image image
ಬ್ರೇಕಿಂಗ್ ನ್ಯೂಸ್
ಬ್ರೇಕಿಂಗ್ ನ್ಯೂಸ್

ಇಸ್ಲಾಮಿಕ್ ಬಂಡುಕೋರ ಪಡೆಗಳು ಸಿರಿಯಾದ ರಾಜಧಾನಿ ಡಮಾಸ್ಕಸ್ ಮೇಲೆ ನಿಯಂತ್ರಣ

ಇಸ್ಲಾಮಿಕ್ ಬಂಡುಕೋರ ಪಡೆಗಳು ಸಿರಿಯಾದ ರಾಜಧಾನಿ ಡಮಾಸ್ಕಸ್ ಮೇಲೆ ನಿಯಂತ್ರಣ

 

ಡಮಾಸ್ಕಸ್: ನಿರಂತರ ಒಂದು ವಾರ ಕಾಲ ಹೋರಾಟದ ನಂತರ ಸಿರಿಯಾ ರಾಜಧಾನಿ ಡಮಾಸ್ಕಸ್ ಮೇಲೆ ಸಿರಿಯನ್ ಬಂಡುಕೋರ ಪಡೆಗಳು ಸಂಪೂರ್ಣ ನಿಯಂತ್ರಣ ಸಾಧಿಸಿವೆ. ಸರ್ಕಾರಿ ಪಡೆಗಳು ತಮಗೆ ಯಾವುದೇ ಪ್ರತಿರೋಧ ಒಡ್ಡಲಿಲ್ಲ ಎಂದು ಬಂಡುಕೋರ ಪಡೆಗಳು ಹೇಳಿಕೊಂಡಿವೆ. ಏತನ್ಮಧ್ಯೆ ಅಧ್ಯಕ್ಷ ಬಶರ್ ಅಲ್- ಅಸಾದ್ ದೇಶದಿಂದ ಪಲಾಯನ ಮಾಡಿದ್ದಾರೆ ಎಂದು ವರದಿಗಳು ಹೇಳಿವೆ.

24 ವರ್ಷಗಳ ಕಾಲ ದೇಶವನ್ನು ತನ್ನ ಬಿಗಿ ಹಿಡಿತದಲ್ಲಿಟ್ಟುಕೊಂಡಿದ್ದ ಅಸ್ಸಾದ್ ವಿಮಾನದಲ್ಲಿ ಅಜ್ಞಾತ ಸ್ಥಳಕ್ಕೆ ಪಲಾಯನ ಮಾಡಿದ್ದಾರೆ ಎಂದು ಹಿರಿಯ ಸಿರಿಯನ್ ಮಿಲಿಟರಿ ಅಧಿಕಾರಿಗಳು ರಾಯಿಟರ್ಸ್​ಗೆ ತಿಳಿಸಿದ್ದಾರೆ. ಸಿರಿಯಾದಲ್ಲಿ ಅಸ್ಸಾದ್ ಆಡಳಿತ ಕೊನೆಗೊಂಡಿದೆ ಸೇನಾ ಕಮಾಂಡ್ ಅಧಿಕಾರಿಗಳಿಗೆ ಮಾಹಿತಿ ನೀಡಿದೆ ಎಂದು ವರದಿಯಾಗಿದೆ.

"ದಬ್ಬಾಳಿಕೆಯ ಆಡಳಿತಗಾರ ಬಶರ್ ಅಲ್-ಅಸ್ಸಾದ್ ಪಲಾಯನ ಮಾಡಿದ್ದಾರೆ. ನಾವು ಡಮಾಸ್ಕಸ್ ಅನ್ನು ಬಶರ್ ಅಲ್-ಅಸ್ಸಾದ್​ನ ನಿರಂಕುಶ ಆಡಳಿತದಿಂದ ಮುಕ್ತಗೊಳಿಸಿದ್ದೇವೆ" ಎಂದು ಬಂಡುಕೋರರು ಘೋಷಿಸಿದ್ದಾರೆ

Category
ಕರಾವಳಿ ತರಂಗಿಣಿ