image image
ಬ್ರೇಕಿಂಗ್ ನ್ಯೂಸ್
ಬ್ರೇಕಿಂಗ್ ನ್ಯೂಸ್

ಗ್ಯಾಂಗ್​ಸ್ಟರ್​ ಹಿಮಾಂಶು ಭಾವು ಸಹಚರೆ 19 ವರ್ಷದ ಯುವತಿಯ ಬಂಧನ

ಗ್ಯಾಂಗ್​ಸ್ಟರ್​ ಹಿಮಾಂಶು ಭಾವು ಸಹಚರೆ 19 ವರ್ಷದ ಯುವತಿಯ ಬಂಧನ

ನವದೆಹಲಿ: ಗ್ಯಾಂಗ್​ಸ್ಟರ್​ ಹಿಮಾಂಶು ಭಾವು ಸಹಚರೆ 19 ವರ್ಷದ ಯುವತಿಯನ್ನು ಪೊಲೀಸರು ಬಂಧಿಸಿದ್ದಾರೆ. ಪಶ್ಚಿಮ ದೆಹಲಿ ರಜೌರಿ ಗಾರ್ಡನ್ ಪ್ರದೇಶದಲ್ಲಿ ಬರ್ಗರ್ ಕಿಂಗ್‌ನಲ್ಲಿ ನಡೆದ ವ್ಯಕ್ತಿಯ ಹತ್ಯೆಗೆ ಸಂಬಂಧಿಸಿದಂತೆ ಈ ಬಂಧನ ಮಾಡಲಾಗಿದೆ.

ಲೇಡಿ ಡಾನ್​ ಎಂದೇ ಪರಿಚಿತಳಾಗಿದ್ದ ಅನ್ನು ಧನಕರ್​ ಬಂಧಿತ ಯುವತಿ. ಉತ್ತರ ಪ್ರದೇಶದ ಲಖಿಂಪುರ ಖೇರಿಯಲ್ಲಿ ಭಾರತ ನೇಪಾಳ ಗಡಿಯ ಬಳಿ ಇವರನ್ನು ಬಂಧಿಸಲಾಗಿದೆ. ಜೂನ್​ 18ರ ನಂತರ ಕೊಲೆ ಬಳಿಕ ಈಕೆ ಪೊಲೀಸರ ಕಣ್ಣುತಪ್ಪಿಸಿ, ವಿದೇಶಕ್ಕೆ ಹೋಗಲು ತಯಾರಿ ನಡೆಸಿದ್ದಳು. ಧನಕರ್ ಹರಿಯಾಣದ ರೋಹ್ಟಕ್ ನಿವಾಸಿಯಾಗಿದ್ದು, ಬರ್ಗರ್ ಕಿಂಗ್ ರೆಸ್ಟೋರೆಂಟ್‌ನಲ್ಲಿ ಅಮನ್ ಎಂಬಾತನ ಕೊಲೆಯಲ್ಲಿ ಭಾಗಿಯಾಗಿದ್ದಳು ಎಂದು ಡಿಎಸ್​ಪಿ ಅಮಿತ್​ ಕೌಶಿಕ್​ ತಿಳಿಸಿದ್ದಾರೆ.

ಜೂನ್​ 18ರಂದು ರಾತ್ರಿ ಸುಮಾರು 9.30ಕ್ಕೆ ರಾಜೌರಿ ಗಾರ್ಡನ್​ಗೆ ಮೂವರು ಬೈಕ್​ ಮೇಲೆ ಬಂದಿದ್ದರು. ಇವರಲ್ಲಿ ಒಬ್ಬ ಹೊರಗೆ ನಿಂತಿದ್ದು, ಇನ್ನಿಬ್ಬರು ಒಳಗೆ ಹೋಗಿ ಅಮನ್​ ಎಂಬ ವ್ಯಕ್ತಿಯನ್ನು 20 - 25 ಬಾರಿ ಗುಂಡಿನ ದಾಳಿ ನಡೆಸಿ ಹತ್ಯೆ ಮಾಡಿದ್ದರು. ಈ ವೇಳೆ, ಸ್ಥಳದಲ್ಲಿ ಅನ್ನು ಕೂಡ ಇದ್ದಳು. ಸಾಮಾಜಿಕ ಜಾಲತಾಣದ ಮೂಲಕ ಅಮನ್​ ಅವರನ್ನು ಸೆಳೆದು ಆತನ ಹತ್ಯೆಯಲ್ಲಿ ಅನ್ನು ಭಾಗಿಯಾಗಿದ್ದಳು. ಆತನ ಹತ್ಯೆ ವೇಳೆ ಸ್ಥಳದಲ್ಲೇ ಅನ್ನು ಇದ್ದಳು ಎಂಬುದು ತನಿಖೆಯಲ್ಲಿ ಬಯಲಾಗಿತ್ತು.

ಅಕ್ಟೋಬರ್​ 24ರಂದು ಯುಪಿಯ ಲಖಿಂಪುರ ಖೇರಿಯಲ್ಲಿರುವ ಇಂಡೋ-ನೇಪಾಳ ಗಡಿಯಲ್ಲಿ ಈಕೆ ಚಲನವಲನದ ಕುರಿತು ಮಾಹಿತಿ ಪಡೆದ ಪೊಲೀಸರು ಆಕೆಯನ್ನು ಬಂಧಿಸಿದ್ದಾರೆ. ತನಿಖೆ ವೇಳೆ ಗಡಿದಾಟಲು ಕೆಗೆ ಹಿಮಾಂಶು ಭಾವು ಮತ್ತು ಸಾಹಿಲ್​ ರಿಟೋಲಿಯಾ ಸಹಾಯ ಮಾಡಿದ್ದರು. ಅವರು ಅಮೆರಿಕಕ್ಕೆ ಹೋಗಲು ವೀಸಾ ಸೇರಿದಂತೆ ಸಕಲ ವ್ಯವಸ್ಥೆ ಮಾಡಿಕೊಡುವ ಭರವಸೆ ನೀಡಿದ್ದರು.

Category
ಕರಾವಳಿ ತರಂಗಿಣಿ