image image
ಬ್ರೇಕಿಂಗ್ ನ್ಯೂಸ್
ಬ್ರೇಕಿಂಗ್ ನ್ಯೂಸ್
ದೇಶ

ಭಾರತದ ರಾಜಕೀಯ ಇತಿಹಾಸದಲ್ಲೇ ಹೊಸ ದಾಖಲೆ: ಅತ್ಯಂತ ದೀರ್ಘಾವಧಿ ದೇಶ ಮುನ್ನಡೆಸಿದ ಪ್ರಧಾನಿ ನರೇಂದ್ರ ಮೋದಿ

ಭಾರತದ ರಾಜಕೀಯ ಇತಿಹಾಸದಲ್ಲೇ ಹೊಸ ದಾಖಲೆ: ಅತ್ಯಂತ ದೀರ್ಘಾವಧಿ ದೇಶ ಮುನ್ನಡೆಸಿದ ಪ್ರಧಾನಿ ನರೇಂದ್ರ ಮೋದಿ

ನವದೆಹಲಿ : ಭಾರತದ ಪ್ರಜಾಪ್ರಭುತ್ವದ ಇತಿಹಾಸದಲ್ಲಿ ಇದೊಂದು ಅತ್ಯಂತ ಅಪರೂಪದ ಹಾಗೂ ಅಭೂತಪೂರ್ವ ಸಂದರ್ಭ ಎದುರಾಗಿದೆ. 2014ರ ಮೇ 26 ರಂದು ದೇಶದ ಪ್ರಧಾನಿಯಾಗಿ ಮೊದಲ ಬಾರಿಗೆ ಪ್ರಮಾಣ ವಚನ ಸ್ವೀಕರಿಸಿದ್ದ ನರೇಂದ್ರ ಮೋದಿ ಅವರು, 2026ರ ಜೂನ್ 10ಕ್ಕೆ ಭರ್ತಿ 4,399 ಸತತ ದಿನಗಳನ್ನು ಅಧಿಕಾರಾವಧಿಯಲ್ಲಿ ಪೂರೈಸಲಿದ್ದಾರೆ. ಆ ಮೂಲಕ ಸ್ವತಂತ್ರ ಭಾರತದ ರಾಜಕೀಯ ಇತಿಹಾಸದಲ್ಲೇ ಅತ್ಯಂತ ದೀರ್ಘಾವಧಿಯ ನಿರಂತರ ಚುನಾಯಿತ ಪ್ರಧಾನಿ ಎಂಬ ಹೆಗ್ಗಳಿಕೆಗೆ ಪಾತ್ರರಾಗಲಿದ್ದಾರೆ.

ಸ್ವತಂತ್ರ ಭಾರತದ ಮೊದಲ ಸಾರ್ವತ್ರಿಕ ಚುನಾವಣೆಯ ನಂತರ ಅಂದರೆ ಮೇ 13, 1952 ರಂದು ಅಧಿಕಾರ ವಹಿಸಿಕೊಂಡು, 1964 ಮೇ 27 ರವರೆಗೆ ಸತತ 4,398 ದಿನಗಳ ಕಾಲ ದೇಶ ಮುನ್ನಡೆಸಿದ್ದ ನೆಹರೂ ಅವರ ಹೆಸರಲ್ಲಿದ್ದ ಆರು ದಶಕಗಳ ಹಳೆಯ ದಾಖಲೆ ಈಗ ಇತಿಹಾಸದ ಪುಟ ಸೇರಲಿದೆ. ನೆಹರೂ ಅವರ ಈ ದಾಖಲೆಯನ್ನು ಮೀರಿಸುವ ಮೂಲಕ ಪ್ರಧಾನಿ ಮೋದಿಯವರು ಭಾರತದ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಹೊಸದೊಂದು ಮೈಲಿಗಲ್ಲು ಸ್ಥಾಪಿಸಲಿದ್ದಾರೆ.

ಪ್ರಧಾನಿ ಮೋದಿ ಅವರು ಈಗಾಗಲೇ 2025ರ ಜುಲೈ 25ರಂದು ಮಾಜಿ ಪ್ರಧಾನಿ ಇಂದಿರಾ ಗಾಂಧಿ ಅವರ ಸತತ 4,077 ದಿನಗಳ ಅಧಿಕಾರದ ಅವಧಿಯ ದಾಖಲೆಯನ್ನು ಹಿಂದಿಕ್ಕಿ ದ್ವಿತೀಯ ಸ್ಥಾನಕ್ಕೇರಿದ್ದರು. ಈಗ ಜೂನ್ 10ರಂದು ನೆಹರೂ ಅವರ ದಾಖಲೆಯನ್ನು ಮೀರಿಸಿ ಮೊದಲ ಸ್ಥಾನ ಅಲಂಕರಿಸಲಿದ್ದಾರೆ. ಇದು ಭಾರತದ ಪ್ರಜಾಸತ್ತಾತ್ಮಕ ಇತಿಹಾಸದಲ್ಲಿ ಅವರ ಜನಪ್ರಿಯತೆ ಮತ್ತು ಸುದೀರ್ಘ ರಾಜಕೀಯ ಮುನ್ನಡೆಗೆ ಸಾಕ್ಷಿಯಾಗಿದೆ.

Category
ಕರಾವಳಿ ತರಂಗಿಣಿ