image image
ಬ್ರೇಕಿಂಗ್ ನ್ಯೂಸ್
ಬ್ರೇಕಿಂಗ್ ನ್ಯೂಸ್
ದೇಶ

ಸೇನೆಗೆ ಲಗ್ಗೆ ಇಡಲಿದೆ ಭಾರತದ ಸ್ವದೇಶಿ ಕಿಲ್ಲರ್ ಮಿಸೈಲ್ 'ಅನಂತ ಶಸ್ತ್ರ'

ಸೇನೆಗೆ ಲಗ್ಗೆ ಇಡಲಿದೆ ಭಾರತದ ಸ್ವದೇಶಿ ಕಿಲ್ಲರ್ ಮಿಸೈಲ್ 'ಅನಂತ ಶಸ್ತ್ರ'

ನವದೆಹಲಿ : ಭಾರತೀಯ ಸಶಸ್ತ್ರ ಪಡೆಗಳ ಬಲವನ್ನು ಮತ್ತಷ್ಟು ಹೆಚ್ಚಿಸಲು ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆ (DRDO) ಅಭಿವೃದ್ಧಿಪಡಿಸಿರುವ ಸಂಪೂರ್ಣ ಸ್ವದೇಶಿ ತಂತ್ರಜ್ಞಾನದ ‘ಅನಂತ ಶಸ್ತ್ರ’ ವಾಯು ರಕ್ಷಣಾ ಕ್ಷಿಪಣಿ ವ್ಯವಸ್ಥೆಯು (Air Defence System) ಸೇರ್ಪಡೆಗೊಳ್ಳಲು ಸಜ್ಜಾಗಿದೆ. ಕೇಂದ್ರ ರಕ್ಷಣಾ ಸಚಿವಾಲಯವು ಸುಮಾರು ₹30,000 ಕೋಟಿ ಮೌಲ್ಯದ ಈ ಅತ್ಯಾಧುನಿಕ ಕ್ವಿಕ್ ರಿಯಾಕ್ಷನ್ ಸರ್ಫೇಸ್-ಟು-ಏರ್ ಮಿಸೈಲ್ (QRSAM) ವ್ಯವಸ್ಥೆಯ ಬೃಹತ್ ಉತ್ಪಾದನೆಗೆ ಶೀಘ್ರದಲ್ಲೇ ಅಂತಿಮ ಅನುಮೋದನೆ ನೀಡುವ ಸಾಧ್ಯತೆಯಿದೆ. ಭಾರತದ ವಾಯು ರಕ್ಷಣಾ ಸಾಮರ್ಥ್ಯವನ್ನು ಜಾಗತಿಕ ಮಟ್ಟಕ್ಕೆ ಕೊಂಡೊಯ್ಯುವ ನಿಟ್ಟಿನಲ್ಲಿ ಇದು ಅತ್ಯಂತ ಮಹತ್ವದ ಹೆಜ್ಜೆಯಾಗಿದೆ.

ಈಗಾಗಲೇ ಎಲ್ಲಾ ಕಠಿಣ ಹಂತದ ಪರೀಕ್ಷೆಗಳನ್ನು ಯಶಸ್ವಿಯಾಗಿ ಪೂರ್ಣಗೊಳಿಸಿರುವ 'ಅನಂತ ಶಸ್ತ್ರ', ಪ್ರಸ್ತುತ ಸೇನೆಯಲ್ಲಿ ಬಳಕೆಯಲ್ಲಿರುವ ಹಳೆಯದಾದ ರಷ್ಯಾ ಮೂಲದ 'OSA-AK' ವಾಯು ರಕ್ಷಣಾ ವ್ಯವಸ್ಥೆಯ ಸ್ಥಾನವನ್ನು ತುಂಬಲಿದೆ. ಗಡಿಯುದ್ದಕ್ಕೂ ಅತ್ಯಂತ ಕಡಿಮೆ ಎತ್ತರದಲ್ಲಿ ಹಾರಾಟ ನಡೆಸುವ ಶತ್ರು ಪಾಳಯದ ಅತ್ಯಾಧುನಿಕ ಡ್ರೋನ್‌ಗಳು, ಹೆಲಿಕಾಪ್ಟರ್‌ಗಳು, ಫೈಟರ್ ಜೆಟ್‌ಗಳು ಮತ್ತು ಕ್ರೂಸ್ ಕ್ಷಿಪಣಿಗಳನ್ನು ಆಕಾಶದಲ್ಲೇ ಗುರುತಿಸಿ, ಕ್ಷಣಾರ್ಧದಲ್ಲಿ ಹೊಡೆದುರುಳಿಸುವ ದಕ್ಷ ಸಾಮರ್ಥ್ಯವನ್ನು ಹೊಂದುವಂತೆ ಈ QRSAM ವ್ಯವಸ್ಥೆಯನ್ನು ವಿಶೇಷವಾಗಿ ವಿನ್ಯಾಸಗೊಳಿಸಲಾಗಿದೆ.

ಚಲಿಸುತ್ತಿರುವಾಗಲೇ ಶತ್ರುಗಳ ಮೇಲೆ ನಿಖರ ದಾಳಿ ನಡೆಸಬಲ್ಲ ಈ ಮೊಬೈಲ್ ಕ್ಷಿಪಣಿ ತಂತ್ರಜ್ಞಾನವು ಭಾರತೀಯ ಗಡಿಭಾಗಗಳಲ್ಲಿ ಶತ್ರುಗಳ ಯಾವುದೇ ವಾಯುಗಾಮಿ ಆಕ್ರಮಣಗಳನ್ನು ತಡೆಯಲು ಹೆಡ್ಗೆಯಾಗಲಿದೆ. ದೇಶೀಯ ರಕ್ಷಣಾ ಉತ್ಪಾದನೆಗೆ ಹಾಗೂ 'ಆತ್ಮನಿರ್ಭರ ಭಾರತ' ಯೋಜನೆಗೆ ಈ ಹೆಜ್ಜೆ ದೊಡ್ಡ ಉತ್ತೇಜನ ನೀಡಲಿದ್ದು, ಭಾರತೀಯ ಸೇನೆಗೆ ಹೊಸದೊಂದು ಭದ್ರತಾ ಕವಚವನ್ನು ಒದಗಿಸಲಿದೆ ಎಂದು ರಕ್ಷಣಾ ಮೂಲಗಳು ತಿಳಿಸಿವೆ.

Category
ಕರಾವಳಿ ತರಂಗಿಣಿ