image image
ಬ್ರೇಕಿಂಗ್ ನ್ಯೂಸ್
ಬ್ರೇಕಿಂಗ್ ನ್ಯೂಸ್

ಉಕ್ರೇನ್​​ನ ವಿದ್ಯುತ್ ಸ್ಥಾವರಗಳ ಮೇಲೆ ರಷ್ಯಾ ಬೃಹತ್ ದಾಳಿ: ಇಂಧನ, ಮೂಲಸೌಕರ್ಯಗಳಿಗೆ ಅಪಾರ ಹಾನಿ

ಉಕ್ರೇನ್​​ನ ವಿದ್ಯುತ್ ಸ್ಥಾವರಗಳ ಮೇಲೆ ರಷ್ಯಾ ಬೃಹತ್ ದಾಳಿ: ಇಂಧನ, ಮೂಲಸೌಕರ್ಯಗಳಿಗೆ ಅಪಾರ ಹಾನಿ

ಮಾಸ್ಕೊ: ರಷ್ಯಾ ಮತ್ತು ಉಕ್ರೇನ್ ಮಧ್ಯದ ಯುದ್ಧವು 1,000 ದಿನಗಳ ಗಡಿಯನ್ನು ಸಮೀಪಿಸುತ್ತಿರುವ ಮಧ್ಯೆ ರಷ್ಯಾ ಭಾನುವಾರ ಉಕ್ರೇನ್​​ನ ಇಂಧನ ಮೂಲಸೌಕರ್ಯ ಮತ್ತು ಇತರ ಗುರಿಗಳ ಮೇಲೆ ತನ್ನ ಅತಿದೊಡ್ಡ ಕ್ಷಿಪಣಿ ಮತ್ತು ಡ್ರೋನ್ ದಾಳಿಗಳನ್ನು ಪ್ರಾರಂಭಿಸಿದೆ. ಕ್ರೆಮ್ಲಿನ್ ಪಡೆಗಳು ಹೈಪರ್ ಸಾನಿಕ್ ಸಿರ್ಕಾನ್ಸ್ ಮತ್ತು ಕಿಂಜಾಲ್​ಗಳು ಸೇರಿದಂತೆ ಸುಮಾರು 120 ಕ್ರೂಸ್, ಬ್ಯಾಲಿಸ್ಟಿಕ್ ಮತ್ತು ಏರೋಬ್ಯಾಲಿಸ್ಟಿಕ್ ಕ್ಷಿಪಣಿಗಳನ್ನು ಮತ್ತು 90 ಡ್ರೋನ್​ಗಳನ್ನು ಹಾರಿಸಿವೆ ಎಂದು ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಜೆಲೆನ್ ಸ್ಕಿ ತನ್ನ ಟೆಲಿಗ್ರಾಮ್ ಪೋಸ್ಟ್​ನಲ್ಲಿ ತಿಳಿಸಿದ್ದಾರೆ.

ಉಕ್ರೇನ್ ನ ಮಿಲಿಟರಿ-ಕೈಗಾರಿಕಾ ಕಾರ್ಯಾಚರಣೆಗಳನ್ನು ಬೆಂಬಲಿಸುವ ಮಿಲಿಟರಿ ವಾಯುನೆಲೆಗಳು, ಅನಿಲ ಉತ್ಪಾದನಾ ಸೌಲಭ್ಯಗಳು ಮತ್ತು ಇಂಧನ ಮೂಲಸೌಕರ್ಯಗಳ ಮೇಲೆ ದಾಳಿ ನಡೆಸಿರುವುದಾಗಿ ರಷ್ಯಾದ ರಕ್ಷಣಾ ಸಚಿವಾಲಯ ಹೇಳಿಕೊಂಡಿದೆ. 

ಡಿಟಿಇಕೆ ನಿರ್ವಹಿಸುವ ಹಲವಾರು ಥರ್ಮೋಎಲೆಕ್ಟ್ರಿಕ್ ವಿದ್ಯುತ್ ಸ್ಥಾವರಗಳು ತೀವ್ರವಾಗಿ ಹಾನಿಗೊಳಗಾಗಿವೆ ಎಂದು ಇಂಧನ ಕಂಪನಿ ಟೆಲಿಗ್ರಾಮ್​​ನಲ್ಲಿ ತಿಳಿಸಿದೆ. ಇದು ಈ ವರ್ಷ ತನ್ನ ಸೌಲಭ್ಯಗಳ ಮೇಲೆ ನಡೆದ ಎಂಟನೇ ದೊಡ್ಡ ಪ್ರಮಾಣದ ದಾಳಿಯಾಗಿದೆ ಎಂದು ಅದು ಹೇಳಿದೆ. ಎಷ್ಟು ಸ್ಥಾವರಗಳಿಗೆ ಹಾನಿಯಾಗಿದೆ ಎಂಬುದನ್ನು ಅದು ನಿರ್ದಿಷ್ಟವಾಗಿ ತಿಳಿಸಿಲ್ಲ.

ರಾಷ್ಟ್ರವ್ಯಾಪಿ ತುರ್ತು ವಿದ್ಯುತ್ ಕಡಿತವನ್ನು ಘೋಷಿಸಲಾಗಿದೆ ಎಂದು ಇಂಧನ ಸಚಿವ ಜರ್ಮನ್ ಗಲುಶ್ಚೆಂಕೊ ಫೇಸ್ ಬುಕ್​ನಲ್ಲಿ ತಿಳಿಸಿದ್ದಾರೆ.

Category
ಕರಾವಳಿ ತರಂಗಿಣಿ