image image
ಬ್ರೇಕಿಂಗ್ ನ್ಯೂಸ್
ಬ್ರೇಕಿಂಗ್ ನ್ಯೂಸ್
ದೇಶ

ಸೋನಮ್ ವಾಂಗ್‌ಚುಕ್ ಗೆ ಕಾರ್ಗಿಲ್‌ನಲ್ಲಿ ಅಭೂತಪೂರ್ವ ಸ್ವಾಗತ

ಸೋನಮ್ ವಾಂಗ್‌ಚುಕ್ ಗೆ ಕಾರ್ಗಿಲ್‌ನಲ್ಲಿ ಅಭೂತಪೂರ್ವ ಸ್ವಾಗತ

ಕಾರ್ಗಿಲ್ : 6 ತಿಂಗಳ ಜೈಲುವಾಸದ ನಂತರ ಬಿಡುಗಡೆಯಾಗಿರುವ ಪರಿಸರ ಹೋರಾಟಗಾರ ಸೋನಮ್ ವಾಂಗ್‌ಚುಕ್ ಗೆ ಕಾರ್ಗಿಲ್‌ನಲ್ಲಿ ಅಭೂತಪೂರ್ವ ಸ್ವಾಗತ ಕೋರಲಾಯಿತು. ಈ ವೇಳೆ ಮಾತನಾಡಿದ ಅವರು, ಲಡಾಖ್‌ನ ಸಾಂವಿಧಾನಿಕ ಹಕ್ಕುಗಳಿಗಾಗಿ ಲೇಹ್ ಮತ್ತು ಕಾರ್ಗಿಲ್ ಒಂದಾಗಿರುವುದು ಈ ಚಳವಳಿಯ ಶಕ್ತಿ. ನಮ್ಮನ್ನು ಧರ್ಮ ಅಥವಾ ಪ್ರದೇಶದ ಹೆಸರಿನಲ್ಲಿ ವಿಭಜಿಸಲು ಬಿಡಬಾರದು ಎಂದು ಕರೆ ನೀಡಿದರು. ಲಡಾಖ್‌ಗೆ ರಾಜ್ಯದ ಸ್ಥಾನಮಾನ ಮತ್ತು 6ನೇ ಅನುಸೂಚಿಯಡಿ ರಕ್ಷಣೆ ನೀಡಬೇಕು. ಈ ಸಂಬಂಧ ಕೇಂದ್ರ ಸರ್ಕಾರವು ಮಾತುಕತೆಯನ್ನು ವಿಳಂಬ ಮಾಡದೆ ಜನರ ಆಕಾಂಕ್ಷೆಗಳಿಗೆ ಸ್ಪಂದಿಸಬೇಕು, ಇಲ್ಲದಿದ್ದರೆ ಹೋರಾಟ ತೀವ್ರಗೊಳ್ಳಲಿದೆ ಎಂದು ಸ್ಥಳೀಯ ನಾಯಕರು ಎಚ್ಚರಿಸಿದ್ದಾರೆ. ವಾಂಗ್‌ಚುಕ್ ಬಿಡುಗಡೆಯು ಲಡಾಖಿಗರ ಸತ್ಯಕ್ಕೆ ಸಂದ ಜಯ ಎಂದು ಸಂಸದ ಹನೀಫಾ ಜಾನ್ ಬಣ್ಣಿಸಿದ್ದಾರೆ.

Category
ಕರಾವಳಿ ತರಂಗಿಣಿ