ಬೈರುತ್: ಆಗ್ನೇಯ ಲೆಬನಾನ್ನ ಶೆಬಾ ಪಟ್ಟಣದ ಹೊರವಲಯದಲ್ಲಿರುವ ನೀರು ಪೂರೈಕೆ ಸ್ಥಾವರವು ಇಸ್ರೇಲ್ ನಡೆಸಿದ ವೈಮಾನಿಕ ದಾಳಿಯಲ್ಲಿ ಧ್ವಂಸಗೊಂಡಿದೆ ಎಂದು ಸ್ಥಳೀಯ ಅಧಿಕಾರಿಗಳು ತಿಳಿಸಿದ್ದಾರೆ.
ದಕ್ಷಿಣ ಲೆಬನಾನ್ ನ ಅಲ್-ಅರ್ಕೌಬ್, ಹಸ್ಬಯಾ ಮತ್ತು ಮರ್ಜೆಯೂನ್ ಪ್ರದೇಶಗಳಲ್ಲಿನ ಹಲವಾರು ಗ್ರಾಮಗಳು ಮತ್ತು ಪಟ್ಟಣಗಳಿಗೆ ಕುಡಿಯುವ ನೀರು ಪೂರೈಸುವ 'ಅಲ್-ಮಘರಾ' ಸ್ಪ್ರಿಂಗ್ ವಾಟರ್ ಯೋಜನೆಯ ಮುಖ್ಯ ನೀರು ಪೂರೈಕೆ ವ್ಯವಸ್ಥೆಯ ಮೇಲೆ ಇಸ್ರೇಲ್ ಯುದ್ಧ ವಿಮಾನದ ಮೂಲಕ ಶನಿವಾರ ಕ್ಷಿಪಣಿ ದಾಳಿ ನಡೆಸಿದೆ ಎಂದು ಶೆಬಾ ಪುರಸಭೆಯ ಮೂಲಗಳು ಕ್ಸಿನ್ಹುವಾ ಸುದ್ದಿ ಸಂಸ್ಥೆಗೆ ತಿಳಿಸಿವೆ.
"ದಾಳಿಯಿಂದಾಗಿ ಯೋಜನೆಯ ಮುಖ್ಯ ನಿರ್ಗಮನ ದ್ವಾರವು ಸ್ಫೋಟಗೊಂಡಿದ್ದು, ನೀರು ಹೊರಗೆ ಹರಿದು ಹೋಗಲಾರಂಭಿಸಿದೆ" ಎಂದು ಮೂಲಗಳು ತಿಳಿಸಿವೆ. ಏತನ್ಮಧ್ಯೆ, ಇಸ್ರೇಲಿ ಶೆಲ್ ದಾಳಿಯ ಪರಿಣಾಮದಿಂದ ನೀರು ಪೂರೈಕೆ ಯೋಜನೆಯ ಸೌಲಭ್ಯಗಳು ತೀವ್ರವಾಗಿ ಹಾನಿಗೊಳಗಾಗಿವೆ" ಎಂದು ಯೋಜನೆಯ ನಿರ್ವಹಣಾ ಜವಾಬ್ದಾರಿಯನ್ನು ಹೊಂದಿರುವ ದಕ್ಷಿಣ ಲೆಬನಾನ್ ವಾಟರ್ ಎಸ್ಟಾಬ್ಲಿಷ್ ಮೆಂಟ್ (ಎಸ್ಎಲ್ಡಬ್ಲ್ಯೂಇ) ಶನಿವಾರ ಎಂದು ಹೇಳಿದೆ.
ನಿರ್ವಹಣಾ ತಂಡಗಳಿಗೆ ರಕ್ಷಣೆ ಒದಗಿಸಲು ಮತ್ತು ಸೌಲಭ್ಯಗಳನ್ನು ದುರಸ್ತಿ ಮಾಡುವ ಸಲುವಾಗಿ ಹಾನಿಯನ್ನು ಪರಿಶೀಲಿಸಲು ಸಂಬಂಧಿತ ಅಧಿಕಾರಿಗಳೊಂದಿಗೆ ತುರ್ತು ಮತ್ತು ತೀವ್ರ ಸಂಪರ್ಕಗಳನ್ನು ಏರ್ಪಡಿಸಲಾಗಿದೆ ಎಂದು ಎಸ್ಎಲ್ಡಬ್ಲ್ಯೂಇ ಹೇಳಿದೆ.