ನವದೆಹಲಿ: ದೇಶದ ಜನರು ನ್ಯಾಯಾಂಗದ ವಿಚಾರಣೆಯಲ್ಲಿ ಭಾಗಿಯಾಗುವುದು ಮತ್ತು ಪಾರದರ್ಶಕತೆಯನ್ನು ಹೆಚ್ಚಿಸುವ ಉದ್ದೇಶದಿಂದ ಸುಪ್ರೀಂ ಕೋರ್ಟ್ ತನ್ನೆಲ್ಲಾ ಕಲಾಪಗಳನ್ನು ನೇರಪ್ರಸಾರ ಮಾಡಲು ನಿರ್ಧರಿಸಿದೆ. ಹೀಗಾಗಿ ಇನ್ನುಮುಂದೆ ಕೋರ್ಟ್ನ ಕಲಾಪಗಳನ್ನು ಅಧಿಕೃತ ಜಾಲತಾಣವಾದ https://appstreaming.sci.gov.in ಮೂಲಕ ಜನರು ವೀಕ್ಷಿಸಬಹುದು.
ಇದುವರೆಗೆ ಸುಪ್ರೀಂ ಕೋರ್ಟ್ ಸಾಂವಿಧಾನಿಕ ಪೀಠ ಮತ್ತು ರಾಷ್ಟ್ರೀಯ ಪ್ರಾಮುಖ್ಯತೆಯ ವಿಚಾರಣೆಗಳನ್ನು ಮಾತ್ರ ಯೂಟ್ಯೂಬ್ನಲ್ಲಿ ನೇರಪ್ರಸಾರ ಮಾಡಲಾಗುತ್ತಿತ್ತು. ಇತ್ತೀಚಿಗೆ ನೀಟ್-ಯಜಿ ವಿಚಾರಣೆ ಮತ್ತು ಆರ್.ಜಿ.ಕರ್ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯ ಪ್ರಕರಣ ನೇರಪ್ರಸಾರವಾಗಿದ್ದು, ಹೆಚ್ಚು ಜನರು ಕಲಾಪ ವೀಕ್ಷಿಸಿದ್ದರು