image image
ಬ್ರೇಕಿಂಗ್ ನ್ಯೂಸ್
ಬ್ರೇಕಿಂಗ್ ನ್ಯೂಸ್
ದೇಶ

ಬಾಬರಿ ಮಸೀದಿ ನಿರ್ಮಿಸುವವರ ಜೊತೆ ಇರುವುದಕ್ಕಿಂತ ಇನ್ನೂ 20 ವರ್ಷ ವಿಪಕ್ಷದಲ್ಲಿರುವುದೇ ಲೇಸು : ಅಮಿತ್ ಶಾ

ಬಾಬರಿ ಮಸೀದಿ ನಿರ್ಮಿಸುವವರ ಜೊತೆ ಇರುವುದಕ್ಕಿಂತ ಇನ್ನೂ 20 ವರ್ಷ ವಿಪಕ್ಷದಲ್ಲಿರುವುದೇ ಲೇಸು : ಅಮಿತ್ ಶಾ

ಕೋಲ್ಕತ್ತಾ : ಪಶ್ಚಿಮ ಬಂಗಾಳದಲ್ಲಿ ಚುನಾವಣೆಗೂ ಮುನ್ನ ತೀವ್ರ ಸಂಚಲನ ಸೃಷ್ಟಿಸಿರುವ ಅಮಾನತುಗೊಂಡಿರುವ ತೃಣಮೂಲ ಕಾಂಗ್ರೆಸ್ ಶಾಸಕ ಹುಮಾಯೂನ್ ಕಬೀರ್ ಅವರ 1000 ಕೋಟಿ ಡೀಲ್​ ಆರೋಪದ ಸ್ಟಿಂಗ್​ ವಿಡಿಯೋ ಬಗ್ಗೆ ಪ್ರತಿಕ್ರಿಯಿಸಿರುವ ಕೇಂದ್ರ ಗೃಹ ಸಚಿವ ಅಮಿತ್ ಶಾ, ಬಾಬರಿ ಮಸೀದಿ ನಿರ್ಮಿಸುವವರ ಜೊತೆ ಇರುವುದಕ್ಕಿಂತ ಇನ್ನೂ 20 ವರ್ಷ ವಿಪಕ್ಷದಲ್ಲಿರುವುದೇ ಲೇಸು ಎಂದು ತಿರುಗೇಟು ನೀಡಿದ್ದಾರೆ. ಪಶ್ಚಿಮ ಬಂಗಾಳ ಚುನಾವಣೆಗೆ ಪ್ರಣಾಳಿಕೆ ಮತ್ತು ಗ್ಯಾರಂಟಿಗಳ ಭರವಸೆ ಪಟ್ಟಿಯನ್ನು ಬಿಡುಗಡೆ ಮಾಡಿ ಮಾತನಾಡಿರುವ ಅಮಿತ್ ಶಾ, ಮಮತಾ ಬ್ಯಾನರ್ಜಿಯವರು ಅಂತಹ 2000 ವಿಡಿಯೋಗಳನ್ನು ನಿರ್ಮಿಸುವ ಮತ್ತು ಬಿಡುಗಡೆ ಮಾಡುವ ಸಾಮರ್ಥ್ಯ ಹೊಂದಿದ್ದಾರೆ. ಆದರೆ ಹುಮಾಯೂನ್ ಕಬೀರ್ ಮತ್ತು ಬಿಜೆಪಿ ಉತ್ತರ ಧ್ರುವ ಮತ್ತು ದಕ್ಷಿಣ ಧ್ರವದಣಂತೆ ಎಂದು ಸ್ಪಷ್ಟಪಡಿಸಿದ್ದಾರೆ.

