image image
ಬ್ರೇಕಿಂಗ್ ನ್ಯೂಸ್
ಬ್ರೇಕಿಂಗ್ ನ್ಯೂಸ್

ಭಾರತದ ಇತಿಹಾಸದ ಅತ್ಯಂತ ಸಂಕೀರ್ಣ ವ್ಯಕ್ತಿ ಟಿಪ್ಪು ಸುಲ್ತಾನ್ -ಕೇಂದ್ರ ಸಚಿವ ಜೈ ಶಂಕ‌ರ್

ಭಾರತದ ಇತಿಹಾಸದ ಅತ್ಯಂತ ಸಂಕೀರ್ಣ ವ್ಯಕ್ತಿ ಟಿಪ್ಪು ಸುಲ್ತಾನ್ -ಕೇಂದ್ರ ಸಚಿವ ಜೈ ಶಂಕ‌ರ್

ಭಾರತದ ಇತಿಹಾಸದಲ್ಲೇ ಅತ್ಯಂತ ಸಂಕೀರ್ಣ ವ್ಯಕ್ತಿ ಟಿಪ್ಪು ಸುಲ್ತಾನ್. ಒಂದು ಕಡೆ ಬ್ರಿಟಿಷರ ವಿರುದ್ಧ ಹೋರಾಡಿದ ಕೀರ್ತಿ ಹೊಂದಿದ್ದರೆ ಮತ್ತೊಂದೆಡೆ ಅವರ ಆಡಳಿತದಲ್ಲಿ ನರಳಿದವರು ಇದ್ದಾರೆ ಎಂದು ಕೇಂದ್ರ ಸಚಿವ ಜೈ ಶಂಕ‌ರ್ ಹೇಳಿದ್ದಾರೆ.

ಇತಿಹಾರಕಾರ ವಿಕ್ರಂ ಸಂಪತ್ ರಚಿತ ಟಿಪ್ಪು ಸುಲ್ತಾನ್: 'ದಿ ಸಗಾ ಆಫ್ ದಿ ಮೈಸೂರು ಇಂಟರ್‌ರೆಗ್ನಮ್ ಕೃತಿಯನ್ನು ಭಾನುವಾರ ದೆಹಲಿಯಲ್ಲಿ ಅನಾವರಣಗೊಳಿಸಿದ ನಂತರ ಮಾತನಾಡಿದ ಅವರು, ಟಿಪ್ಪು ಸುಲ್ತಾನ್ ಆಡಳಿತದಲ್ಲಿ ಅವರ ಎರಡು ಮುಖಗಳು ಕಾಣುತ್ತವೆ ಎಂದರು.

ಭಾರತದಲ್ಲಿ ಬ್ರಿಟಿಷರ ಆಡಳಿತ ಹೋರಾಡಿದ ಕೀರ್ತಿ ಟಿಪ್ಪು ಸುಲ್ತಾನ್ ಅವರದ್ದು. ಆದರೆ ಅವರ ಆಡಳಿತದ ದುಷ್ಪರಿಣಾಮಗಳನ್ನು ಮೈಸೂರು ಭಾಗದಲ್ಲಿ ಈಗಲೂ ಕಾಣಬಹುದು ಎಂದು ಅವರು ಹೇಳಿದರು

ಮೈಸೂರಿನ ಹಲವು ಪ್ರದೇಶಗಳಲ್ಲಿ ಅವರ ಬಗ್ಗೆ ಉತ್ತಮ ಗ್ರಹಿಕೆ ಅಥವಾ ಭಾವನೆ ಇಲ್ಲ. ಭಾರತೀಯ ಇತಿಹಾಸದಲ್ಲಿ ಬ್ರಿಟಿಷರೊಂದಿಗಿನ ಅವರ ಹೋರಾಟಕ್ಕೆ ಹೆಚ್ಚಿನ ಗಮನ ನೀಡಲಾಯಿತು. ಹಾಗಾಗಿ ಅವರ ಆಳ್ವಿಕೆಯ ಇತರ ಅಂಶಗಳನ್ನು ಗಣನೆಗೆ ತೆಗೆದುಕೊಳ್ಳಲಿಲ್ಲ ಎಂದು ಹೇಳಿದರು.

Category
ಕರಾವಳಿ ತರಂಗಿಣಿ