image image
ಬ್ರೇಕಿಂಗ್ ನ್ಯೂಸ್
ಬ್ರೇಕಿಂಗ್ ನ್ಯೂಸ್

ಪ್ರವಾಹ ಪೀಡಿತ ನೈಜೀರಿಯಾಗೆ ಭಾರತದಿಂದ 15 ಟನ್ ಪರಿಹಾರ ಸಾಮಗ್ರಿ ರವಾನೆ

ಪ್ರವಾಹ ಪೀಡಿತ ನೈಜೀರಿಯಾಗೆ ಭಾರತದಿಂದ 15 ಟನ್ ಪರಿಹಾರ ಸಾಮಗ್ರಿ ರವಾನೆ

ನವದೆಹಲಿ: ಭೀಕರ ಪ್ರವಾಹದಿಂದ ತತ್ತರಿಸಿರುವ ನೈಜೀರಿಯಾಕ್ಕೆ ಭಾರತವು  15 ಟನ್ ಪರಿಹಾರ ಸಾಮಗ್ರಿಗಳನ್ನು ಕಳುಹಿಸಿದೆ. ಇದಲ್ಲದೇ ಮುಂದಿನ ದಿನಗಳಲ್ಲಿ ನೈಜೀರಿಯಾಗೆ ಇನ್ನೂ 60 ಟನ್ ಪರಿಹಾರ ಸಾಮಗ್ರಿ ಕಳುಹಿಸಲಾಗುವುದು ಎಂದು ಭರವಸೆ ನೀಡಿದೆ.

 ಸಾಮಾಜಿಕ‌ ಜಾಲತಾಣ ಎಕ್ಸ್ ನಲ್ಲಿ ಪೋಸ್ಟ್ ಮಾಡಿರುವ ವಿದೇಶಾಂಗ ವ್ಯವಹಾರಗಳ ಸಚಿವಾಲಯ (ಎಂಇಎ) "ಮಾನವೀಯ ನೆರವು ನೀಡಲು ಭಾರತ ಬದ್ಧವಾಗಿದೆ. ನೈಜೀರಿಯಾದಲ್ಲಿ ಸಂಭವಿಸಿದ ವಿನಾಶಕಾರಿ ಪ್ರವಾಹ ಪೀಡಿತರಿಗೆ ಸಹಾಯ ಮಾಡಲು ಭಾರತವು 15 ಟನ್ ಸಾಮಗ್ರಿ ಕಳುಹಿಸಿದೆ. ಇನ್ನೂ 60 ಟನ್ ನೆರವನ್ನು ಸೂಕ್ತ ಸಮಯದಲ್ಲಿ ಕಳುಹಿಸಲಾಗುವುದು." ಎಂದು ಹೇಳಿದ್ದಾರೆ.

ಈ ಮಾನವೀಯ ನೆರವು ಆಹಾರ, ಮಲಗುವ ಚಾಪೆಗಳು, ಕಂಬಳಿಗಳು, ನೀರು ಶುದ್ಧೀಕರಣ ಉಪಕರಣಗಳು ಮತ್ತು ಇತರ ಪರಿಹಾರ ವಸ್ತುಗಳನ್ನು ಒಳಗೊಂಡಿದೆ ಎಂದು ಎಂಇಎ ಪೋಸ್ಟ್ ತಿಳಿಸಿದೆ.

ನೈಜೀರಿಯಾದ 36 ರಾಜ್ಯಗಳ ಪೈಕಿ 34 ರಾಜ್ಯಗಳು ಪ್ರವಾಹಕ್ಕೆ ತುತ್ತಾಗಿವೆ ಮತ್ತು ದೇಶದ 774 ಸ್ಥಳೀಯ ಸರ್ಕಾರಿ ಪ್ರದೇಶಗಳ ಪೈಕಿ 217 ರಾಜ್ಯಗಳು ಬಾಧಿತವಾಗಿವೆ ಎಂದು ಹಿರಿಯ ಅಧಿಕಾರಿ ಉಲ್ಲೇಖಿಸಿದರು. ವಿನಾಶಕಾರಿ ಪ್ರವಾಹದಿಂದ ಕನಿಷ್ಠ 7,40,743 ಜನ ಸ್ಥಳಾಂತರಗೊಂಡಿದ್ದಾರೆ. 2,81,000 ಮನೆಗಳು ಹಾಳಾಗಿದ್ದು ಮತ್ತು 2,58,000 ಕೃಷಿ ಭೂಮಿಗಳು ನಾಶವಾಗಿವೆ.

Category
ಕರಾವಳಿ ತರಂಗಿಣಿ