ಕೇರಳ : ಕೇರಳದಲ್ಲಿ ಮಾತನಾಡಿದ ರಕ್ಷಣಾ ಸಚಿವ ರಾಜ್ನಾಥ್ ಸಿಂಗ್ ಇರಾನಿನ ಹಾರ್ಮುಂಜ್ ಜಲಸಂಧಿಯಿಂದ ತೈಲ ಹಾಗೂ ಇಂಧನವನ್ನು ಹೊತ್ತ, ಭಾರತದ ಹಡಗುಗಳು ನೌಕಾ ಪಡೆಗಳ ಬೆಂಗಾವಲಿನಲ್ಲಿ ಭಾರತವನ್ನು ಪ್ರವೇಶಿಸುತ್ತಿದ್ದು, ದೇಶದಲ್ಲಿ ಯಾವುದೇ ರೀತಿಯ ಹಾಹಾಕಾರ ಸಂಭವಿಸುವುದಿಲ್ಲ ಎಂದು ಹೇಳಿದ್ದಾರೆ. ಮಧ್ಯಪ್ರಾಚ್ಯದಲ್ಲಿ ದಿನ ಕಳೆದಂತೆ ಸಂಘರ್ಷ ಹೆಚ್ಚುತ್ತಿರುವುದರಿಂದ ಭಾರತದಲ್ಲಿ ತೈಲ ಹಾಗೂ ಇಂಧನ ಪೂರೈಕೆಯಲ್ಲಿ ಭಾರಿ ವ್ಯತ್ಯಯ ಸಂಭವಿಸುತ್ತದೆ ಎಂದು ವಿರೋಧ ಪಕ್ಷಗಳು ಆಪಾದನೆ ಮಾಡುತ್ತಿದ್ದ ಹಿನ್ನಲೆ ಈ ಹೇಳಿಕೆ ಹೊರಬಂದಿದೆ. ನಮ್ಮ ಪ್ರಧಾನ ಮಂತ್ರಿಗಳಾದ ನರೇಂದ್ರ ಮೋದಿಯವರು ತಮ್ಮ ರಾಜತಾಂತ್ರಿಕ ನಿಲುವುಗಳ ಕಾರಣ ನಮ್ಮ ದೇಶ ಸುಭದ್ರವಾಗಿದ್ದು, ನಾಗರಿಕರು ಚಿಂತೆ ಪಡುವ ಯಾವುದೇ ಅಗತ್ಯವಿಲ್ಲ ಎಂದು ಹೇಳಿದ್ದಾರೆ. ನಾನು ಪಶ್ಚಿಮ ಏಷ್ಯಾದಲ್ಲಿ ನಡೆಯುತ್ತಿರುವ ಸಂಗತಿಗಳನ್ನು ಸೂಕ್ಷ್ಮವಾಗಿ ಗಮನಿಸುತ್ತಿದ್ದು, ಯಾವುದೇ ಸಮಸ್ಯೆ ಎದುರಾದರೂ ಅದನ್ನು ನಿಗ್ರಹಿಸುವ ಶಕ್ತಿ ನಮ್ಮ ದೇಶಕ್ಕಿದೆ ಎಂದು ಅವರು ಹೇಳಿದರು.