image image
ಬ್ರೇಕಿಂಗ್ ನ್ಯೂಸ್
ಬ್ರೇಕಿಂಗ್ ನ್ಯೂಸ್

DRDO ವಿಜ್ಞಾನಿಗಳಿಂದ ಅತ್ಯಾಧುನಿಕ ಕಣ್ಗಾವಲು ತಂತ್ರಜ್ಞಾನಗಳ ಅನಾವರಣ

DRDO ವಿಜ್ಞಾನಿಗಳಿಂದ ಅತ್ಯಾಧುನಿಕ ಕಣ್ಗಾವಲು ತಂತ್ರಜ್ಞಾನಗಳ ಅನಾವರಣ

 

ಬೆಂಗಳೂರು: 27ನೇ ಬೆಂಗಳೂರು ತಂತ್ರಜ್ಞಾನ ಶೃಂಗಸಭೆಯಲ್ಲಿ, ಭಾರತದ ರಕ್ಷಣಾ ವಿಮಾನಯಾನ ಕ್ಷೇತ್ರದಲ್ಲಿ ಅತ್ಯಾಧುನಿಕ ಮಾದರಿಗಳು ಹಾಗೂ ಕಣ್ಗಾವಲು ತಂತ್ರಜ್ಞಾನಗಳನ್ನು ಡಿಆರ್​​ಡಿಒ ವಿಜ್ಞಾನಿಗಳು ಅನಾವರಣಗೊಳಿಸಿದರು.

ಈ ಕುರಿತು ಡಿಆರ್​​ಡಿಒ ವಿಜ್ಞಾನಿಗಳಾದ ಸತೀಶ್ ಕುಮಾರ್ ಮತ್ತು ಪ್ರಜ್ಞಾ ಅವರು 'ಈಟಿವಿ ಭಾರತ'ದ ಜೊತೆ ಮಾತನಾಡಿ, ''ಗುಪ್ತಚರ, ಕಣ್ಗಾವಲು, ವಿಚಕ್ಷಣೆ, ಮಲ್ಟಿ-ಮೋಡ್ ಮ್ಯಾರಿಟೈಮ್ ಏರ್‌ಕ್ರಾಫ್ಟ್, ಏರ್‌ಬೋರ್ನ್ ಅರ್ಲಿ ವಾರ್ನಿಂಗ್ ಮತ್ತು ಕಂಟ್ರೋಲ್ ಪ್ಲಾಟ್‌ಫಾರ್ಮ್‌ಗಳನ್ನು ಬೆಂಗಳೂರು ತಂತ್ರಜ್ಞಾನ ಶೃಂಗಸಭೆಯಲ್ಲಿ ಪ್ರದರ್ಶನಕ್ಕೆ ಇಡಲಾಗಿದೆ'' ಎಂದು ತಿಳಿಸಿದರು.

ಯುದ್ಧದಲ್ಲಿ ಆಧುನಿಕ ತಂತ್ರಜ್ಞಾನದ ಕಾರ್ಯತಂತ್ರದ ಮಹತ್ವ ವಿವರಿಸಿದ ಡಾ.ಸತೀಶ್ ಕುಮಾರ್, ''ಡಿಆರ್​​ಡಿಒ ತಂತ್ರಜ್ಞಾನಗಳು ಯುದ್ಧಭೂಮಿಯಲ್ಲಿ ಗುಪ್ತಚರ ಮಾಹಿತಿಯನ್ನು ಸಂಗ್ರಹಿಸುವ ಮತ್ತು ವಿಶ್ಲೇಷಿಸುವ ವಿಧಾನವನ್ನು ಕ್ರಾಂತಿಯಾಗಿಸಿದೆ. ಈ ಉಪಕ್ರಮಗಳು ನೈಜ - ಸಮಯದ ಗುಪ್ತಚರವನ್ನು ಒದಗಿಸುವ ಗುರಿ ಹೊಂದಿವೆ. ಹಲವು ವಿಧದ ಅನಿರ್ದಿಷ್ಟ ವಾತಾವರಣವನ್ನು ಪರಿಣಾಮಕಾರಿಯಾಗಿ ಮೇಲ್ವಿಚಾರಣೆ ಮಾಡಲಿದೆ. ಅಲ್ಲದೆ, ಭಾರತೀಯ ವಾಯುಪಡೆಯ ಸಾಮರ್ಥ್ಯ ಹೆಚ್ಚಿಸುತ್ತಿವೆ'' ಎಂದರು.

''ಬೊಂಬಾರ್ಡಿಯರ್ ಗ್ಲೋಬಲ್ 6000 ಮತ್ತು ಗಲ್ಫ್‌ಸ್ಟ್ರೀಮ್ G550 ಅನ್ನು ಸ್ಪರ್ಧಿಗಳಾಗಿ ಹೊಂದಿರುವ ನಾವು ಕೂಡ ಹಲವು ಜಾಗತಿಕ ಟೆಂಡರ್ ಪ್ರಕ್ರಿಯೆಗಳನ್ನು ಅಂತಿಮಗೊಳಿಸಲಿದ್ದೇವೆ. ಈ ಪ್ಲಾಟ್‌ಫಾರ್ಮ್‌ಗಳು, ಭಾರತದ ನೆಟ್‌ವರ್ಕ್-ಕೇಂದ್ರಿತ ಯುದ್ಧ ಸಾಮರ್ಥ್ಯಗಳನ್ನು ಹೆಚ್ಚಿಸಲಿದ್ದೇವೆ'' ಎಂದು ಮಾಹಿತಿ ನೀಡಿದರು.

Category
ಕರಾವಳಿ ತರಂಗಿಣಿ