image image
ಬ್ರೇಕಿಂಗ್ ನ್ಯೂಸ್
ಬ್ರೇಕಿಂಗ್ ನ್ಯೂಸ್

ಟ್ರಾಫಿಕ್ ನಿಯಮ​ ಉಲ್ಲಂಘನೆ ಕಣ್ಗಾವಲಿಗೆ ಎಐ ತಂತ್ರಜ್ಞಾನ ಬಳಕೆ ಅಗತ್ಯವಿದೆ : ನಿತಿನ್​ ಗಡ್ಕರಿ

ಟ್ರಾಫಿಕ್ ನಿಯಮ​ ಉಲ್ಲಂಘನೆ ಕಣ್ಗಾವಲಿಗೆ ಎಐ ತಂತ್ರಜ್ಞಾನ ಬಳಕೆ ಅಗತ್ಯವಿದೆ : ನಿತಿನ್​ ಗಡ್ಕರಿ

ನವದೆಹಲಿ: ಟ್ರಾಫಿಕ್​ ನಿಯಮ ಉಲ್ಲಂಘನೆ ಪರಿಶೀಲನೆ ಮತ್ತು ದಂಡವನ್ನು ನಿಖರವಾಗಿ ವಿಧಿಸುವ ಸಲುವಾಗಿ ಕೃತಕ ಬುದ್ಧಿಮತ್ತೆ (ಎಐ) ಹಾಗೂ ಇತರೆ ಅವಿಷ್ಕಾರಕ ಮಾದರಿಗಳನ್ನು ಬಳಕೆ ಮಾಡುವ ಕುರಿತು ಸರ್ಕಾರ ಪ್ರಸ್ತಾಪ ಹೊಂದಿದೆ ಎಂದು ಕೇಂದ್ರ ಸಚಿವ ನಿತಿನ್​ ಗಡ್ಕರಿ ತಿಳಿಸಿದರು.

ಟ್ರಾಫಿಕ್​ ಇನ್ಫ್ರಾಟೆಕ್​ ಎಕ್ಸ್​ಪೊನ 12ನೇ ಆವೃತ್ತಿಯಲ್ಲಿ ಮಾತನಾಡಿದ ಅವರು, ಸುಧಾರಿತ ಇಂಜಿನಿಯರಿಂಗ್​ ಪರಿಹಾರ, ನಿಯಮಗಳ ಜಾರಿ ಮತ್ತು ಕೃತಕ ಬುದ್ಧಿಮತ್ತೆಯಂತಹ ತಂತ್ರಜ್ಞಾನಗ ಬಳಕೆ ಮಾಡದೆ ರಸ್ತೆ ಸುರಕ್ಷತೆ ಜಾರಿ ಸಾಧನೆ ಮಾಡಲು ಸಾಧ್ಯವಿಲ್ಲ. ಸ್ಯಾಟಲೈಟ್​ ಟೋಲ್​ ಸಿಸ್ಟಂ ಅವಿಷ್ಕಾರ ಸೇರಿದಂತೆ ಟೋಲ್​ ಸಂಗ್ರಹ ಮಾದರಿಯನ್ನು ಉನ್ನತೀಕರಿಸಲು ಯೋಜನೆ ಹೊಂದಿದೆ. ಇದರಿಂದ ಟೋಲ್​ ಸಂಗ್ರಹಣೆಯಲ್ಲಿ ಪಾರದರ್ಶಕತೆ ಕಾಯ್ದುಕೊಳ್ಳಲು ಮತ್ತು ಸಾಮರ್ಥ್ಯ ಸುಧಾರಣೆ ಮಾಡಲು ಸಾಧ್ಯವಾಗುತ್ತದೆ ಎಂದಿದ್ದಾರೆ.

ರಸ್ತೆ ಸುರಕ್ಷತೆಗಾಗಿ ಸರ್ಕಾರವು ತಂತ್ರಜ್ಞಾನ ಸುಧಾರಣೆ ಅಭಿವೃದ್ಧಿಗಾಗಿ ಖಾಸಗಿ ವಲಯಗಳೊಂದಿಗೆ ಸಹಯೋಗ ಹೊಂದಲಿದೆ. ಇದಕ್ಕೆಂದೇ ಇರುವ ತಜ್ಞರ ಸಮಿತಿ ಸ್ಟಾರ್ಟ್​ಅಪ್​ ಮತ್ತು ಉದ್ಯಮ ನಾಯಕರೊಂದಿಗೆ ಈ ಪ್ರಸ್ತಾಪ ಮುಂದಿಡಲಿದ್ದು, ಅದು ಮೌಲ್ಯಮಾಪನ ನಡೆಸಲಿದೆ. ಈ ಸಮಿತಿಯು ವೇಗದ ಸುಧಾರಣೆ ಗುರಿಯೊಂದಿಗೆ ಇನ್ನು ಮೂರು ತಿಂಗಳೊಳಗೆ ಈ ಕುರಿತು ತೀರ್ಮಾನ ಮಾಡಲಿದೆ ಎಂದು ಹೇಳಿದರು.

Category
ಕರಾವಳಿ ತರಂಗಿಣಿ