image image
ಬ್ರೇಕಿಂಗ್ ನ್ಯೂಸ್
ಬ್ರೇಕಿಂಗ್ ನ್ಯೂಸ್
ದೇಶ

ಕಲ್ಕತ್ತಾ ಹಾಗೂ ಬಾಂಬೆವರೆಗೂ ನುಗ್ಗಿ ಆಕ್ರಮಣ ಮಾಡುತ್ತೇವೆ : ಪಾಕಿಸ್ತಾನದ ರಕ್ಷಣಾ ಸಚಿವ ಖ್ವಾಜಾ ಆಸೀಫ್

ಕಲ್ಕತ್ತಾ ಹಾಗೂ ಬಾಂಬೆವರೆಗೂ ನುಗ್ಗಿ ಆಕ್ರಮಣ ಮಾಡುತ್ತೇವೆ : ಪಾಕಿಸ್ತಾನದ ರಕ್ಷಣಾ ಸಚಿವ ಖ್ವಾಜಾ ಆಸೀಫ್

ನವದೆಹಲಿ : ಗಡಿಯಾಚೆಗಿನ ಉದ್ವಿಗ್ನತೆ ಮತ್ತೊಮ್ಮೆ ತಾರಕಕ್ಕೇರಿದ್ದು ಪಾಕಿಸ್ತಾನದ ರಕ್ಷಣಾ ಸಚಿವ ಖ್ವಾಜಾ ಆಸೀಫ್ ಭಾರತದ ವಿರುದ್ಧ ತೀವ್ರ ಸ್ವರೂಪದ ಎಚ್ಚರಿಕೆ ನೀಡಿದ್ದಾನೆ. ಭಾರತವೇನಾದರೂ ಪಾಕಿಸ್ತಾನದ ಮೇಲೆ ವಿನಾಕಾರಣ ದಾಳಿ ನಡೆಸಿದ್ದೇ ಆದರೆ ನಾವು ಸುಮ್ಮನೆ ಕೂರುವುದಿಲ್ಲ ಬದಲಾಗಿ ಕಲ್ಕತ್ತಾ ಹಾಗೂ ಬಾಂಬೆವರೆಗೂ ನುಗ್ಗಿ ಆಕ್ರಮಣ ಮಾಡುತ್ತೇವೆ ಎಂದು ನೆರೆರಾಷ್ಟ್ರದ ಸಚಿವ ನೇರ ಬೆದರಿಕೆ ಹಾಕಿದ್ದಾನೆ. ಸಿಯಾಲ್ ಕೋಟ್ ನಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಖ್ವಾಜಾ ಆಸೀಫ್ ಭಾರತದ ವಿರುದ್ಧ ತಮ್ಮ ಆಕ್ರೋಶ ಹೊರಹಾಕಿದ್ದಾನೆ. ಗಡಿಯಲ್ಲಿ ಯಾರನ್ನೋ ನಾಲ್ಕು ಜನರನ್ನು ಕೊಂದು ಅವರನ್ನು ಪಾಕಿಸ್ತಾನದ ಭಯೋತ್ಪಾದಕರು ಎಂದು ಬಿಂಬಿಸಿ ನಮ್ಮ ಮೇಲೆ ಆಕ್ರಮಣ ಮಾಡಿದರೆ ಪಾಕಿಸ್ತಾನ ಕೈಕಟ್ಟಿ ಕೂರುವ ಪ್ರಶ್ನೆಯೇ ಉದ್ಭವಿಸುವುದಿಲ್ಲ. ಭಾರತ ನಮ್ಮ ಮೇಲೆ ಸುಖಾಸುಮ್ಮನೆ ದಾಳಿ ಮಾಡಿದ್ದೇ ಆದರೆ ಮುಂದಿನ ಪರಿಸ್ಥಿತಿ ಅತ್ಯಂತ ಗಂಭೀರ ಸ್ವರೂಪ ಪಡೆದುಕೊಳ್ಳಲಿದೆ. ನಾವು ಪ್ರತಿದಾಳಿ ಆರಂಭಿಸಿದರೆ ನಮ್ಮ ಪಡೆಗಳು ಕಲ್ಕತ್ತಾ ಮತ್ತು ಬಾಂಬೆವರೆಗೂ ದಂಡೆತ್ತಿ ಹೋಗಲಿವೆ ಎಂದು ಅವರು ಉದ್ಧಟತನದ ಹೇಳಿಕೆ ನೀಡಿದ್ದಾನೆ.

ಭಾರತದ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರು ಇತ್ತೀಚೆಗೆ ನೀಡಿದ್ದ ಕಠಿಣ ಎಚ್ಚರಿಕೆಯಿಂದ ಕಂಗೆಟ್ಟಿರುವ ಪಾಕ್ ಸಚಿವರು ಹತಾಶೆಯಿಂದ ಈ ಹೇಳಿಕೆ ನೀಡಿದ್ದಾನೆ ಎನ್ನಲಾಗಿದೆ. ಕೆಲ ದಿನಗಳ ಹಿಂದೆ ಕೇರಳದಲ್ಲಿ ಮಾತನಾಡಿದ್ದ ರಾಜನಾಥ್ ಸಿಂಗ್ ನೆರೆ ರಾಷ್ಟ್ರದ ಆರ್ಥಿಕ ಹಾಗೂ ಆಂತರಿಕ ಪರಿಸ್ಥಿತಿ ತೀರಾ ಹದಗೆಟ್ಟಿದೆ ಆದರೆ ಅವರ ಬುದ್ಧಿ ಮಾತ್ರ ಇನ್ನೂ ಸರಿಯಾಗಿಲ್ಲ. ಸದಾ ಭಾರತದ ಮೇಲೆ ದ್ವೇಷ ಕಾರುವ ಅವರು ಈ ಬಾರಿ ಏನಾದರೂ ಗಡಿಯಲ್ಲಿ ಹೆಚ್ಚು ಕಡಿಮೆ ಮಾಡಿದರೆ ಭಾರತದ ದಾಳಿಯ ಸ್ವರೂಪ ಹೇಗಿರುತ್ತದೆ ಹಾಗೂ ಅದರ ಭೀಕರ ಪರಿಣಾಮವೇನು ಎಂಬುದನ್ನು ಇಡೀ ವಿಶ್ವವೇ ನೋಡಲಿದೆ ಎಂದು ಪರೋಕ್ಷವಾಗಿ ಪಾಕಿಸ್ತಾನಕ್ಕೆ ಖಡಕ್ ಎಚ್ಚರಿಕೆ ನೀಡಿದ್ದರು.

Category
ಕರಾವಳಿ ತರಂಗಿಣಿ