image image
ಬ್ರೇಕಿಂಗ್ ನ್ಯೂಸ್
ಬ್ರೇಕಿಂಗ್ ನ್ಯೂಸ್

ಶರಣಾಗಿ, ಇಲ್ಲವೇ ಭದ್ರತಾ ಸಿಬ್ಬಂದಿಯ ಕಠಿಣ ಕ್ರಮ ಎದುರಿಸಿ

ಶರಣಾಗಿ, ಇಲ್ಲವೇ ಭದ್ರತಾ ಸಿಬ್ಬಂದಿಯ ಕಠಿಣ ಕ್ರಮ ಎದುರಿಸಿ

ಛತ್ತೀಸ್‌ಗಢ : ಶಸ್ತ್ರಾಸ್ತ್ರಗಳನ್ನು ತ್ಯಜಿಸಿ ಮುಖ್ಯವಾಹಿನಿಗೆ ಸೇರುವಂತೆ ನಕ್ಸಲರಿಗೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಮತ್ತೊಮ್ಮೆ ಮನವಿ ಮಾಡಿದರು. ಇಲ್ಲವಾದಲ್ಲಿ ಭದ್ರತಾ ಪಡೆಗಳ ಕ್ರಮಗಳಿಗೆ ಬಲಿಯಾಗಬೇಕಾಗುತ್ತದೆ. ಶರಣಾದ ನಕ್ಸಲರ ಪುನರ್ವಸತಿ ಸರ್ಕಾರದ ಜವಾಬ್ದಾರಿ ಎಂದು ಇದೇ ವೇಳೆ ಭರವಸೆ ನೀಡಿದರು.

ಛತ್ತೀಸ್‌ಗಢದ ಜಗದಲ್‌ಪುರದಲ್ಲಿ ಭಾನುವಾರ ನಡೆದ ಬಸ್ತರ್ ಒಲಿಂಪಿಕ್ಸ್ ಕ್ರೀಡಾಕೂಟದಲ್ಲಿ ಮಾತನಾಡಿದ ಅವರು, ಮಾರ್ಚ್ 31, 2026 ರ ವೇಳೆಗೆ ದೇಶದಲ್ಲಿ ನಕ್ಸಲ್​ವಾದ ಸಂಪೂರ್ಣವಾಗಿ ನಿರ್ನಾಮ ಮಾಡಲಿದ್ದೇವೆ. ಶಸ್ತ್ರಾಸ್ತ್ರ ತ್ಯಜಿಸಿ ಬಂದು, ಶರಣಾದವರಿಗೆ ಸರ್ಕಾರವೇ ಪುನರ್ವಸತಿ ಕಲ್ಪಿಸಿಕೊಡಲಿದೆ ಎಂದು ಹೇಳಿದರು.

2026 ರೊಳಗೆ ದೇಶವನ್ನು ನಕ್ಸಲ್ ಮುಕ್ತಗೊಳಿಸುವ ಪ್ರಧಾನಿ ನರೇಂದ್ರ ಮೋದಿ ಅವರ ಸಂಕಲ್ಪವನ್ನು ಈಡೇರಿಸಲು ಛತ್ತೀಸ್‌ಗಢ ಪೊಲೀಸರು ಬದ್ಧರಾಗಿದ್ದಾರೆ. ಇಲ್ಲಿನ ಪುನರ್ವಸತಿ ನೀತಿ ದೇಶದಲ್ಲೇ ಅತ್ಯುತ್ತಮವಾಗಿದೆ. ನೀವು ಶರಣಾಗಿ ಮುಖ್ಯವಾಹಿನಿಗೆ ಸೇರಿದಲ್ಲಿ, ಛತ್ತೀಸ್‌ಗಢ ಮತ್ತು ದೇಶದ ಅಭಿವೃದ್ಧಿಗೆ ಕೊಡುಗೆ ನೀಡಿದಂತಾಗುತ್ತದೆ ಎಂದು ಅವರು ಹೇಳಿದರು.

ನಕ್ಸಲ್​ ನಿಗ್ರಹ ಕಾರ್ಯಾಚರಣೆ ತೀವ್ರ: ಛತ್ತೀಸ್​ಗಢದಲ್ಲಿ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬರುವ ಮೊದಲು ಕಾಂಗ್ರೆಸ್​ ಆಡಳಿತದಲ್ಲಿ ಮಾವೋವಾದಿಗಳ ವಿರುದ್ಧದ ಕ್ರಮ ಆಮೆಗತಿಯಲ್ಲಿ ಸಾಗುತ್ತಿತ್ತು. ನಮ್ಮ ಪಕ್ಷದ ಸರ್ಕಾರ ಅಧಿಕಾರಕ್ಕೆ ಬಂದ ನಂತರ, ಕಳೆದ ಒಂದು ವರ್ಷದಲ್ಲಿ 287 ನಕ್ಸಲರ ಬೇಟೆ, 992 ನಕ್ಸಲರ ಬಂಧನ ಮತ್ತು 836 ಜನರ ಶರಣಾಗತಿ ಮಾಡಿಸಲಾಗಿದೆ ಎಂದು ಅಂಕಿಅಂಶವನ್ನು ಅಮಿತ್​ ಶಾ ಹಂಚಿಕೊಂಡರು.

ಮೋದಿ ಸರ್ಕಾರ ಅಧಿಕಾರಕ್ಕೆ ಬಂದ ನಂತರ, ಭದ್ರತಾ ಸಿಬ್ಬಂದಿಯ ಸಾವುನೋವಿನ ಪ್ರಮಾಣ ಶೇಕಡಾ 73 ರಷ್ಟು ಕಡಿಮೆಯಾಗಿದೆ. ನಾಗರಿಕರ ಸಾವು ಕೂಡ ಶೇಕಡಾ 70 ರಷ್ಟು ಇಳಿಕೆಯಾಗಿದೆ ಎಂದು ಇದೇ ಸಂದರ್ಭದಲ್ಲಿ ಗೃಹ ಸಚಿವರು ತಿಳಿಸಿದರು.

Category
ಕರಾವಳಿ ತರಂಗಿಣಿ