆ ಮತ್ತೊಂದು ಶಾಕ್​ ಎದುರಾಗಿದೆ. ಪ್ರಮುಖ ಮಿತ್ರಪಕ್ಷ ನ್ಯೂ ಡೆಮಾಕ್ರಟಿಕ್ (ಎನ್‌ಡಿಪಿ) ಸರ್ಕಾರದ ವಿರುದ್ಧ ಮುಂದಿನ ವರ್ಷ ಅವಿಶ್ವಾಸ ನಿರ್ಣಯ ಮಂಡಿಸಲು ನಿರ್ಧರಿಸಿದೆ.

ಟ್ರುಡೊರ ಲಿಬರಲ್​​ ಪಕ್ಷದ ಸರ್ಕಾರಕ್ಕೆ ಬೆಂಬಲ ನೀಡಿ ಕಿಂಗ್​ ಮೇಕರ್​​ ಎನ್ನಿಸಿಕೊಂಡಿದ್ದ ಭಾರತೀಯ ಸಂಜಾತ ಜಗ್ಮೀತ್ ಸಿಂಗ್ ಅವರ ಎನ್​ಡಿಪಿಯು ಸರ್ಕಾರದಲ್ಲಿ ವಿಶ್ವಾಸ ಕಳೆದುಕೊಂಡಿದೆ. ಹೀಗಾಗಿ, ಸರ್ಕಾರದ ಪತನಕ್ಕೆ ಜಗ್ಮೀತ್ ಸಿಂಗ್ ಕರೆ ನೀಡಿ ಬಹಿರಂಗ ಪತ್ರ ಬರೆದಿದ್ದಾರೆ.

ಕೆನಡಾದಲ್ಲಿ ಮುಂದಿನ ವರ್ಷದ ಅಕ್ಟೋಬರ್​​ನಲ್ಲಿ ಸಾರ್ವತ್ರಿಕ ಚುನಾವಣೆ ನಡೆಯಬೇಕು. ಆದರೆ, ಅದಕ್ಕೂ ಮೊದಲು ಸರ್ಕಾರವನ್ನು ಪತನಗೊಳಿಸಿ ಚುನಾವಣೆ ನಡೆಸಬೇಕು ಎಂದು ಎನ್​ಡಿಪಿ ಹೇಳಿದೆ. ಹೀಗಾಗಿ ಲಿಬರಲ್​ ಪಕ್ಷದ ಸರ್ಕಾರಕ್ಕೆ ನೀಡಿದ್ದ ಬೆಂಬಲವನ್ನು ತಾನು ಹಿಂಪಡೆಯುವುದಾಗಿ ತಿಳಿಸಿ, ಅವಿಶ್ವಾಸ ನಿರ್ಣಯ ಮಂಡಿಸಲಾಗುವುದು ಎಂದಿದೆ.

ಟ್ರುಡೊ ಸರ್ಕಾರದಲ್ಲಿ ಉಪ ಪ್ರಧಾನ ಮಂತ್ರಿ ಹಾಗೂ ಹಣಕಾಸು ಸಚಿವೆಯಾಗಿದ್ದ ಕ್ರಿಸ್ಟಿಯಾ ಫ್ರೀಲ್ಯಾಂಡ್ ಅವರು ಇತ್ತೀಚೆಗೆ ತಮ್ಮ ಹುದ್ದೆಗೆ ರಾಜೀನಾಮೆ ನೀಡಿದ್ದರು. ಬಳಿಕ ಸರ್ಕಾರವು ಭಾರೀ ವಿರೋಧ ಎದುರಿಸುತ್ತಿದೆ. ಟ್ರುಡೊ ರಾಜೀನಾಮೆ ನೀಡಬೇಕು ಎಂಬ ಕೂಗೂ ಬಲವಾಗಿದೆ. ಇದರ ನಡುವೆ, ಸಂಪುಟ ಪುನಾರಚನೆ ಮಾಡುವ ಸಾಧ್ಯತೆಯೂ ಹೆಚ್ಚಿದೆ ಎಂದು ವರದಿಯಾಗಿದೆ.

2019 ರ ಸಾರ್ವತ್ರಿಕ ಚುನಾವಣೆಯಲ್ಲಿ ಜಗ್ಮೀತ್​ ಸಿಂಗ್​ ನೇತೃತ್ವದ ನ್ಯೂ ಡೆಮಾಕ್ರಟಿಕ್​​ ಪಾರ್ಟಿ (ಎನ್​ಡಿಪಿ) ಕಿಂಗ್​ ಮೇಕರ್​ ಆಗಿ ಹೊರಹೊಮ್ಮಿತ್ತು. ಪ್ರಧಾನಿ ಜಸ್ಟಿನ್​ ಟ್ರುಡೊ ಅಧಿಕಾರಕ್ಕೆ ಬರಲು ಎನ್​ಡಿಪಿ ಬೆಂಬಲ ನೀಡಿತ್ತು.

Category
ಕರಾವಳಿ ತರಂಗಿಣಿ