image image
ಬ್ರೇಕಿಂಗ್ ನ್ಯೂಸ್
ಬ್ರೇಕಿಂಗ್ ನ್ಯೂಸ್
ದೇಶ

ಫಿಫಾ ಫೈನಲ್ ಧಮಾಕಾ: ಇಂದು ಕೇರಳದ ಎಲ್ಲಾ ಶಾಲಾ-ಕಾಲೇಜುಗಳಿಗೆ ರಜೆ ಘೋಷಣೆ!

ಫಿಫಾ ಫೈನಲ್ ಧಮಾಕಾ: ಇಂದು ಕೇರಳದ ಎಲ್ಲಾ ಶಾಲಾ-ಕಾಲೇಜುಗಳಿಗೆ ರಜೆ ಘೋಷಣೆ!

ತಿರುವನಂತಪುರಂ : ಕೇರಳದ ಜನರಿಗೆ ಫುಟ್ಬಾಲ್ ಎಂದರೆ ಅದು ಕೇವಲ ಕ್ರೀಡೆಯಲ್ಲ, ಬದಲಿಗೆ ಅವರ ಜೀವನದ ಒಂದು ಅವಿಭಾಜ್ಯ ಅಂಗವಾಗಿದೆ. ಸ್ಥಳೀಯ ಮಟ್ಟದ ಕ್ಲಬ್ ಪಂದ್ಯಗಳಿಂದ ಹಿಡಿದು ಅಂತಾರಾಷ್ಟ್ರೀಯ ಮಟ್ಟದ ಪಂದ್ಯಗಳವರೆಗೆ ಮಲಯಾಳಿಗಳು ಯಾವುದೇ ಪಂದ್ಯವನ್ನು ತಪ್ಪದೇ ವೀಕ್ಷಿಸುತ್ತಾರೆ. ಇದೀಗ ಅಮೆರಿಕ, ಮೆಕ್ಸಿಕೊ ಹಾಗೂ ಕೆನಡಾ ದೇಶಗಳು ಜಂಟಿಯಾಗಿ ಆಯೋಜಿಸಿರುವ ಫಿಫಾ ವಿಶ್ವಕಪ್‌ನ ರೋಮಾಂಚಕ ಫೈನಲ್ ಪಂದ್ಯವು ನಿನ್ನೆ ಮಧ್ಯರಾತ್ರಿ ನಡೆದಿದ್ದು, ವಿಶ್ವದ ಬಲಿಷ್ಠ ತಂಡಗಳಾದ ಸ್ಪೇನ್ ಹಾಗೂ ಅರ್ಜೆಂಟೀನಾ ಪಂದ್ಯದಲ್ಲಿ ಸ್ಪೇನ್ ಅರ್ಜೆಂಟಿನವನ್ನು 1-0 ಗೋಳುಗಳಿಂದ ಮಣಿಸಿದೆ.

ವಿಶ್ವ ಪ್ರಸಿದ್ಧ ಫಿಫಾ ವಿಶ್ವಕಪ್ ಫೈನಲ್ ಪಂದ್ಯಾವಳಿ ಮುಗಿಯಲು ಮಧ್ಯರಾತ್ರಿ ದಾಟಿ, ಸರಿಸುಮಾರು ಇಂದು ಬೆಳಗಿನ ಜಾವ 4 ಗಂಟೆಯಾಗಿದೆ. ಇಷ್ಟು ತಡವಾಗಿ ಪಂದ್ಯ ಮುಗಿಯುವುದರಿಂದ ಮಕ್ಕಳು ನಿದ್ದೆಗೆಟ್ಟು ಪಂದ್ಯ ನೋಡಿದರೆ ಮರುದಿನ ಶಾಲೆಗೆ ಬರಲು ಕಷ್ಟವಾಗುತ್ತದೆ ಎಂಬ ಕಾರಣಕ್ಕೆ ಕೇರಳದ ವಿದ್ಯಾರ್ಥಿಗಳು ಸಾಮಾಜಾಲತಾಣಗಳ ಮೂಲಕ ಮುಖ್ಯಮಂತ್ರಿಗಳಿಗೆ ರಜೆ ನೀಡುವಂತೆ ವಿಶೇಷ ಮನವಿ ಮಾಡಿದ್ದರು.

ಮಕ್ಕಳ ಮುದ್ದಾದ ಕೋರಿಕೆ ಹಾಗೂ ಕೇರಳದ ಜನರಿಗಿರುವ ಫುಟ್ಬಾಲ್ ಕ್ರೇಜ್ ಅನ್ನು ಪರಿಗಣಿಸಿರುವ ನೂತನ ಮುಖ್ಯಮಂತ್ರಿ ವಿ.ಡಿ. ಸತೀಶನ್ ಅವರು ಇಂದು ರಾಜ್ಯದ ಎಲ್ಲಾ ಶಾಲಾ-ಕಾಲೇಜುಗಳಿಗೆ ರಜೆ ಘೋಷಿಸಿದ್ದಾರೆ. ಎಲ್ಲರೂ ಯಾವುದೇ ಆತಂಕವಿಲ್ಲದೆ ಖುಷಿಯಿಂದ ಫಿಫಾ ಫೈನಲ್ ಮ್ಯಾಚ್ ನೋಡಿ ಆನಂದಿಸಿ ಎಂದು ಅವರು ತಿಳಿಸಿದ್ದಾರೆ. ಆದರೆ, ಕೇರಳದಲ್ಲಿ ಈಗಾಗಲೇ ನಿಗದಿಯಾಗಿರುವ ಲೋಕಸೇವಾ ಆಯೋಗದ (ಪಿಎಸ್‌ಸಿ) ಪರೀಕ್ಷೆಗಳು ಹಾಗೂ ವಿವಿಧ ವಿಶ್ವವಿದ್ಯಾಲಯಗಳ ಪರೀಕ್ಷೆಗಳಿಗೆ ಈ ರಜೆ ಅನ್ವಯಿಸುವುದಿಲ್ಲ ಎಂದು ಸರ್ಕಾರದ ಅಧಿಕೃತ ಆದೇಶದಲ್ಲಿ ಸ್ಪಷ್ಟಪಡಿಸಲಾಗಿದೆ.

Category
ಕರಾವಳಿ ತರಂಗಿಣಿ