ಇಂಡೋನೆಷ್ಯಾ : ಆಪಲ್ ಬಿಡುಗಡೆ ಮಾಡಿದ ಇತ್ತೀಚಿನ ಮಾದರಿಯ ಐಫೋನ್ 16 ಅನ್ನು ಇಂಡೋನೇಷ್ಯಾ ನಿಷೇಧಿಸಿದೆ. ಇಂಡೋನೇಷ್ಯಾ ದೇಶವೂ ಈ ಫೋನ್‌ನ ಮಾರಾಟ ಮತ್ತು ಬಳಕೆಗೆ ನಿರ್ಬಂಧಗಳನ್ನು ಹಾಕಿದೆ. ಅಷ್ಟೇ ಅಲ್ಲ ಬೇರೆ ದೇಶಗಳಲ್ಲಿ ಖರೀದಿಸಿ ಇಂಡೋನೇಷ್ಯಾ ದೇಶದಲ್ಲಿ ಬಳಸುವುದನ್ನು ಸಹ ನಿಷೇಧಿಸಿದೆ. ಪ್ರವಾಸೋದ್ಯಮಕ್ಕೆ ಆ ದೇಶಕ್ಕೆ ಹೋಗಬೇಕು ಎನ್ನುವ ಪ್ರವಾಸಿಗರಿಗೆ ಇದೊಂದು ಹೊಸ ತಲೆನೋವಾಗಿ ಪರಿಣಮಿಸಿದೆ.
ಇಂಡೋನೇಷ್ಯಾದ ಕೈಗಾರಿಕಾ ಸಚಿವ ಗುಮಿವಾಂಗ್ ಕರ್ತಸಸ್ಮಿತಾ ಇತ್ತೀಚೆಗೆ ಐಫೋನ್ 16 ಬಳಕೆ ನಿಷೇಧಿಸುವುದಾಗಿ ಘೋಷಿಸಿದ್ದಾರೆ. ಇಂಡೋನೇಷ್ಯಾದಲ್ಲಿ ಆ ಫೋನ್ ಅನ್ನು ಬಳಸಲು ಯಾವುದೇ IMEI ಪ್ರಮಾಣೀಕರಣವಿಲ್ಲ ಎಂದು ಹೇಳಲಾಗಿದೆ. ಯಾರಾದರೂ ಬಳಸಿದರೆ ಅಕ್ರಮವಾಗುತ್ತದೆ ಎಂದರು. ಅಂತಹ ಯಾವುದೇ ವಿಷಯಗಳು ಕಂಡು ಬಂದಲ್ಲಿ ಮಾಹಿತಿ ತಿಳಿಸಬೇಕು ಎಂದು ಜನರಿಗೆ ಮನವಿ ಮಾಡಿದ್ದಾರೆ.
ಇಂಡೋನೇಷ್ಯಾದಲ್ಲಿ ಹೂಡಿಕೆಗೆ ನೀಡಿದ ಭರವಸೆಗಳನ್ನು ಈಡೇರಿಸಲು ಆಪಲ್ ವಿಫಲವಾದ ನಂತರ ಇಂಡೋನೇಷ್ಯಾ ಸರ್ಕಾರ ಈ ನಿರ್ಧಾರವನ್ನು ತೆಗೆದುಕೊಂಡಿದೆ. ಈ ಹಿಂದೆ ಆಪಲ್ 1.71 ಮಿಲಿಯನ್ ರೂಪಾಯಿಗಳನ್ನು (ಇಂಡೋನೇಷ್ಯಾದ ಕರೆನ್ಸಿ) ಹೂಡಿಕೆ ಮಾಡಲು ಭರವಸೆ ನೀಡಿತು. ಆದರೆ, ಮಾಧ್ಯಮವು ಕೇವಲ 1.48 ಮಿಲಿಯನ್ ರೂಪಾಯಿಗಳನ್ನು ಹೂಡಿಕೆ ಮಾಡಿದೆ ಎಂದು ವರದಿಯಾಗಿದೆ.