image image
ಬ್ರೇಕಿಂಗ್ ನ್ಯೂಸ್
ಬ್ರೇಕಿಂಗ್ ನ್ಯೂಸ್

ಅಮೆರಿಕದೊಂದಿಗೆ ಮಾತುಕತೆಗೆ ಸಿದ್ಧ ಎಂದ ರಷ್ಯಾ ಅಧ್ಯಕ್ಷ ಪುಟಿನ್

ಅಮೆರಿಕದೊಂದಿಗೆ ಮಾತುಕತೆಗೆ ಸಿದ್ಧ ಎಂದ ರಷ್ಯಾ ಅಧ್ಯಕ್ಷ ಪುಟಿನ್

ರಷ್ಯಾ: ಆರ್ಥಿಕ ಬೆಳವಣಿಗೆ ಮತ್ತು ವಿಶ್ವ ಆರ್ಥಿಕತೆ ರಚನೆ ರೂಪಿಸುವಲ್ಲಿ ಬ್ರಿಕ್ಸ್​ ದೇಶಗಳು ಹೊಸ ಸಾಧನವನ್ನು ನಿರಂತರವಾಗಿ ಸೃಷ್ಟಿಸುವ ಕೆಲಸ ಮಾಡುತ್ತವೆ. ಇದು ದೀರ್ಘಕಾಲದ ಮಾನವೀಯತೆ ಪ್ರಗತಿಗೆ ಕೊಡುಗೆ ನೀಡುವ ಜೊತೆಗೆ ಜಾಗತಿಕ ಚಳವಳಿಗಳಲ್ಲಿ ಗುಂಪಿನ ದೇಶಗಳ ಸ್ಥಾನವನ್ನು ಬಲಪಡಿಸುತ್ತದೆ ಎಂದು ರಷ್ಯಾ ಅಧ್ಯಕ್ಷ ವ್ಲಾಡಿಮಿರ್​ ಪುಟಿನ್​ ಘೋಷಿಸಿದ್ದಾರೆ.

ಪತ್ರಕರ್ತರ ಪ್ರಶ್ನೆಗೆ ಉತ್ತರಿಸಿದ ಅವರು, ಸದಸ್ಯ ರಾಷ್ಟ್ರಗಳ ಹಿತಾಸಕ್ತಿಗಳಿಗಾಗಿ ಸಂಘವು ಕಾರ್ಯನಿರ್ವಹಿಸುತ್ತದೆ ಎಂದು ಇದೇ ವೇಳೆ ಸ್ಪಷ್ಟಪಡಿಸಿದ್ದಾರೆ. ಬ್ರಿಕ್ಸ್​ ಒಕ್ಕೂಟ ವೇಗವಾಗಿ ಬೆಳೆಯುತ್ತಿದ್ದು, ಅನೇಕ ರಾಷ್ಟ್ರಗಳು ಬ್ರಿಕ್ಸ್​ ಕುರಿತು ಆಸಕ್ತಿ ತೋರಿಸುತ್ತಿವೆ. ಕಾರಣ ಇದು ಪರಸ್ಪರ ಹಿತಾಸಕ್ತಿ ಮತ್ತು ಗೌರವದ ನಿರ್ಮಾಣಕ್ಕೆ ಕೆಲಸ ಮಾಡಲಿದೆ. ಎಲ್ಲ ವಿಷಯಗಳನ್ನು ಒಮ್ಮತದಿಂದ ಅಳವಡಿಸಿಕೊಳ್ಳಲಾಗುತ್ತದೆ, ಒಕ್ಕೂಟದ ಬೆಳವಣಿಗೆಗೆ ಇದು ಮುಖ್ಯವಾಗಿದೆ. ಇಲ್ಲಿ ಚಿಕ್ಕ- ದೊಡ್ಡ, ಹೆಚ್ಚು ಅಭಿವೃದ್ಧಿ ಮತ್ತು ಕಡಿಮೆ ಅಭಿವೃದ್ಧಿ ಹೊಂದಿದ ರಾಷ್ಟ್ರಗಳು ಎಂಬ ಭೇದ ಭಾವಗಳಿಲ್ಲ. ಇಲ್ಲಿ ಪರಸ್ಪರ ಹಿತಾಸಕ್ತಿ ಬದಲು ಅಭಿವೃದ್ಧಿಯ ಹಿತಾಸಕ್ತಿ ಇದೆ ಎಂದರು.

ಹೆಚ್ಚು ವಿಶ್ವ ನಾಯಕರನ್ನು ಸೆಳೆಯುವಲ್ಲಿ ಬ್ರಿಕ್ಸ್​ ಯಶಸ್ವಿ: ಕಜಾನ್‌ನಲ್ಲಿ ನಡೆದ ಬ್ರಿಕ್ಸ್ ಶೃಂಗಸಭೆಯು ಗಮನಾರ್ಹ ಸಂಖ್ಯೆಯ ವಿಶ್ವ ನಾಯಕರನ್ನು ಸೆಳೆಯುವಲ್ಲಿ ಯಶಸ್ವಿಯಾಗಿದೆ. ಟಾಟರ್ಸ್ತಾನ್ ರಾಜಧಾನಿ ಇತ್ತೀಚಿನ ವರ್ಷಗಳಲ್ಲಿ ಗಮನಾರ್ಹ ಅಭಿವೃದ್ಧಿ ಕಂಡಿದ್ದು, ಯುರೋಪ್​ನ ಉತ್ತಮ ನಗರಗಳಲ್ಲಿ ಒಂದಾಗಿದೆ ಎಂದರು. ಇದೆ ವೇಳೆ,. ರಷ್ಯಾ ಮತ್ತು ಚೀನಾದ ಹಿತಾಸಕ್ತಿ ಕುರಿತ ಪತ್ರಕರ್ತರ ಪ್ರಶ್ನೆಗೆ ಉತ್ತರಿಸಿದ ಅವರು, ಪರಸ್ಪರ ನಂಬಿಕೆ ಆಧಾರದ ಮೇಲೆ ಕಳೆದೊಂದು ದಶಕದಿಂದ ನಾವು ಉನ್ನತ ಹಂತ ತಲುಪಿದ್ದೇವೆ ಎಂದು ಒತ್ತಿ ಹೇಳಿದರು ಎಂದು ಟಿವಿ ಬ್ರಿಕ್ಸ್​ ವರದಿ ಮಾಡಿದೆ.

Category
ಕರಾವಳಿ ತರಂಗಿಣಿ