image image
ಬ್ರೇಕಿಂಗ್ ನ್ಯೂಸ್
ಬ್ರೇಕಿಂಗ್ ನ್ಯೂಸ್

ರಷ್ಯಾದಲ್ಲಿ ಭಾರತೀಯ ಚಲನಚಿತ್ರಗಳು ಜನಪ್ರಿಯ ಎಂದು ಸ್ನೇಹಿತ ಮೋದಿಗೆ ರಷ್ಯಾದ 'ಕೃತಜ್ಞತೆ' ಎಂದ ಪುಟಿನ್​

ರಷ್ಯಾದಲ್ಲಿ ಭಾರತೀಯ ಚಲನಚಿತ್ರಗಳು ಜನಪ್ರಿಯ ಎಂದು ಸ್ನೇಹಿತ ಮೋದಿಗೆ ರಷ್ಯಾದ 'ಕೃತಜ್ಞತೆ' ಎಂದ ಪುಟಿನ್​

ರಷ್ಯಾ : ಉಕ್ರೇನ್‌ನಲ್ಲಿ ಸುದೀರ್ಘ ಯುದ್ಧ ಕೊನೆಗೊಳಿಸಲು ಸಮಯವನ್ನು ನಿರ್ದಿಷ್ಟಪಡಿಸುವುದು ಕಷ್ಟ. ಯುದ್ಧದಲ್ಲಿ ಯಾವುದೇ ನಿಯೋಜಿತ ವೇಳಾಪಟ್ಟಿ ಇಲ್ಲ. ಆದರೆ, ತಮ್ಮ ದೇಶವು ಗೆಲ್ಲುತ್ತದೆ ಎಂದು ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಪ್ರತಿಪಾದಿಸಿದ್ದಾರೆ.

ಮಾಸ್ಕೋದಲ್ಲಿ ಶುಕ್ರವಾರ ಬ್ರಿಕ್ಸ್ ದೇಶಗಳ ಹಿರಿಯ ಸಂಪಾದಕರೊಂದಿಗೆ ನಡೆದ ಸಂವಾದದಲ್ಲಿ ಮಾತನಾಡಿರುವ ಪುಟಿನ್, ಯುದ್ಧದ ಪರಿಸ್ಥಿತಿಯ ಬಗ್ಗೆ ಪ್ರಧಾನಿ ನರೇಂದ್ರ ಮೋದಿಯವರ ಕಾಳಜಿಯನ್ನು ಶ್ಲಾಘಿಸಿದ್ದಾರೆ. 'ಬ್ರಿಕ್ಸ್ ಪಾಶ್ಚಿಮಾತ್ಯ ವಿರೋಧಿ ಅಲ್ಲ. ಆದರೆ, ಪಾಶ್ಚಿಮಾತ್ಯೇತರ' ಎಂಬ ಮೋದಿ ಅವರ ಹೇಳಿಕೆಗೆ ಭಾರತೀಯ ನಾಯಕ ಸೂಕ್ತವಾಗಿ ವಿಶ್ಲೇಷಿಸಿದ್ದಾರೆ ಎಂದಿದ್ದಾರೆ ಪುಟಿನ್.

ಇನ್ನು ವ್ಲಾಡಿಮಿರ್ ಪುಟಿನ್ ಆಯೋಜಿಸಿರುವ 16ನೇ ಬ್ರಿಕ್ಸ್ ಶೃಂಗಸಭೆ ಅಕ್ಟೋಬರ್ 22 - 23 ರಂದು ನಡೆಯಲಿದ್ದು, ಶೃಂಗಸಭೆಯಲ್ಲಿ ಪಾಲ್ಗೊಳ್ಳಲು ಮೋದಿ ರಷ್ಯಾದ ಕಜನ್‌ಗೆ ಭೇಟಿ ನೀಡಲಿದ್ದಾರೆ.

ಸಂವಾದದಲ್ಲಿ ಭಾರತೀಯ ಸಿನಿಮಾಗಳ ಬೆಳವಣಿಗೆ ಬಗ್ಗೆ ಉಲ್ಲೇಖಿಸಿ ಮಾತನಾಡಿದ ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್, "ಭಾರತೀಯ ಚಲನಚಿತ್ರಗಳು ರಷ್ಯಾದಲ್ಲಿ ಬಹಳ ಜನಪ್ರಿಯವಾಗಿವೆ. ಪ್ರಧಾನಿ ಮೋದಿ ಅವರನ್ನು ಭೇಟಿಯಾದಾಗ ಭಾರತೀಯ ಚಲನಚಿತ್ರಗಳಿಗೆ ಉತ್ತೇಜನ ನೀಡುವ ಬಗ್ಗೆ ಚರ್ಚಿಸಬಹುದು. ಭಾರತೀಯ ಸ್ನೇಹಿತರು ಆಸಕ್ತಿಯನ್ನು ಹೊಂದಿದ್ದರೆ, ರಷ್ಯಾದ ಮಾರುಕಟ್ಟೆಗೆ ಭಾರತೀಯ ಚಲನಚಿತ್ರಗಳನ್ನು ಉತ್ತೇಜಿಸಲು, ಅದಕ್ಕಾಗಿ ಸಾಮಾನ್ಯ ನೆಲೆಯನ್ನು ಕಂಡುಕೊಳ್ಳಲು ನಾವು ಸಕಾರಾತ್ಮಕವಾಗಿದ್ದೇವೆ" ಎಂದು ಭಾರತೀಯ​ ಸಿನಿಮಾದ ಬಗೆಗಿನ ತಮ್ಮ ಪ್ರೀತಿಯನ್ನು ಪುಟಿನ್​ ವ್ಯಕ್ತಪಡಿಸಿದರು.

Category
ಕರಾವಳಿ ತರಂಗಿಣಿ