image image
ಬ್ರೇಕಿಂಗ್ ನ್ಯೂಸ್
ಬ್ರೇಕಿಂಗ್ ನ್ಯೂಸ್
ದೇಶ

ರಷ್ಯಾದಿಂದ ಕಚ್ಚಾ ತೈಲದೊಂದಿಗೆ ಎಲ್​ಎನ್ ಜಿಯನ್ನೂ ಪಡೆಯಲು ಭಾರತ ಯೋಜನೆ

ರಷ್ಯಾದಿಂದ ಕಚ್ಚಾ ತೈಲದೊಂದಿಗೆ ಎಲ್​ಎನ್ ಜಿಯನ್ನೂ ಪಡೆಯಲು ಭಾರತ ಯೋಜನೆ

ನವದೆಹಲಿ : ಇರಾನ್ ಯುದ್ಧದ ಪರಿಣಾಮ ಇಂಧನ ಬಿಕ್ಕಟ್ಟು ಉದ್ಭವವಾಗಿದೆ. ಕಚ್ಛಾ ತೈಲ, ಎಲ್​ಪಿಜಿ, ಎಲ್​ಎನ್​ಜಿಗಳ ಪೂರೈಕೆ ವ್ಯತ್ಯಯಗೊಂಡಿದೆ. ಈ ಸಂದರ್ಭದಲ್ಲಿ ಭಾರತಕ್ಕೆ ರಷ್ಯಾ ಆಪದ್ಬಾಂಧವ ಎನಿಸಿದೆ. ರಷ್ಯಾದಿಂದ ಕಚ್ಛಾ ತೈಲದ ಖರೀದಿಯನ್ನು ಭಾರತ ಪುನಾರಂಭಿಸಿದೆ. ಇದೇ ವೇಳೆ ಎಲ್​ಎನ್​ಜಿಯನ್ನೂ ರಷ್ಯಾದಿಂದ ಪಡೆಯಲು ಭಾರತ ಯೋಜಿಸಿದೆ. ಅಮೆರಿಕದ ಅನುಮತಿ ಪಡೆದೇ ಭಾರತವು ರಷ್ಯಾದಿಂದ ತೈಲ ಖರೀದಿ ಮಾಡುತ್ತಿದೆ. ಈಗ ಎಲ್​ಎನ್​ಜಿ ಖರೀದಿಗೂ ಅಮೆರಿಕದ ಅನುಮತಿ ಸಿಗುವ ನಿರೀಕ್ಷೆ ಇದೆ. ರಷ್ಯಾದಿಂದ ಎಲ್​ಎನ್​ಜಿ ಸಿಕ್ಕರೆ ಭಾರತದ ಇಂಧನ ಬಿಕ್ಕಟ್ಟಿನ ಸಮಸ್ಯೆಗೆ ಒಂದು ಮಟ್ಟಕ್ಕೆ ಪರಿಹಾರ ಸಿಗಬಹುದು. ಉಕ್ರೇನ್ ಯುದ್ಧ ಶುರುವಾದಾಗಿನಿಂದ ರಷ್ಯಾದಿಂದ ಭಾರತಕ್ಕೆ ಎಲ್​ಎನ್​ಜಿ ಪೂರೈಕೆ ನಿಂತಿತ್ತು. ಕೇವಲ ಕಚ್ಛಾ ತೈಲದ ಪೂರೈಕೆ ಮಾತ್ರವೇ ನಡೆಯುತ್ತಿದ್ದುದು. ಈಗ ಭಾರತಕ್ಕೆ ರಷ್ಯಾದ ಎಲ್​ಎನ್​ಜಿ ಪೂರೈಕೆ ಪುನಾರಂಭಗೊಳ್ಳುವುದು ಬಹುತೇಕ ಖಚಿತವಾಗಿದೆ. ಭಾರತವು ಎಲ್​ಎನ್​ಜಿ ಪಡೆಯಲು ಒಪ್ಪಿಕೊಂಡಿದ್ದೇ ಆದಲ್ಲಿ ಕೆಲವೇ ವಾರಗಳಲ್ಲಿ ವ್ಯವಸ್ಥೆ ಪೂರ್ಣವಾಗುವ ನಿರೀಕ್ಷೆ ಇದೆ.

ಎಲ್​ಎನ್​ಜಿ ಒಂದು ನೈಸರ್ಗಿಕ ಅನಿಲ. ಎಲ್​ಪಿಜಿ ಒಂದು ಪೆಟ್ರೋಲಿಯಂ ಗ್ಯಾಸ್. ಎರಡೂ ಕೂಡ ಧ್ರವರೂಪಕ್ಕೆ ಇಳಿಸಲಾಗಿರುವ ಅನಿಲಗಳೇ ಆಗಿವೆ. ಹಾಗೆಯೇ ಎರಡೂ ಕೂಡ ಬೇರೆ ಬೇರೆ ಗುಣ ಇರುವ ಗ್ಯಾಸ್ ಆಗಿವೆ. ತೈಲ ಸಂಸ್ಕರಣೆ ಪ್ರಕ್ರಿಯೆ ವೇಳೆ ಬರುವ ಪ್ರೊಪೇನ್, ಬುಟೇನ್ ಇತ್ಯಾದಿ ಅನಿಲಗಳು ಪೆಟ್ರೋಲಿಯಂ ಗ್ಯಾಸ್ ಎನಿಸುತ್ತವೆ. ಇದು ಗಾಳಿಗಿಂತ ಭಾರದ್ದಾಗಿರುತ್ತದೆ. ಈ ಪ್ರೊಪೇನ್, ಬುಟೇನ್ ಅನ್ನು ಧ್ರವ ರೂಪಕ್ಕೆ ಇಳಿಸಿ ಸಾಗಿಸಲಾಗುತ್ತದೆ. ಎಲ್​ಎನ್​ಜಿಯಲ್ಲಿ ನೈಸರ್ಗಿಕ ಅನಿಲವಾದ ಮೀಥೇನ್ ಇರುತ್ತದೆ. ಕ್ರಯೋಜೆನಿಕ್ ವಿಧಾನದಲ್ಲಿ ಮೈನಸ್ 162 ಡಿಗ್ರಿ ಸೆಲ್ಷಿಸ್ ಶೀತದಲ್ಲಿ ಇದನ್ನು ಧ್ರವರೂಪಕ್ಕೆ ತರಲಾಗುತ್ತದೆ. ಈ ಅನಿಲವನ್ನು ಹಡಗುಗಳಲ್ಲಿ ಸಾಗಿಸಲೆಂದೇ ಧ್ರವರೂಪಕ್ಕೆ ತರಲಾಗುವುದು. ಅದಕ್ಕೆ ಇದನ್ನು ಲಿಕ್ವಿಫೈಡ್ ನ್ಯಾಚುರಲ್ ಗ್ಯಾಸ್ ಎನ್ನುವುದು.

Category
ಕರಾವಳಿ ತರಂಗಿಣಿ