image image
ಬ್ರೇಕಿಂಗ್ ನ್ಯೂಸ್
ಬ್ರೇಕಿಂಗ್ ನ್ಯೂಸ್

26/11ರ ಮುಂಬೈ ದಾಳಿಗೆ ಅಂದಿನ ಸರ್ಕಾರ ಸರಿಯಾದ ಪ್ರತ್ಯುತ್ತರ ನೀಡಿಲ್ಲ : ಜೈಶಂಕರ್​

26/11ರ ಮುಂಬೈ ದಾಳಿಗೆ ಅಂದಿನ ಸರ್ಕಾರ ಸರಿಯಾದ ಪ್ರತ್ಯುತ್ತರ ನೀಡಿಲ್ಲ : ಜೈಶಂಕರ್​

ಮಹಾರಾಷ್ಟ್ರ : ಭಾರತ ಕಂಡ ಭೀಕರ ಭಯೋತ್ಪಾದಕ ದಾಳಿ, 160 ಅಮಾಯಕರ ಸಾವಿಗೆ ಕಾರಣವಾಗಿದ್ದ 26/11 ಮುಂಬೈ ದಾಳಿಗೆ ಅಂದಿನ ಸರ್ಕಾರ ತಕ್ಕ ಪ್ರತ್ಯುತ್ತರ ನೀಡಿರಲಿಲ್ಲ ಎಂದು ವಿದೇಶಾಂಗ ಸಚಿವ ಎಸ್. ಜೈಶಂಕರ್ ಭಾನುವಾರ ಹೇಳಿದ್ದಾರೆ. ದೇಶವನ್ನೇ ಸ್ತಬ್ಧ ಮಾಡಿದ್ದ ಘಟನೆಯ ವಿರುದ್ಧ ಸರ್ಕಾರ ದಿಟ್ಟ ಕ್ರಮ ಕೈಗೊಂಡಿರಲಿಲ್ಲ. ಈಗ ಅಂತಹ ಯಾವುದೇ ಘಟನೆಗಳು ನಡೆಯಲು ಸಾಧ್ಯವಿಲ್ಲ. ಕಾರಣ ದೇಶ ಬದಲಾಗಿದೆ ಎಂದು ವಿದೇಶಾಂಗ ಸಚಿವರು ಹಿಂದಿನ ಯುಪಿಎ​ ಸರ್ಕಾರವನ್ನು ಪರೋಕ್ಷವಾಗಿ ಟೀಕಿಸಿದರು.

ಮುಂಬೈನಲ್ಲಿಂದು ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಪ್ರಸ್ತುತ ಮುಂಬೈ ಭಾರತ ಮತ್ತು ವಿಶ್ವಕ್ಕೆ ಭಯೋತ್ಪಾದನೆ ನಿಗ್ರಹದ ಸಂಕೇತವಾಗಿದೆ. ಭಯೋತ್ಪಾದಕ ದಾಳಿಗೆ ತುತ್ತಾದ ಹೋಟೆಲ್​​ನಲ್ಲಿಯೇ ಉಗ್ರ ನಿಗ್ರಹ ಸಮಿತಿ ಸಭೆಯನ್ನು ನಡೆಸಿದ್ದೇವೆ. ಈ ಮೂಲಕ ದೇಶ ಭಯೋತ್ಪಾದನೆ ವಿರುದ್ಧ ಪ್ರಬಲವಾಗಿ ನಿಂತಿದೆ. ಅದರ ವಿರುದ್ಧದ ಹೋರಾಟದಲ್ಲಿ ಮುಂಚೂಣಿಯಲ್ಲಿದೆ ಎಂದು ಜೈಶಂಕರ್ ಪ್ರತಿಪಾದಿಸಿದರು.

ದೇಶ ಇಂದು ಭಯೋತ್ಪಾದನೆಯ ವಿರುದ್ಧ ಶೂನ್ಯ ಸಹಿಷ್ಣುತೆ ಹೊಂದಿದೆ. ಹೀಗಾಗಿ ಎಲ್ಲಿಯೇ ಉಗ್ರ ದಾಳಿ ನಡೆದರೂ, ಆ ಬಗ್ಗೆ ಮಾತನಾಡುತ್ತೇವೆ. ಉಗ್ರವಾದದ ವಿರುದ್ಧ ಬಹಿರಂಗ ಹೋರಾಟ ನಮ್ಮದಾಗಿದೆ. ಕೆಲವರು ಹಗಲಲ್ಲಿ ವಿರೋಧಿಸಿ, ರಾತ್ರಿ ಭಯ ಪಡುತ್ತಾರೆ. ಎಲ್ಲವೂ ಸರಿಯಾಗಿದೆ ಎಂದು ನಾಟಕ ಮಾಡುವುದು ಸರಿಯಲ್ಲ ಎಂದು ಪಾಕಿಸ್ತಾನದ ವಿರುದ್ಧ ಪರೋಕ್ಷವಾಗಿ ವಾಗ್ದಾಳಿ ನಡೆಸಿದರು. ಹಿಂದಿನ ಭಾರತಕ್ಕೂ, ಇಂದಿನ ಭಾರತಕ್ಕೂ ವ್ಯತ್ಯಾಸವಿದೆ. ಭಯೋತ್ಪಾದನೆಯನ್ನು ಕಟುವಾಗಿ ವಿರೋಧಿಸುತ್ತೇವೆ. ಉತ್ತರಿಸಬೇಕಾದ ಜಾಗದಲ್ಲಿ ಧ್ವನಿ ಎತ್ತುತ್ತೇವೆ ಎಂದು ಅವರು ಹೇಳಿದರು.

Category
ಕರಾವಳಿ ತರಂಗಿಣಿ