image image
ಬ್ರೇಕಿಂಗ್ ನ್ಯೂಸ್
ಬ್ರೇಕಿಂಗ್ ನ್ಯೂಸ್

ಎಸ್​ಡಿಎಆರ್​ಎಫ್​ಗೆ ಮತ್ತಷ್ಟು ಬಲ; ನುರಿತ 2000 ಸಿಬ್ಬಂದಿಗಳು

ಎಸ್​ಡಿಎಆರ್​ಎಫ್​ಗೆ ಮತ್ತಷ್ಟು ಬಲ; ನುರಿತ 2000 ಸಿಬ್ಬಂದಿಗಳು

ಹೈದರಾಬಾದ್​: ವಿಪತ್ತು ನಿರ್ವಹಣೆಗೆ ಉನ್ನತಮಟ್ಟದ ಕಾರ್ಯಾಚರಣೆಗೆ ಸಜ್ಜಾಗುವ ಹಾಗೂ ಯಾವುದೇ ಪರಿಸ್ಥಿತಿ ಎದುರಿಸುವ ನಿಟ್ಟಿನಲ್ಲಿ ಸಮರ್ಥ ಪಡೆ ಕಟ್ಟಲು ತೆಲಂಗಾಣ ಸರ್ಕಾರ ಮುಂದಾಗಿದೆ. ಇದೇ ಉದ್ದೇಶದಿಂದ ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆ ರೀತಿಯಲ್ಲಿಯೇ ರಾಜ್ಯ ವಿಪತ್ತು ನಿರ್ವಹಣೆ ಪಡೆಯ ತರಬೇತಿ ರೀತಿಯ ವಿಶೇಷ ಪಡೆಯನ್ನು ತೆಲಂಗಾಣ ಸರ್ಕಾರ ರಚಿಸಿದೆ.

ಈ ಹೊಸ ಘಟಕದಲ್ಲಿ 2,000 ಮಂದಿ ಹೆಚ್ಚಿನ ತರಬೇತಿ ಸಿಬ್ಬಂದಿಗಳಾಗಿದ್ದು, ಅವರು ಪ್ರವಾಹ, ಭೂಕಂಪ ಅದರಲ್ಲೂ ಅಗ್ನಿ ವಿಪತ್ತಿನ ತುರ್ತು ಸಂದರ್ಭದಲ್ಲಿ ಸಮರ್ಥವಾಗಿ, ಪರಿಣಾಮಕಾರಿಯಾಗಿ ಈ ಪಡೆ ಕಾರ್ಯ ನಿರ್ವಹಿಸಲಿದೆ. ಈ ಎಸ್​ಡಿಆರ್​ಎಫ್​ ಪಡೆಗೆ ಇಂದು ಸಿಎಂ ರೇವಂತ್​ ರೆಡ್ಡಿ ಔಪಚಾರಿಕವಾಗಿ ಚಾಲನೆ ನೀಡಿದ್ದು, ಇದು ರಾಜ್ಯ ವಿಪತ್ತು ಸನ್ನದ್ಧತೆಯಲ್ಲಿ ಗಮನಾರ್ಹ ಹೆಜ್ಜೆಯಾಗಿದೆ ಎಂದರು.

ರಕ್ಷಣಾ ಕಾರ್ಯದಲ್ಲಿನ ಅಂತರ ನಿರ್ಮೂಲನೆ: ವಾಹನ ಪಲ್ಟಿ ಅಥವಾ ಕಟ್ಟಡ ಕುಸಿತದಂತಹ ಬಿಕಟ್ಟಿನ ಸಂದರ್ಭದಲ್ಲಿ ತಕ್ಷಣಕ್ಕೆ ಜೀವನ ರಕ್ಷಣೆ ನಿರ್ಣಾಯಕವಾಗಿದೆ. ಇದನ್ನು ಅರ್ಥೈಸಿಕೊಂಡು ತೆಲಂಗಾಣ ಸರ್ಕಾರ 35.03 ಕೋಟಿ ರೂ. ವೆಚ್ಚದಲ್ಲಿ ಆಧುನಿಕ ಅಗ್ನಿ ಇಲಾಖೆ ನಿರ್ಮಾಣ ಮಾಡಿದ್ದು, ಇದಕ್ಕಾಗಿ ಅತ್ಯಾಧುನಿಕ ಸಾಧನಗಳ ಮತ್ತು ನುರಿತ ಸಿಬ್ಬಂದಿ ಹಾಗೂ ಸಮರ್ಪಕವಾಗಿ ವಿಪತ್ತು ನಿರ್ವಹಿಸುವ ಸಮರ್ಥ ತಂಡವೊಂದನ್ನು ಕಟ್ಟಿದೆ.

ಸಮಗ್ರ ತರಬೇತಿ ಮತ್ತು ಸಾಧನ: ಎಸ್​ಡಿಆರ್​ಎಫ್​ ತೆಲಂಗಾಣ ಅಗ್ನಿ ವಿಭಾಗದಲ್ಲಿ 1,000 ಸಿಬ್ಬಂದಿಗಳಿದ್ದು, ತಮಿಳುನಾಡಿನ ಅರಕೊನಂ, ಮಹಾರಾಷ್ಟ್ರದ ಪುಣೆ, ಗುಜರಾತ್​ನ ವಡೋದರ, ಒಡಿಶಾದ ಮುಂಡಲಿ, ಆಂಧ್ರ ಪ್ರದೇಶದ ಎನ್​ಡಿಆರ್​ಎಫ್​ ಕೇಂದ್ರದಲ್ಲಿ ತರಬೇತಿ ನೀಡಲಾಗಿದೆ.

ಏನೆಲ್ಲ ವ್ಯವಸ್ಥೆ ಈ ಪಡೆಗಳಲ್ಲಿದೆ: ಬಸ್​, ಟ್ರಕ್​ ಮತ್ತು ಬೊಲೆರೊದ 20 ವಾಹನ ಮತ್ತು 40 ರಕ್ಷಣಾ ಬೋಟ್​ ಕೊಳ್ಳಲಾಗಿದೆ. ವಾಟರ್​ಪ್ರೂಫ್​ ಜಾಕೆಟ್​, ಎಲ್​ಇಡಿ ಲೈಟ್​ ಜೊತೆಗೆ ಹೆಲ್ಮೆಟ್​, ಪ್ರವಾಹ ನೀರಿನ ಕಾರ್ಯಾಚರಣೆಯಲ್ಲಿ ಫೇಸ್​ ಶೀಲ್ಡ್​ ಸೇರಿದಂತೆ 67 ಬಗೆಯ ಸುಧಾರಿತ ಸಾಧನಗಳನ್ನ ನೀಡಲಾಗಿದೆ.

Category
ಕರಾವಳಿ ತರಂಗಿಣಿ