image image
ಬ್ರೇಕಿಂಗ್ ನ್ಯೂಸ್
ಬ್ರೇಕಿಂಗ್ ನ್ಯೂಸ್
ದೇಶ

ಅಮೆರಿಕ ಮತ್ತು ಇಸ್ರೇಲ್ ದಬ್ಬಾಳಿಕೆಯ ವಿರುದ್ಧ ಗುಡುಗಿದ ಭಾರತದ ಇರಾನ್ ಪ್ರತಿನಿಧಿ ಅಬ್ದುಲ್ ಮಜೀದ್ ಹಕೀಮ್ ಇಲಾಹಿ

ಅಮೆರಿಕ ಮತ್ತು ಇಸ್ರೇಲ್ ದಬ್ಬಾಳಿಕೆಯ ವಿರುದ್ಧ ಗುಡುಗಿದ ಭಾರತದ ಇರಾನ್ ಪ್ರತಿನಿಧಿ ಅಬ್ದುಲ್ ಮಜೀದ್ ಹಕೀಮ್ ಇಲಾಹಿ

ನವದೆಹಲಿ : ​ಇರಾನ್ ಮತ್ತು ಅಮೆರಿಕ-ಇಸ್ರೇಲ್ ಮೈತ್ರಿಕೂಟದ ನಡುವಿನ ಸಂಘರ್ಷವು ಜಾಗತಿಕ ಮಟ್ಟದಲ್ಲಿ ತಲ್ಲಣ ಸೃಷ್ಟಿಸಿರುವ ಬೆನ್ನಲ್ಲೇ, ಭಾರತದಲ್ಲಿನ ಇರಾನ್ ಸುಪ್ರೀಂ ಲೀಡರ್ ಪ್ರತಿನಿಧಿ ಅಬ್ದುಲ್ ಮಜೀದ್ ಹಕೀಮ್ ಇಲಾಹಿ ಶನಿವಾರ ದೆಹಲಿಯಲ್ಲಿ ಅತ್ಯಂತ ಕಟು ಶಬ್ದಗಳಲ್ಲಿ ಅಮೆರಿಕದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ಇರಾನ್ ಎಂದಿಗೂ ಯುದ್ಧದ ಪರವಾಗಿಲ್ಲ ಮತ್ತು ಶಾಂತಿಯನ್ನು ಬಯಸುವ ರಾಷ್ಟ್ರವಾಗಿದೆ, ಆದರೆ ಅಮೆರಿಕ ಮತ್ತು ಇಸ್ರೇಲ್‌ನ ನಿರಂತರ ಪ್ರಚೋದನಕಾರಿ ದಾಳಿಗಳು ನಮ್ಮನ್ನು ಅನಿವಾರ್ಯವಾಗಿ ತಿರುಗೇಟು ನೀಡುವ ಪರಿಸ್ಥಿತಿಗೆ ತಳ್ಳಿವೆ ಎಂದು ಅವರು ಸ್ಪಷ್ಟಪಡಿಸಿದ್ದಾರೆ.

​ಬೇರೆ ದೇಶಗಳ ಮೇಲೆ ತಮ್ಮ ಅಧಿಕಾರವನ್ನು ಚಲಾಯಿಸಲು ಮತ್ತು ಇಚ್ಛೆಯನ್ನು ಹೇರಲು ಅಮೆರಿಕಕ್ಕೆ ಹಕ್ಕು ನೀಡಿದವರು ಯಾರು ಎಂದು ಪ್ರಶ್ನಿಸಿದ ಅವರು, ಪ್ರಸ್ತುತ ಪರಿಸ್ಥಿತಿಯು ಯುದ್ಧವೂ ಅಲ್ಲದ ಮತ್ತು ಶಾಂತಿಯೂ ಇಲ್ಲದ ವಿಚಿತ್ರ ಸ್ಥಿತಿಯಲ್ಲಿದೆ ಎಂದು ಬಣ್ಣಿಸಿದರು. ಸಂಘರ್ಷದ ಭೀಕರತೆಯನ್ನು ವಿವರಿಸುವ ಸಂದರ್ಭದಲ್ಲಿ, ದಾಳಿಗಳಿಂದಾಗಿ 175 ಶಾಲಾ ವಿದ್ಯಾರ್ಥಿನಿಯರು ಪ್ರಾಣ ಕಳೆದುಕೊಂಡಿರುವುದು ಅತ್ಯಂತ ನೋವಿನ ಸಂಗತಿ ಎಂದು ವಿಷಾದಿಸಿದರು. ಇದೇ ವೇಳೆ ಇರಾನ್‌ನ ಸುಪ್ರೀಂ ಲೀಡರ್ ಆಯತೊಲ್ಲಾ ಅಲಿ ಖಮೇನಿ ಸೇರಿದಂತೆ ಹಲವು ಪ್ರಮುಖ ಸಚಿವರು ಮತ್ತು ಕಮಾಂಡರ್‌ಗಳು ಹುತಾತ್ಮರಾಗಿರುವುದನ್ನು ಅವರು ದೃಢಪಡಿಸಿದರು. ಇರಾನ್ ಮೇಲೆ ನಡೆಯುತ್ತಿರುವ ಈ ದಬ್ಬಾಳಿಕೆಯ ವಿರುದ್ಧ ಜಾಗತಿಕ ಸಮುದಾಯವು ಗಮನ ಹರಿಸಬೇಕೆಂದು ಅವರು ಈ ಸಂದರ್ಭದಲ್ಲಿ ಮನವಿ ಮಾಡಿದರು.

Category
ಕರಾವಳಿ ತರಂಗಿಣಿ