image image
ಬ್ರೇಕಿಂಗ್ ನ್ಯೂಸ್
ಬ್ರೇಕಿಂಗ್ ನ್ಯೂಸ್

ಭೂಮಿಗೆ ಮರಳಿದ 3 ಚೀನಿ ಗಗನಯಾತ್ರಿಗಳು : ಇವರು ಬಾಹ್ಯಾಕಾಶ ನಿಲ್ದಾಣದಲ್ಲಿ ಕಳೆದಿದ್ದಾರೆ 192 ದಿನ

ಭೂಮಿಗೆ ಮರಳಿದ 3 ಚೀನಿ ಗಗನಯಾತ್ರಿಗಳು : ಇವರು ಬಾಹ್ಯಾಕಾಶ ನಿಲ್ದಾಣದಲ್ಲಿ ಕಳೆದಿದ್ದಾರೆ 192 ದಿನ

ಬೀಜಿಂಗ್: ಚೀನಾದ ಮೂವರು ಗಗನಯಾತ್ರಿಗಳನ್ನು ಒಳಗೊಂಡ ಶೆನ್ ಝೌ-18 ಬಾಹ್ಯಾಕಾಶ ನೌಕೆಯ ಸಿಬ್ಬಂದಿ ಸೋಮವಾರ ಮುಂಜಾನೆ ಟಿಯಾಂಗಾಂಗ್ ಬಾಹ್ಯಾಕಾಶ ನಿಲ್ದಾಣದಲ್ಲಿ ಆರು ತಿಂಗಳ ಕಾರ್ಯಾಚರಣೆಯನ್ನು ಪೂರ್ಣಗೊಳಿಸಿದ ನಂತರ ಸುರಕ್ಷಿತವಾಗಿ ಭೂಮಿಗೆ ಮರಳಿದ್ದಾರೆ.

ಗಗನಯಾತ್ರಿಗಳಾದ ಯೆ ಗುವಾಂಗ್ ಫು, ಲಿ ಕಾಂಗ್ ಮತ್ತು ಲಿ ಗುವಾಂಗ್ ಸು ಅವರನ್ನು ಹೊತ್ತ ಶೆನ್ ಝೌ-18 ರ ರಿಟರ್ನ್ ಕ್ಯಾಪ್ಸೂಲ್ ಉತ್ತರ ಚೀನಾದ ಇನ್ನರ್ ಮಂಗೋಲಿಯಾ ಸ್ವಾಯತ್ತ ಪ್ರದೇಶದ ಡಾಂಗ್ ಫೆಂಗ್ ಲ್ಯಾಂಡಿಂಗ್ ಸೈಟ್​ನಲ್ಲಿ ಮುಂಜಾನೆ 1:24ಕ್ಕೆ (ಬೀಜಿಂಗ್ ಸಮಯ) ಇಳಿಯಿತು. ಚೀನಾ ಮಾನವಸಹಿತ ಬಾಹ್ಯಾಕಾಶ ಸಂಸ್ಥೆ (ಸಿಎಂಎಸ್ಎ)ಯ ಪ್ರಕಾರ, ಸಿಬ್ಬಂದಿಗಳೆಲ್ಲರೂ ಮುಂಜಾನೆ 2:15ರಷ್ಟೊತ್ತಿಗೆ ರಿಟರ್ನ್ ಕ್ಯಾಪ್ಸೂಲ್​ನಿಂದ ಹೊರಗೆ ಬಂದಿದ್ದಾರೆ ಎಂದು ಕ್ಸಿನ್ಹುವಾ ಸುದ್ದಿ ಸಂಸ್ಥೆ ವರದಿ ಮಾಡಿದೆ.

192 ದಿನಗಳ ಕಾಲ ಕಕ್ಷೆಯಲ್ಲಿದ್ದು ಮರಳಿರುವ ಮೂವರೂ ಗಗನಯಾತ್ರಿಗಳ ಆರೋಗ್ಯ ಉತ್ತಮವಾಗಿದೆ ಮತ್ತು ಶೆನ್ ಝೌ-18 ಮಾನವಸಹಿತ ಮಿಷನ್ ಯಶಸ್ವಿಯಾಗಿದೆ ಎಂದು ಸಿಎಂಎಸ್ಎ ತಿಳಿಸಿದೆ. ಶೆನ್ ಝೌ-18 ಮಿಷನ್ ಕಮಾಂಡರ್ ಯೆ, ಒಂದು ವರ್ಷಕ್ಕಿಂತ ಹೆಚ್ಚು ಕಾಲ ಬಾಹ್ಯಾಕಾಶ ಹಾರಾಟದ ಅನುಭವ ಹೊಂದಿರುವ ಮೊದಲ ಚೀನೀ ಗಗನಯಾತ್ರಿಯಾಗಿದ್ದಾರೆ. ಈ ಮೂಲಕ ಅವರು ಕಕ್ಷೆಯಲ್ಲಿ ದೀರ್ಘಕಾಲ ಉಳಿದ ಚೀನಿ ಗಗನಯಾತ್ರಿಯಾಗಿದ್ದಾರೆ. ಅವರು ಅಕ್ಟೋಬರ್ 2021ರಿಂದ ಏಪ್ರಿಲ್ 2022 ರವರೆಗೆ ಶೆನ್ ಝೌ -13 ಮಿಷನ್​ನ ಸಿಬ್ಬಂದಿಯಾಗಿ ಸೇವೆ ಸಲ್ಲಿಸಿದ್ದಾರೆ.

Category
ಕರಾವಳಿ ತರಂಗಿಣಿ