image image
ಬ್ರೇಕಿಂಗ್ ನ್ಯೂಸ್
ಬ್ರೇಕಿಂಗ್ ನ್ಯೂಸ್

ಟಿಟಿಡಿಯಲ್ಲಿ ಕೆಲಸ ಮಾಡುವವರು ಖಡ್ಡಾಯವಾಗಿ ಹಿಂದೂ ಆಗಿರಬೇಕು : ಟಿಟಿಡಿ ನೂತನ ಅಧ್ಯಕ್ಷ ಬಿ ಆರ್ ನಾಯ್ಡು

ಟಿಟಿಡಿಯಲ್ಲಿ ಕೆಲಸ ಮಾಡುವವರು ಖಡ್ಡಾಯವಾಗಿ ಹಿಂದೂ ಆಗಿರಬೇಕು : ಟಿಟಿಡಿ ನೂತನ ಅಧ್ಯಕ್ಷ ಬಿ ಆರ್ ನಾಯ್ಡು

ತಿರುಪತಿ: ಟಿಟಿಡಿ ಮಂಡಳಿಯ ನೂತನ ಅಧ್ಯಕ್ಷ ಬಿಆರ್ ನಾಯ್ಡು ಅವರು ಟಿಟಿಡಿಯಲ್ಲಿ ಕೆಲಸ ಮಾಡುವವರೆಲ್ಲರೂ ಕಡ್ಡಾಯವಾಗಿ ಹಿಂದೂಗಳಾಗಿರಬೇಕೆಂದು ಹೇಳಿದ್ದಾರೆ. ಇತರ ಧರ್ಮದವರಿಗೆ ವಿಆರ್‌ಎಸ್ ಅಥವಾ ಇಲಾಖೆ ಬದಲಾವಣೆಯ ಸಾಧ್ಯತೆಗಳನ್ನು ಪರಿಗಣಿಸಲಾಗುವುದು. ಮಾಜಿ ಸಿಎಂ ಜಗನ್ ಮೋಹನ್ ರೆಡ್ಡಿ ಅವರ ಅವಧಿಯಲ್ಲಿ 'ಅನೇಕ ಅಕ್ರಮಗಳು' ನಡೆದಿದೆ ಎಂಸು ಅರೋಪಿಸಿದ್ದಾರೆ.

ತಿರುಮಲದಲ್ಲಿ ಕೆಲಸ ಮಾಡುವ ಪ್ರತಿಯೊಬ್ಬರೂ ಹಿಂದೂಗಳಾಗಿರಬೇಕು. ಅದು ನನ್ನ ಮೊದಲ ಪ್ರಯತ್ನವಾಗಿದೆ. ಇದರಲ್ಲಿ ಹಲವು ಸಮಸ್ಯೆಗಳಿವೆ. ನಾವು ಅದನ್ನು ಪರಿಶೀಲಿಸಬೇಕಾಗಿದೆ ಎಂದರು.

ಟಿಡಿಪಿ ನೇತೃತ್ವದ ಆಂಧ್ರಪ್ರದೇಶ ಸರ್ಕಾರವು ತಿರುಮಲ ತಿರುಪತಿಯಲ್ಲಿರುವ ವಿಶ್ವದ ಅತ್ಯಂತ ಶ್ರೀಮಂತ ದೇವಾಲಯವನ್ನು ನಿರ್ವಹಿಸುವ ತಿರುಮಲ ತಿರುಪತಿ ದೇವಸ್ಥಾನಗಳಿಗೆ 24 ಸದಸ್ಯರೊಂದಿಗೆ ಹೊಸ ಮಂಡಳಿಯನ್ನು ರಚಿಸಿದೆ.

Category
ಕರಾವಳಿ ತರಂಗಿಣಿ