image image
ಬ್ರೇಕಿಂಗ್ ನ್ಯೂಸ್
ಬ್ರೇಕಿಂಗ್ ನ್ಯೂಸ್

ವಯನಾಡ್ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ನ ಪ್ರಿಯಾಂಕಾ ಗಾಂಧಿ ಎದುರು ಬಿಜೆಪಿ ಯುವ ನಾಯಕಿ ನವ್ಯಾ ಹರಿದಾಸ್‌ ಕಣಕ್ಕೆ

ವಯನಾಡ್ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ನ ಪ್ರಿಯಾಂಕಾ ಗಾಂಧಿ ಎದುರು ಬಿಜೆಪಿ ಯುವ ನಾಯಕಿ ನವ್ಯಾ ಹರಿದಾಸ್‌ ಕಣಕ್ಕೆ

ಕೇರಳ : ವಯನಾಡ್ ಲೋಕಸಭಾ ಕ್ಷೇತ್ರದ ಉಪ ಚುನಾವಣೆ ಇತ್ತೀಚಿಗೆ ಘೋಷಣೆಯಾಗಿದೆ. ರಾಹುಲ್ ಗಾಂಧಿ ರಾಜೀನಾಮೆಯಿಂದ ತೆರವಾದ ಈ ಕ್ಷೇತ್ರಕ್ಕೆ ಕಾಂಗ್ರೆಸ್ ಪಕ್ಷ ಪ್ರಿಯಾಂಕಾ ಗಾಂಧಿ ಅವರನ್ನು ಈಗಾಗಲೇ ಕಣಕ್ಕಿಳಿಸಿದೆ. ಇದೀಗ ಬಿಜೆಪಿ ಕೂಡಾ ತನ್ನ ಅಭ್ಯರ್ಥಿಯನ್ನು ಘೋಷಿಸಿದೆ.

ಕೋಜಿಕ್ಕೋಡ್ ನಗರ ಪಾಲಿಕೆಯಲ್ಲಿ ಎರಡು ಬಾರಿ ಸದಸ್ಯೆಯಾಗಿರುವ ನವ್ಯಾ ಹರಿದಾಸ್ ಅವರಿಗೆ ಬಿಜೆಪಿ ಟಿಕೆಟ್ ನೀಡಿದೆ. ಇವರು ಕಾಂಗ್ರೆಸ್‌ನ ಪ್ರಿಯಾಂಕಾ ಗಾಂಧಿ ಮತ್ತು ಸಿಪಿಐನ ಸತ್ಯನ್ ಮೊಕೇರಿ ಅವರನ್ನು ಎದುರಿಸಲಿದ್ದಾರೆ. ಶನಿವಾರ ಬಿಜೆಪಿ ದೇಶದ ವಿವಿಧೆಡೆ ನಡೆಯಲಿರುವ ಉಪ ಚುನಾವಣೆಗೆ ಅಭ್ಯರ್ಥಿಗಳನ್ನು ಘೋಷಿಸಿದ್ದು, ಈ ಪೈಕಿ ನವ್ಯಾ ಹರಿದಾಸ್ ಕಿರಿಯ ನಾಯಕಿಯಾಗಿದ್ದಾರೆ. ಪ್ರತಿಷ್ಠೆಯ ಕದನಕ್ಕೆ ಇವರನ್ನು ಕಣಕ್ಕಿಳಿಸಿರುವುದು ಸಹಜವಾಗಿಯೇ ಕುತೂಹಲ ಹೆಚ್ಚಿಸಿದೆ.

ವೃತ್ತಿಯಲ್ಲಿ ಸಾಫ್ಟ್‌ವೇರ್ ಎಂಜಿನಿಯರ್ ಆಗಿರುವ ನವ್ಯಾ ಹರಿದಾಸ್, ಕೋಜಿಕ್ಕೋಡ್ ನಗರ ಪಾಲಿಕೆಯಲ್ಲಿ ಬಿಜೆಪಿ ಸಂಸದೀಯ ನಾಯಕಿಯೂ ಹೌದು. ಇದರ ಜೊತೆಗೆ, ರಾಜ್ಯ ಬಿಜೆಪಿ ಮಹಿಳಾ ಮೋರ್ಚಾದ ಪ್ರಧಾನ ಕಾರ್ಯದರ್ಶಿಯಾಗಿಯೂ ಕೆಲಸ ಮಾಡುತ್ತಿದ್ದಾರೆ.

Category
ಕರಾವಳಿ ತರಂಗಿಣಿ