image image
ಬ್ರೇಕಿಂಗ್ ನ್ಯೂಸ್
ಬ್ರೇಕಿಂಗ್ ನ್ಯೂಸ್

ಮತ್ತೆ ದೆಹಲಿಯತ್ತ ರೈತರು ; ಶಂಭು ಗಡಿಯಲ್ಲಿ ಭಾರಿ ಬಿಗಿ ಬಂದೋಬಸ್ತ್

ಮತ್ತೆ ದೆಹಲಿಯತ್ತ ರೈತರು ; ಶಂಭು ಗಡಿಯಲ್ಲಿ ಭಾರಿ ಬಿಗಿ ಬಂದೋಬಸ್ತ್

ಅಂಬಲಾ: ಹಲವು ಬೇಡಿಕೆಗೆ ಆಗ್ರಹಿಸಿ ​ ರೈತರು ಇಂದು ಮತ್ತೆ ದೆಹಲಿಯತ್ತ ಮೆರವಣಿಗೆ ಹೊರಟಿದ್ದು, ಅಪರಾಹ್ನ 12ರ ಹೊತ್ತಿಗೆ 101 ರೈತರ ಗುಂಪು ಶುಂಭು ಗಡಿಯತ್ತ ಸಾಗಲಿದೆ. ಈ ಹಿನ್ನೆಲೆಯಲ್ಲಿ ಶಂಭು ಗಡಿಯಲ್ಲಿ ಪೊಲೀಸರು ಬಿಗಿ ಭದ್ರತೆ ಕೈಗೊಂಡಿದ್ದಾರೆ. ಹರಿಯಾಣ ಪೊಲೀಸರು ಬಹು ಹಂತದ ಬ್ಯಾರಿಕೇಡ್​ಗಳನ್ನು ಹಾಕಿದ್ದಾರೆ. ಈ ವೇಳೆ, ಕಳೆದ ಬಾರಿಯಂತೆ ರೈತರು ಮತ್ತು ಪೊಲೀಸ್​ ಸಿಬ್ಬಂದಿ ನಡುವೆ ಘರ್ಷಣೆಯಾಗುವ ಸಾಧ್ಯತೆ ತಳ್ಳಿಹಾಕುವಂತಿಲ್ಲ.

ರೈತರು ಈ ಹಿಂದೆ ಎರಡು ಬಾರಿ ದೆಹಲಿಯತ್ತ ಮೆರವಣಿಗೆ ಕೈಗೊಂಡರೂ ಇವು ಯಶಸ್ವಿಯಾಗಿಲ್ಲ. ಶಂಭುಗಡಿ ಬಳಿಯೇ ಪೊಲೀಸರು ರೈತರನ್ನು ತಡೆದು ನಿಲ್ಲಿಸಿದರು. ಈ ಕುರಿತು ಮಾತನಾಡಿರುವ ರೈತ ನಾಯಕ ಸರ್ವನ್​ ಸಿಂಗ್​ ಪಂಧೇರ್​​, ನಾವು ಸರ್ಕಾರದೊಂದಿಗೆ ಮಾತನಾಡಲು ಸಮಯ ನೀಡಿದ್ದೇವೆ. ಆದರೆ, ಸರ್ಕಾರ ನಮ್ಮ ಬೇಡಿಕೆಗಳನ್ನು ಆಲಿಸುತ್ತಿಲ್ಲ. ಈ ಹಿನ್ನೆಲೆಯಲ್ಲಿ ದೆಹಲಿಯತ್ತ ಕಾಲ್ನಡಿಗೆ ಮೆರವಣಿಗೆಗೆ ಮುಂದಾಗಿದ್ದೇವೆ. ನಾವು ಶಾಂತಿಯುತ ಹೋರಾಟಕ್ಕೆ ಮುಂದಾದರೂ ಸರ್ಕಾರ ಮತ್ತು ಆಡಳಿತ ನಮ್ಮನ್ನು ದೆಹಲಿಯತ್ತ ಸಾಗಲು ಬಿಡುತ್ತಿಲ್ಲ ಎಂದು ಕಿಡಿಕಾರಿದರು.

ಹರಿಯಾಣ ಪಂಜಾಬ್ ಮತ್ತು ದೆಹಲಿ ಗಡಿಯಲ್ಲಿ ಭದ್ರತೆಯನ್ನು ಬಿಗಿಗೊಳಿಸಲಾಗಿದೆ. ಹರಿಯಾಣ ಪೊಲೀಸರು ಅಂಬಲಾದ ಶಂಭು ಗಡಿಯಲ್ಲಿ ಹಲವು ಹಂತದ ಬ್ಯಾರಿಕೇಡ್ ಹಾಕಿದ್ದು​, ಮತ್ತು ಕಾಂಕ್ರಿಟ್​ ಗೋಡೆ ನಿರ್ಮಾಣ ಮಾಡುವ ಮೂಲಕ ರೈತರು ಮುಂದೆ ಸಾಗದಂತೆ ತಡೆಯಬಹುದು.

Category
ಕರಾವಳಿ ತರಂಗಿಣಿ