image image
ಬ್ರೇಕಿಂಗ್ ನ್ಯೂಸ್
ಬ್ರೇಕಿಂಗ್ ನ್ಯೂಸ್
ದೇಶ

ಕೈಲಾಸ ಮಾನಸ ಸರೋವರ ಯಾತ್ರೆಗೆ ನೇಪಾಳ ತೀವ್ರ ಆಕ್ಷೇಪ: ಭಾರತ-ಚೀನಾ ವಿರುದ್ಧ ಬಲೇನ್ ಶಾ ಸರ್ಕಾರ ಕಿಡಿ

ಕೈಲಾಸ ಮಾನಸ ಸರೋವರ ಯಾತ್ರೆಗೆ ನೇಪಾಳ ತೀವ್ರ ಆಕ್ಷೇಪ: ಭಾರತ-ಚೀನಾ ವಿರುದ್ಧ ಬಲೇನ್ ಶಾ ಸರ್ಕಾರ ಕಿಡಿ

ನವದೆಹಲಿ : ​ಕೈಲಾಸ ಮಾನಸ ಸರೋವರ ಯಾತ್ರೆಗಾಗಿ ಲಿಪುಲೇಕ್ ಪಾಸ್ ಮಾರ್ಗವನ್ನು ಬಳಸುವ ಭಾರತ ಮತ್ತು ಚೀನಾದ ಕ್ರಮಕ್ಕೆ ನೇಪಾಳದ ನೂತನ ಸರ್ಕಾರವು ತೀವ್ರ ವಿರೋಧ ವ್ಯಕ್ತಪಡಿಸಿದೆ. ಕೇವಲ ಒಂದು ತಿಂಗಳ ಹಿಂದೆಯಷ್ಟೇ ಅಧಿಕಾರಕ್ಕೆ ಬಂದಿರುವ ಬಲೇನ್ ಶಾ ನೇತೃತ್ವದ ಸರ್ಕಾರವು, ಲಿಪುಲೇಕ್ ಪಾಸ್ ಪ್ರದೇಶವು ವಿವಾದಾತ್ಮಕ ಭೂಭಾಗವಾಗಿದ್ದು, ಇಲ್ಲಿ ಭಾರತ ಹಾಗೂ ಚೀನಾ ಏಕಪಕ್ಷೀಯವಾಗಿ ಯಾತ್ರಾರ್ಥಿಗಳ ಸಂಚಾರ ಮತ್ತು ವ್ಯಾಪಾರ-ವಹಿವಾಟು ನಡೆಸುತ್ತಿರುವುದು ಸರಿಯಲ್ಲ ಎಂದು ಆಕ್ಷೇಪಿಸಿದೆ. ಈ ಕುರಿತು ಅಧಿಕೃತ ಪ್ರಕಟಣೆ ಹೊರಡಿಸಿರುವ ನೇಪಾಳದ ವಿದೇಶಾಂಗ ವ್ಯವಹಾರಗಳ ಸಚಿವಾಲಯವು, ಮಾಧ್ಯಮಗಳಲ್ಲಿ ಈ ಯಾತ್ರೆಯ ಬಗ್ಗೆ ವ್ಯಕ್ತವಾಗುತ್ತಿರುವ ಕಳವಳಗಳನ್ನು ಗಮನಿಸಿದ್ದು, ನೇಪಾಳದ ಸಾರ್ವಭೌಮತ್ವಕ್ಕೆ ಧಕ್ಕೆಯಾಗುವ ಯಾವುದೇ ಚಟುವಟಿಕೆಯನ್ನು ಸಹಿಸುವುದಿಲ್ಲ ಎಂದು ಎಚ್ಚರಿಸಿದೆ.

​ನೇಪಾಳದ ಇತಿಹಾಸ ಮತ್ತು ಗಡಿ ಒಪ್ಪಂದಗಳನ್ನು ಉಲ್ಲೇಖಿಸಿರುವ ಸಚಿವಾಲಯವು, 1816ರ ಸುಗಾಲಿ ಒಪ್ಪಂದದ ಪ್ರಕಾರ ಲಿಂಪಿಯಾಧುರ, ಲಿಪುಲೇಕ್ ಮತ್ತು ಮಹಾಕಾಳಿ ನದಿಯ ಪೂರ್ವ ಭಾಗದಲ್ಲಿರುವ ಕಾಲಾಪಾನಿ ಪ್ರದೇಶಗಳು ನೇಪಾಳದ ಅವಿಭಾಜ್ಯ ಅಂಗಗಳಾಗಿವೆ ಎಂದು ಪುನರುಚ್ಚರಿಸಿದೆ. ಈ ಪ್ರದೇಶದ ಮೂಲಕ ಭಾರತ ಮತ್ತು ಚೀನಾ ಕೈಗೊಂಡಿರುವ ಒಪ್ಪಂದಗಳು ನೇಪಾಳದ ಒಪ್ಪಿಗೆಯಿಲ್ಲದೆ ನಡೆಯುತ್ತಿರುವುದು ಅಂತರಾಷ್ಟ್ರೀಯ ನಿಯಮಗಳ ಉಲ್ಲಂಘನೆ ಎಂದು ಬಲೇನ್ ಶಾ ಸರ್ಕಾರ ಪ್ರತಿಪಾದಿಸಿದೆ. ಕಳೆದ ಕೆಲವು ವರ್ಷಗಳಿಂದ ಈ ಮಾರ್ಗದ ಕುರಿತು ಭಾರತ ಮತ್ತು ನೇಪಾಳದ ನಡುವೆ ರಾಜತಾಂತ್ರಿಕ ಸಂಘರ್ಷ ನಡೆಯುತ್ತಲೇ ಇರುವುದು ಈಗ ಮತ್ತೆ ಮುನ್ನೆಲೆಗೆ ಬಂದಂತಾಗಿದೆ.

Category
ಕರಾವಳಿ ತರಂಗಿಣಿ