image image
ಬ್ರೇಕಿಂಗ್ ನ್ಯೂಸ್
ಬ್ರೇಕಿಂಗ್ ನ್ಯೂಸ್

ಕಾಂಗ್ರೆಸ್​ ವಿರುದ್ಧ ಮುಗಿಬಿದ್ದ I.N.D.I.A ಮಿತ್ರಪಕ್ಷಗಳು

ಕಾಂಗ್ರೆಸ್​ ವಿರುದ್ಧ ಮುಗಿಬಿದ್ದ I.N.D.I.A ಮಿತ್ರಪಕ್ಷಗಳು

ನವದೆಹಲಿ: ವಿದ್ಯುನ್ಮಾನ ಮತಯಂತ್ರಗಳ (EVM) ವಿಶ್ವಾಸಾರ್ಹತೆಯ ಮೇಲೆ ಪದೇ ಪದೇ ಪ್ರಶ್ನೆ ಎತ್ತುತ್ತಿರುವ ಕಾಂಗ್ರೆಸ್​ ವಿರುದ್ಧ I.N.D.I.A ಕೂಟದ ಮಿತ್ರಪಕ್ಷಗಳೇ ತಿರುಗಿಬಿದ್ದಿವೆ. ಇವಿಎಂ ಮೇಲೆ ಅನುಮಾನವಿದ್ದರೆ ಚುನಾವಣೆಯಲ್ಲಿ ಸ್ಪರ್ಧಿಸಬೇಡಿ ಎಂದು ಜಮ್ಮು- ಕಾಶ್ಮೀರದ ನ್ಯಾಷನಲ್​ ಕಾನ್ಫ್​​ರೆನ್ಸ್​ (ಎನ್​ಸಿ) ಹೇಳಿದ ಬೆನ್ನಲ್ಲೇ, ಟಿಎಂಸಿ ಕೂಡ ಕಾಂಗ್ರೆಸ್​ ವಿರುದ್ಧ ಟೀಕೆ ಮಾಡಿದೆ.

ಇವಿಎಂ ಹ್ಯಾಕ್​ ಮಾಡುವ ಬಗ್ಗೆ ಸಾಕ್ಷ್ಯಗಳಿದ್ದರೆ, ಅವುಗಳನ್ನು ಚುನಾವಣಾ ಆಯೋಗಕ್ಕೆ ನೀಡಿ ಆರೋಪ ಸಾಬೀತು ಮಾಡಿ. ಇಲ್ಲವಾದಲ್ಲಿ ಇವು ಕೇವಲ ಹತಾಶೆಯ ಹೇಳಿಕೆಗಳು ಅಷ್ಟೇ ಎಂದು ಬಂಗಾಳ ಸಿಎಂ ಮಮತಾ ಬ್ಯಾನರ್ಜಿ ನೇತೃತ್ವದ ತೃಣಮೂಲ ಕಾಂಗ್ರೆಸ್​ (ಟಿಎಂಸಿ) ಕಿಡಿಕಾರಿದೆ.

ಇವಿಎಂ ವಿರುದ್ಧದ ಆರೋಪಕ್ಕೆ ಪುರಾವೆಯೇನು?: ಟಿಎಂಸಿ ಸಂಸದ ಮತ್ತು ಪಕ್ಷದ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಅಭಿಷೇಕ್ ಬ್ಯಾನರ್ಜಿ ಅವರು ಕಾಂಗ್ರೆಸ್​ ಆರೋಪಗಳ ಬಗ್ಗೆ ಭಿನ್ನಾಭಿಪ್ರಾಯ ವ್ಯಕ್ತಪಡಿಸಿದ್ದು, "ಇವಿಎಂ ಬಗ್ಗೆ ಪ್ರಶ್ನೆ ಎತ್ತುವವರು ತಮ್ಮ ಬಳಿ ಏನಾದರೂ ಪುರಾವೆಗಳು ಇದ್ದಲ್ಲಿ, ಚುನಾವಣಾ ಆಯೋಗಕ್ಕೆ ನೀಡಬೇಕು. ಇವಿಎಂ ಸರಿಯಾಗಿ ಕೆಲಸ ಮಾಡದಿದ್ದರೆ, ಅದನ್ನು ಸಾಕ್ಷ್ಯಸಮೇತ ಪತ್ತೆ ಮಾಡಿ. ಇದು ಬಿಟ್ಟು, ಬರಿಯ ಆರೋಪ ಮಾಡುವುದರಲ್ಲಿ ಯಾವುದೇ ಹುರುಳಿಲ್ಲ" ಎಂದು ಹೇಳಿದ್ದಾರೆ.

"ಇವಿಎಂಗಳನ್ನು ಹ್ಯಾಕ್ ಮಾಡಬಹುದು ಎಂದು ಯಾರಾದರೂ ಭಾವಿಸಿದರೆ, ಅದು ಹೇಗೆ ಹ್ಯಾಕ್ ಮಾಡಬಹುದು ಎಂಬುದನ್ನು ತೋರಿಸಬೇಕು. ಕೇವಲ ಆರೋಪಿತ ಹೇಳಿಕೆಗಳನ್ನು ನೀಡುವ ಮೂಲಕ ಏನನ್ನೂ ಸಾಧಿಸಲು ಸಾಧ್ಯವಿಲ್ಲ" ಎಂದು ಟಿಎಂಸಿ ಸಂಸದ ಟೀಕಿಸಿದರು.

Category
ಕರಾವಳಿ ತರಂಗಿಣಿ