image image
ಬ್ರೇಕಿಂಗ್ ನ್ಯೂಸ್
ಬ್ರೇಕಿಂಗ್ ನ್ಯೂಸ್

ಕಾಶ್ಮೀರದ ಮೊಟ್ಟ ಮೊದಲ ಅಂತಾರಾಷ್ಟ್ರೀಯ ಮ್ಯಾರಥಾನ್‌ಗೆ ಸಿಎಂ ಒಮರ್ ಅಬ್ದುಲ್ಲಾ ಹಾಗು ಬಾಲಿವುಡ್ ನಟ ಸುನೀಲ್ ಶೆಟ್ಟಿ ಚಾಲನೆ

ಕಾಶ್ಮೀರದ ಮೊಟ್ಟ ಮೊದಲ ಅಂತಾರಾಷ್ಟ್ರೀಯ ಮ್ಯಾರಥಾನ್‌ಗೆ ಸಿಎಂ ಒಮರ್ ಅಬ್ದುಲ್ಲಾ ಹಾಗು ಬಾಲಿವುಡ್ ನಟ ಸುನೀಲ್ ಶೆಟ್ಟಿ ಚಾಲನೆ

ಜಮ್ಮು ಮತ್ತು ಕಾಶ್ಮೀರ : ಕಾಶ್ಮೀರದ ಮೊಟ್ಟ ಮೊದಲ ಅಂತಾರಾಷ್ಟ್ರೀಯ ಮ್ಯಾರಥಾನ್‌ಗೆ ಇಂದು ಬೆಳಿಗ್ಗೆ ಸಿಎಂ ಒಮರ್ ಅಬ್ದುಲ್ಲಾ ಚಾಲನೆ ನೀಡಿದರು. ಈ ಸಂದರ್ಭದಲ್ಲಿ ಬಾಲಿವುಡ್ ನಟ ಸುನೀಲ್ ಶೆಟ್ಟಿ ಜೊತೆಗಿದ್ದರು. ದೇಶ, ವಿದೇಶಗಳ ಅಂದಾಜು 2000 ಅಥ್ಲೀಟ್‌ಗಳು ಮ್ಯಾರಥಾನ್‌ನಲ್ಲಿ ಭಾಗಿಯಾಗಿದ್ದಾರೆ.

ಮ್ಯಾರಥಾನ್‌ನಲ್ಲಿ ಪಾಲ್ಗೊಂಡವರ ಪೈಕಿ ಭಾರತ, ಏಷ್ಯಾ ಚಿನ್ನದ ಪದಕ ವಿಜೇತರು ಮತ್ತು ಯುರೋಪ್ ಹಾಗು ಆಫ್ರಿಕಾದ ಪ್ರಮುಖ ದೂರ ಓಟಗಾರರು ಪಾಲ್ಗೊಂಡಿರುವುದು ಗಮನಾರ್ಹ. 42 ಕಿಲೋ ಮೀಟರ್‌ಗಳ ಪೂರ್ಣ ಮ್ಯಾರಥಾನ್ ಮತ್ತು 21 ಕಿಲೋ ಮೀಟರ್‌ಗಳ ಅರ್ಧ ಮ್ಯಾರಥಾನ್‌ ಎಂಬೆರಡು ವಿಭಾಗಗಳಲ್ಲಿ ಇಂದು ಓಟದ ಸ್ಪರ್ಧೆ ನಡೆಯುತ್ತಿದೆ.

ರಾಜ್ಯದ ಪ್ರವಾಸೋದ್ಯಮ ಇಲಾಖೆ ಮ್ಯಾರಥಾನ್ ಆಯೋಜಿಸಿದೆ. ಕಣಿವೆ ನಾಡಿನಲ್ಲಿ ಪರಿಸ್ಥಿತಿ ಸುಧಾರಿಸಿದೆ ಎಂಬುದನ್ನು ಜಗತ್ತಿಗೆ ತೋರಿಸುವುದು ಈ ಸ್ಪರ್ಧೆಯ ಆಯೋಜನೆಯ ಹಿಂದಿರುವ ಉದ್ದೇಶ.

Category
ಕರಾವಳಿ ತರಂಗಿಣಿ