ಬೆಂಗಳೂರು: ಕೇಂದ್ರ ಲೋಕಸೇವಾ ಆಯೋಗ ಇಂಜಿನಿಯರಿಂಗ್ ಸೇವಾ ಪರೀಕ್ಷೆ -2025ನ್ನು ಮುಂದೂಡಿದ್ದು, ಈ ಕುರಿತು ಅಧಿಕೃತ ಪ್ರಕಟಣೆ ಹೊರಡಿಸಿರುವ ಆಯೋಗ ಭಾರತೀಯ ರೈಲ್ವೆ ನಿರ್ವಹಣಾ ಸೇವಾ ಅಧಿಕಾರಿಗಳ ನೇಮಕಾತಿಯ ಯೋಜನೆಯಲ್ಲಿ ಬದಲಾವಣೆಯಿಂದಾಗಿ ಅಭ್ಯರ್ಥಿಗಳಿಗೆ ತಯಾರಿಗೆ ಸಮಯ ನೀಡುವ ಉದ್ದೇಶದಿಂದ ಈ ಕ್ರಮ ಕೈಗೊಳ್ಳಲಾಗಿದೆ ಎಂದಿದೆ. ಐಆರ್‌ಎಂಎಸ್‌ಗೆ ನೇಮಕಾತಿಯನ್ನು ನಾಗರಿಕ ಸೇವಾ ಪರೀಕ್ಷೆ ಮತ್ತು ಇಎಸ್ಇ ಎರಡರ ಮೂಲಕ ಮಾಡಲಾಗುವುದು ಎಂಬ ನಿರ್ಧಾರದ ಬಳಿಕ ಸರ್ಕಾರ ಈ ಮುಂದೂಡಿಕೆ ಮಾಡಲಾಗಿದೆ.
ಇಎಸ್ಇ-2025ರ ಆಕಾಂಕ್ಷಿಗಳಿಗೆ ಪರೀಕ್ಷೆ ತಯಾರಿಗೆ ಕಾಲಾವಕಾಶ ನೀಡುವ ಉದ್ದೇಶದಿಂದ ಇಎಸ್ಇಯ ಪೂರ್ವಭಾವಿ ಮತ್ತು ಮುಖ್ಯ ಪರೀಕ್ಷೆಯನ್ನು ಮುಂದೂಡಲಾಗಿದೆ ಎಂದು ಯುಪಿಎಸ್ಸಿ ತಿಳಿಸಿದೆ. ಮುಂದೂಡಿಕೆ ನಂತರ ಇದೀಗ ಇಎಸ್ಇ ಪೂರ್ವಭಾವಿ ಪರೀಕ್ಷೆ 2025ರ ಜೂನ್ 8 ಮತ್ತು ಆಗಸ್ಟ್ 10ರಂದು ನಡೆಸಲು ಯುಪಿಎಸ್ಸಿ ನಿರ್ಧರಿಸಿದೆ.