image image
ಬ್ರೇಕಿಂಗ್ ನ್ಯೂಸ್
ಬ್ರೇಕಿಂಗ್ ನ್ಯೂಸ್

ಮುಂದಿನ ಸಿಎಂ ಯಾರು ಎಂಬುದು ನಮ್ಮಲ್ಲಿ ಇನ್ನೂ ನಿರ್ಧಾರವಾಗಿಲ್ಲ- ಡಿಸಿಎಂ ದೇವೇಂದ್ರ ಫಡ್ನವಿಸ್

ಮುಂದಿನ ಸಿಎಂ ಯಾರು ಎಂಬುದು ನಮ್ಮಲ್ಲಿ ಇನ್ನೂ ನಿರ್ಧಾರವಾಗಿಲ್ಲ- ಡಿಸಿಎಂ ದೇವೇಂದ್ರ ಫಡ್ನವಿಸ್

ಮಹಾರಾಷ್ಟ್ರ : ವಿಧಾನಸಭಾ ಚುನಾವಣೆಯಲ್ಲಿ ಮಹಾಯುತಿ ಒಕ್ಕೂಟದ ಭರ್ಜರಿ ಗೆಲುವಿನ ಬಳಿಕ ಮುಂದಿನ ಮುಖ್ಯಮಂತ್ರಿ ಯಾರು ಎಂಬ ಪ್ರಶ್ನೆ ಎದುರಾಗಿದ್ದು, ಈ ಪ್ರಶ್ನೆಗೆ ಡಿಸಿಎಂ ದೇವೇಂದ್ರ ಫಡ್ನವಿಸ್ ಪ್ರತಿಕ್ರಿಯೆ ನೀಡಿದ್ದಾರೆ. ಮುಂದಿನ ಸಿಎಂ ಯಾರು ಎಂಬುದು ನಮ್ಮಲ್ಲಿ ಇನ್ನೂ ನಿರ್ಧಾರವಾಗಿಲ್ಲ. ಆದರೆ ಮೂರೂ ಪಕ್ಷಗಳು ಒಗ್ಗಟ್ಟಿನಿಂದ ಈ ಬಗ್ಗೆ ನಿರ್ಧಾರ ತೆಗೆದುಕೊಳ್ಳುತ್ತೇವೆ ಎಂದು ಹೇಳಿದ್ದಾರೆ

ಸಿಎಂ ಸ್ಥಾನದ ಬಗ್ಗೆ ನಾವು ಚುನಾವಣೆಗೆ ಮುಂಚೆಯೇ ನಿರ್ಧಾರ ಮಾಡಿದ್ದೆವು. ಚುನಾವಣೆಯ ಬಳಿಕ ಮೂರೂ ಪಕ್ಷಗಳ ಒಮ್ಮತದ ನಿರ್ಣಯವನ್ನು ಅಂಗೀಕರಿಸಬೇಕೆಂದು ತೀರ್ಮಾನಿಸಿದ್ದೆವು. ಸಿಎಂ ಸ್ಥಾನದ ಬಗ್ಗೆ ನಮ್ಮಲ್ಲಿ ಈಗಲೂ ಯಾವುದೇ ವಿವಾದವಿಲ್ಲ ಎಂದು ಫಡ್ನವಿಸ್ ಹೇಳಿದ್ದಾರೆ.

ನಾವು ಮೂರೂ ಪಕ್ಷಗಳ ಮುಖಂಡರು ತೆಗೆದುಕೊಳ್ಳುವ ನಿರ್ಧಾರಕ್ಕೆ ಎಲ್ಲಾ ಕಾರ್ಯಕರ್ತರೂ, ಜನರೂ ಬದ್ದವಾಗಿರಲಿದ್ದಾರೆ ಎಂದು ನುಡಿದ ಫಡ್ನವಿಸ್, ನಾನು ಆಧುನಿಕ ಅಭಿಮನ್ಯು ಎಂದು ಮೊದಲೇ ಹೇಳಿದ್ದೆ. ಚಕ್ರವ್ಯೂಹವನ್ನು ಹೇಗೆ ಬೇಧಿಸಬೇಕೆಂದು ನನಗೆ ಗೊತ್ತು ಎಂದು ಮಾರ್ಮಿಕವಾಗಿ ನುಡಿದರು. ಈ ದಿಗ್ವಿಜಯದಲ್ಲಿ ನನ್ನ ಪಾಲು ತೀರಾ ಕಡಿಮೆ. ಇದೊಂದು ಸಮೂಹ ಸಂಘಟನೆಯ ಪ್ರಯತ್ನ ಎಂದು ದೇವೇಂದ್ರ ಫಡ್ನವಿಸ್ ಹೇಳಿದರು.

Category
ಕರಾವಳಿ ತರಂಗಿಣಿ