image image
ಬ್ರೇಕಿಂಗ್ ನ್ಯೂಸ್
ಬ್ರೇಕಿಂಗ್ ನ್ಯೂಸ್

ಓರ್ವ ದಂಪತಿ 16 ಮಕ್ಕಳನ್ನು ಹೊಂದುವ ಆಲೋಚನೆ ಏಕೆ ಇರಬಾರದು-ತಮಿಳುನಾಡು ಮುಖ್ಯಮಂತ್ರಿ ಎಂ.ಕೆ.ಸ್ಟಾಲಿನ್

ಓರ್ವ ದಂಪತಿ 16 ಮಕ್ಕಳನ್ನು ಹೊಂದುವ ಆಲೋಚನೆ ಏಕೆ ಇರಬಾರದು-ತಮಿಳುನಾಡು ಮುಖ್ಯಮಂತ್ರಿ ಎಂ.ಕೆ.ಸ್ಟಾಲಿನ್

ತಮಿಳುನಾಡು : ದಕ್ಷಿಣ ಭಾರತದ ರಾಜ್ಯಗಳಲ್ಲಿ ಜನಸಂಖ್ಯೆ ನಿಯಂತ್ರಣದಲ್ಲಿದ್ದು, ಸಂಸತ್​ ಸ್ಥಾನಗಳಲ್ಲಿ ಕುಸಿತ ಉಂಟಾಗುವ ಸಾಧ್ಯತೆಗಳಿವೆ. ಜನಸಂಖ್ಯಾ ಗಣತಿ ನಡೆದಲ್ಲಿ ಸಂಸತ್ತಿನಲ್ಲಿ ಈ ರಾಜ್ಯಗಳ ಪ್ರಾತಿನಿಧ್ಯ ಸಹಜವಾಗಿ ಕಡಿಮೆಯಾಗಲಿದೆ. ಹೀಗಾಗಿ, ಜನಸಂಖ್ಯೆ ಹೆಚ್ಚಿಸುವ ಬಗ್ಗೆ ಜನರು ಯೋಚಿಸಬೇಕು ಎಂದು ತಮಿಳುನಾಡು ಮುಖ್ಯಮಂತ್ರಿ ಎಂ.ಕೆ.ಸ್ಟಾಲಿನ್​​ ನೀಡಿರುವ ಹೇಳಿಕೆ ಕುತೂಹಲ ಮೂಡಿಸಿದೆ. ಸ್ಟಾಲಿನ್ ಜನಸಂಖ್ಯೆ ನಿಯಂತ್ರಣದ ಬಗ್ಗೆ ಕಳವಳ ವ್ಯಕ್ತಪಡಿಸಿದ್ದಲ್ಲದೇ, ಓರ್ವ ದಂಪತಿ 16 ಮಕ್ಕಳನ್ನು ಹೊಂದುವ ಆಲೋಚನೆ ಏಕೆ ಇರಬಾರದು ಎಂದೂ ಪ್ರಶ್ನಿಸಿದ್ದಾರೆ.

ತಿರುವನ್ಮಿಯೂರಿನ ಮಾರುಂಡೀಶ್ವರ ದೇವಸ್ಥಾನದಲ್ಲಿ ಇಂದು ಆಯೋಜಿಸಿದ್ದ 31 ಜೋಡಿಗಳ ಸಾಮೂಹಿಕ ವಿವಾಹ ಸಮಾರಂಭದಲ್ಲಿ ಸಿಎಂ ಸ್ಟಾಲಿನ್ ಭಾಗವಹಿಸಿದ್ದರು. ಈ ವೇಳೆ ಮಾತನಾಡಿರುವ ಅವರು, ಹಿಂದಿನ ಕಾಲದಲ್ಲಿ ಹಿರಿಯರು ಹೊಸದಾಗಿ ಮದುವೆಯಾದ ದಂಪತಿಗೆ 16 ಬಗೆಯ ಆಸ್ತಿ ಸಿಗುವಂತೆ ಆಶೀರ್ವದಿಸುತ್ತಿದ್ದರು. ಈಗ, ಆಸ್ತಿ ಬದಲು 16 ಮಕ್ಕಳನ್ನು ಪಡೆದು ಸುಖದಿಂದ ಬಾಳುವಂತೆ ಅನುಗ್ರಹಿಸಿ. ಜನಸಂಖ್ಯೆ ನಿಯಂತ್ರಣದಿಂದಾಗಿ ಸಂಸತ್​ ಕ್ಷೇತ್ರಗಳ ಸಂಖ್ಯೆ ಕಡಿಮೆಯಾಗುತ್ತಿದೆ. ಅದಕ್ಕೆ ತಕ್ಕಂತೆ ಪರಿಸ್ಥಿತಿಗಳು ಬದಲಾಗಬೇಕು. 16 ಮಕ್ಕಳನ್ನು ಹೊಂದುವ ಆಲೋಚನೆ ಎಲ್ಲರಿಗೂ ಏಕೆ ಇರಬಾರದು ಎಂಬ ಪ್ರಶ್ನೆ ಹರಿಬಿಟ್ಟಿದ್ದಾರೆ.

ಅನ್ಯಾಯ ತಡೆಗೆ ನಿಯಮ ರೂಪಿಸಿ: ಮತ್ತೊಂದೆಡೆ, ಕುಟುಂಬ ಯೋಜನೆ ಜಾರಿಯಲ್ಲಿ ಯಶಸ್ವಿಯಾಗಿರುವ ದಕ್ಷಿಣ ರಾಜ್ಯಗಳಿಗೆ ಈ ಕ್ರಮವೇ ನಷ್ಟವನ್ನುಂಟು ಮಾಡಿದೆ. ಲೋಕಸಭೆಯ ಸೀಟು ಹಂಚಿಕೆಗೆ ಜನಗಣತಿಯನ್ನು ಬಳಸಿದಲ್ಲಿ, ಸಹಜವಾಗಿ ಸೀಟು ಹಂಚಿಕೆ ಕಡಿಮೆಯಾಗಲಿದೆ. ಈ ಅನ್ಯಾಯ ತಡೆಗೆ ಸೂಕ್ತ ನಿಯಮ ರೂಪಿಸಬೇಕಿದೆ ಎಂದು ಕಾಂಗ್ರೆಸ್‌ ಪ್ರಧಾನ ಕಾರ್ಯದರ್ಶಿ ಜೈರಾಮ್ ರಮೇಶ್ ಹೇಳಿದ್ದಾರೆ.

Category
ಕರಾವಳಿ ತರಂಗಿಣಿ