ಜೈಪುರ : ಮಂಗಳವಾರ ಪ್ರಧಾನಿ ನರೇಂದ್ರ ಮೋದಿ ಅವರು ರಾಜಸ್ಥಾನದಲ್ಲಿ ಉದ್ಘಾಟಿಸಬೇಕಿದ್ದ ₹80000 ಕೋಟಿ ರು. ವೆಚ್ಚದ ತೈಲ ಶುದ್ಧೀಕರಣ ಘಟಕದಲ್ಲಿ ಸೋಮವಾರ ಬೆಂಕಿ ಅವಘಡ ಸಂಭವಿಸಿದ್ದು, ಭಾರೀ ಹಾನಿಯಾಗಿದೆ. ಹೀಗಾಗಿ ಉದ್ಘಾಟನೆ ಮುಂದೂಡಲಾಗಿದೆ. ರಾಜಸ್ಥಾನದ ಬಲೋತ್ರಾದ ಪಚ್ಪದ್ರಾದಲ್ಲಿ ಹಿಂದೂಸ್ತಾನ್ ಪೆಟ್ರೋಲಿಯಂ ಕಾರ್ಪೋರೆಷನ್ ಮತ್ತು ರಾಜ್ಯ ಸರ್ಕಾರದ ಜಂಟಿ ಉದ್ಯಮದಲ್ಲಿ ಘಟಕ ನಿರ್ಮಾಣವಾಗಿತ್ತು. ಇದು ದೇಶದ ಮೊದಲ ಗ್ರೀನ್‌ಫೀಲ್ಡ್ ರಿಫೈನರಿ ಎನ್ನುವ ಹೆಗ್ಗಳಿಕೆಗೂ ಪಾತ್ರವಾಗಿದೆ. ಆದರೆ ರಿಫೈನರಿಯ ಕಚ್ಚಾ ಭಟ್ಟಿ ಇಳಿಸುವಿಕೆ ಘಟಕದ ವಿಭಾಗದಲ್ಲಿ ಬೆಂಕಿ ಕಾಣಿಸಿಕೊಂಡಿದೆ.19ಕ್ಕೂ ಹೆಚ್ಚು ಅಗ್ನಿಶಾಮಕ ವಾಹನಗಳು ಸ್ಥಳಕ್ಕಾಗಮಿಸಿ ಬೆಂಕಿ ತಹಬದಿಗೆ ತರಲು ಯತ್ನಿಸಿವೆ. ಘಟನೆ ಕಾರಣ ಉದ್ಘಾಟನಾ ಕಾರ್ಯಕ್ರಮವನ್ನು ಮುಂದೂಡಲಾಗಿದೆ. ಬೆಂಕಿ ಅವಘಡದಿಂದಾಗಿ ಉದ್ಘಾಟನಾ ಕಾರ್ಯಕ್ರಮವನ್ನು ಮುಂದೂಡಲಾಗಿದೆ. ಈ ಬಗ್ಗೆ ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಸಚಿವಾಲಯವು X ನಲ್ಲಿ ಪೋಸ್ಟ್ ಮಾಡಿದ್ದು, HPCL ರಾಜಸ್ಥಾನ ರಿಫೈನರಿ ಲಿಮಿಟೆಡ್ (HRRL) ನಲ್ಲಿರುವ ಕಚ್ಚಾ ಬಟ್ಟಿ ಇಳಿಸುವಿಕೆ ಘಟಕ (CDU) ಬಳಿ ಬೆಂಕಿ ಕಾಣಿಸಿಕೊಂಡಿದೆ. ಘಟನೆಯ ಕಾರಣ(ಗಳನ್ನು)ತಿಳಿಯಲು ಮತ್ತು ಅಗತ್ಯ ಪರಿಹಾರ ಕ್ರಮಗಳನ್ನು ಕೈಗೊಳ್ಳಲು ತನಿಖೆಯನ್ನು ಪ್ರಾರಂಭಿಸಲಾಗಿದೆ. ಸಮರ್ಪಣೆಗೆ ಪರಿಷ್ಕೃತ ದಿನಾಂಕವನ್ನು ಸೂಕ್ತ ಸಮಯದಲ್ಲಿ ಘೋಷಿಸಲಾಗುವುದು' ತಿಳಿಸಿದೆ.