ಮುಂದುವರೆದು, ನಾವು ಎಂದಿಗೂ ಹುಮಾಯೂನ್ ಕಬೀರ್ ಜೊತೆ ಹೊಂದಾಣಿಕೆ ಮಾಡಿಕೊಳ್ಳಲು ಸಾಧ್ಯವಿಲ್ಲ. ಬಂಗಾಳದಲ್ಲಿ ಬಾಬರಿ ಮಸೀದಿ ನಿರ್ಮಾಣ ಮಾಡಲು ಇಚ್ಚಿಸುವವರ ಜೊತೆ ಕುಳಿತುಕೊಳ್ಳುವುದಕ್ಕಿಂತ ಇನ್ನೂ 20 ವರ್ಷಗಳ ಕಾಲ ಬಿಜೆಪಿ ವಿಪಕ್ಷದಲ್ಲಿರುವುದೇ ಲೇಸು ಎಂದು ತಿರುಗೇಟು ನೀಡಿದ್ದಾರೆ. ತೃಣಮೂಲ ಕಾಂಗ್ರೆಸ್ ಗುರುವಾರ ವಿಡಿಯೋ ಒಂದನ್ನು ಬಿಡುಗಡೆ ಮಾಡಿದ್ದು, ಅದರಲ್ಲಿ ಟಿಎಂಸಿಯಿಂದ ಉಚ್ಚಾಟಿತ ಶಾಸಕ ಹುಮಾಯೂನ್ ಕಬೀರ್ ಕೆಲವು ಆಘಾತಕಾರಿ ಹೇಳಿಕೆಗಳನ್ನು ನೀಡಿರುವುದು ಸೆರೆಯಾಗಿದೆ. ಸಿಎಂ ಮಮತಾ ಬ್ಯಾನರ್ಜಿ ಸರ್ಕಾರವನ್ನು ಕೆಡವಲು 1000 ಕೋಟಿ ರೂ. ಡೀಲ್ ನಡೆದಿದ್ದು, ಈಗಾಗಾಲೇ 200 ಕೋಟಿ ರೂ. ಮುಂಗಡವಾಗಿ ಬಂದಿದೆ ಎಂದು ಹೇಳುತ್ತಿರುವುದು ವಿಡಿಯೋದಲ್ಲಿದೆ.

ಕಬೀರ್ ಅವರು ಪ್ರಧಾನಿ ಕಚೇರಿ (PMO) ಜೊತೆಗೆ ಸಂಪರ್ಕದಲ್ಲಿದ್ದು, ಸುವೇಂದು ಅಧಿಕಾರಿ ಮತ್ತು ಅಸ್ಸಾಂ ಸಿಎಂ ಹಿಮಂತ ಬಿಸ್ವಾ ಶರ್ಮಾ ಅವರೊಂದಿಗೆ ಸಮನ್ವಯ ಸಾಧಿಸುವಂತೆ ಸಲಹೆ ನೀಡಲಾಗಿತ್ತು ಎಂಬ ಸ್ಫೋಟಕ ಅಂಶ ವಿಡಿಯೋದಲ್ಲಿದೆ. ಸ್ಟಿಂಗ್ ಆಪರೇಷನ್ ವಿಡಿಯೋ ಬಗ್ಗೆ ಪ್ರತಿಕ್ರಿಯಿಸಿರುವ ಹುಮಾಯೂನ್ ಕಬೀರ್, ಮುಸ್ಲಿಂ ಮತಗಳನ್ನು ಕಳೆದುಕೊಳ್ಳುವ ಭಯದಲ್ಲಿರುವ ತೃಣಮೂಲ ಕಾಂಗ್ರೆಸ್ ನನ್ನ ಮೇಲೆ ಅಪಪ್ರಚಾರ ನಡೆಸುವ ಪ್ರಯತ್ನು ಇದು. ಎಐ ಮೂಲಕ ಕೆಲವು ಹೇಳಿಕೆಗಳನ್ನು ನೀಡುವ ಮೂಲಕ ಮುಸ್ಲಿಮರ ಭಾವನೆಗಳನ್ನು ಹಗುರಗೊಳಿಸುವ ಇಂತಹ ನಕಲಿ ವೀಡಿಯೊವನ್ನು ಬಿಡುಗಡೆ ಮಾಡಿ ಸಮುದಾಯವನ್ನು ಅವಮಾನಿಸಲಾಗಿದೆ. ಟಿಎಂಸಿ ವಿಡಿಯೋ ಬ್ಗೆ ಯಾವುದೇ ಪುರಾವೆಗಳನ್ನು ನೀಡಲು ವಿಫಲವಾದರೆ ಮಾನನಷ್ಟ ಮೊಕದ್ದಮೆ ಹೂಡುವುದಾಗಿ ಹೇಳಿದ್ದಾರೆ.

Category
ಕರಾವಳಿ ತರಂಗಿಣಿ