image image
ಬ್ರೇಕಿಂಗ್ ನ್ಯೂಸ್
ಬ್ರೇಕಿಂಗ್ ನ್ಯೂಸ್
ದೇಶ

ಷೇರುಮಾರುಕಟ್ಟೆಗೆ ಸಚಿನ್ ಹೂಡಿಕೆಯ ಕಂಪನಿ: ₹660 ಕೋಟಿ ಐಪಿಒ ಲಾಂಚ್

ಷೇರುಮಾರುಕಟ್ಟೆಗೆ ಸಚಿನ್ ಹೂಡಿಕೆಯ ಕಂಪನಿ: ₹660 ಕೋಟಿ ಐಪಿಒ ಲಾಂಚ್

ಮುಂಬೈ : ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡೂಲ್ಕರ್, ಬಾಲಿವುಡ್ ನಟ ಶಾರುಖ್ ಖಾನ್ ಹಾಗೂ ಮಾಧುರಿ ದೀಕ್ಷಿತ್ ಹೂಡಿಕೆ ಮಾಡಿರುವ ಐಷಾರಾಮಿ ಫ್ಯಾಷನ್ ಬ್ರ್ಯಾಂಡ್ 'ಪೆರ್ನಿಯಾಸ್ ಪಾಪ್-ಅಪ್ ಶಾಪ್'ನ ಮಾತೃ ಸಂಸ್ಥೆ 'ಪರ್ಪಲ್ ಸ್ಟೈಲ್ ಲ್ಯಾಬ್ಸ್' ಷೇರುಮಾರುಕಟ್ಟೆ ಪ್ರವೇಶಿಸಲು ಸಜ್ಜಾಗಿದೆ. ಸಂಸ್ಥೆಯು ₹660 ಕೋಟಿ ಮೌಲ್ಯದ ಆರಂಭಿಕ ಸಾರ್ವಜನಿಕ ಕೊಡುಗೆ (IPO) ಹೊರತರಲು ಯೋಜಿಸಿದ್ದು, ಭಾರತೀಯ ಷೇರುಮಾರುಕಟ್ಟೆ ನಿಯಂತ್ರಣ ಮಂಡಳಿಯಿಂದ (SEBI) ಅಗತ್ಯ ಅನುಮೋದನೆ ಪಡೆದುಕೊಂಡಿದೆ.

ಈ ಐಪಿಒ ಸಂಪೂರ್ಣವಾಗಿ ಹೊಸ ಷೇರುಗಳ ವಿತರಣೆಯನ್ನು (Fresh Issue) ಮಾತ್ರ ಒಳಗೊಂಡಿದ್ದು, ಹಾಲಿ ಹೂಡಿಕೆದಾರರ ಷೇರುಗಳನ್ನು ಮಾರಾಟ ಮಾಡುವ 'ಆಫರ್ ಫಾರ್ ಸೇಲ್' (OFS) ಪ್ರಕ್ರಿಯೆ ಇರುವುದಿಲ್ಲ. ಸಂಗ್ರಹವಾಗುವ ನಿಧಿಯನ್ನು ಕಂಪನಿಯ ಮೂಲಭೂತ ಸೌಕರ್ಯ ಅಭಿವೃದ್ಧಿ, ಹೊಸ ಎಕ್ಸ್‌ಪೀರಿಯನ್ಸ್ ಸೆಂಟರ್‌ಗಳ ಸ್ಥಾಪನೆ ಹಾಗೂ ವಹಿವಾಟು ವಿಸ್ತರಣೆಗೆ ಬಳಸಿಕೊಳ್ಳಲು ಸಂಸ್ಥೆ ನಿರ್ಧರಿಸಿದೆ.

2020ರಲ್ಲಿ ₹45 ಕೋಟಿ ಆದಾಯ ಹೊಂದಿದ್ದ ಈ ಸಂಸ್ಥೆಯು 2024ರ ವೇಳೆಗೆ ₹508 ಕೋಟಿ ತಲುಪುವ ಮೂಲಕ ಭಾರಿ ಬೆಳವಣಿಗೆ ಕಂಡಿದೆ. ಪ್ರಸ್ತುತ ಪರ್ಪಲ್ ಸ್ಟೈಲ್ ಸಂಸ್ಥೆಯ ಮೌಲ್ಯ ಸುಮಾರು ₹3,662 ಕೋಟಿ ಎಂದು ಅಂದಾಜಿಸಲಾಗಿದ್ದು, ಕ್ರಿಕೆಟ್‌ನಿಂದ ವಿದಾಯ ಪಡೆದ ಬಳಿಕ ಸಫಲ ಉದ್ಯಮಿಯಾಗಿ ಬೆಳೆಯುತ್ತಿರುವ ಸಚಿನ್ ತೆಂಡೂಲ್ಕರ್ ಅವರ ಹೂಡಿಕೆ ಪೋರ್ಟ್‌ಫೋಲಿಯೋಗೆ ಈ ಐಪಿಒ ಮತ್ತಷ್ಟು ಬಲ ತುಂಬಲಿದೆ.

Category
ಕರಾವಳಿ ತರಂಗಿಣಿ