image image
ಬ್ರೇಕಿಂಗ್ ನ್ಯೂಸ್
ಬ್ರೇಕಿಂಗ್ ನ್ಯೂಸ್
ದೇಶ

ಸಿಎಂ ನಿತೀಶ್ ಭೇಟಿಯ ವೇಳೆ ಭದ್ರತಾ ಲೋಪ : ಹೆಲಿಪ್ಯಾಡ್‌ಗೆ ನುಗ್ಗಿ ಪೊಲೀಸರನ್ನು ಅಟ್ಟಾಡಿಸಿದ ಗೂಳಿ!

ಸಿಎಂ ನಿತೀಶ್ ಭೇಟಿಯ ವೇಳೆ ಭದ್ರತಾ ಲೋಪ : ಹೆಲಿಪ್ಯಾಡ್‌ಗೆ ನುಗ್ಗಿ ಪೊಲೀಸರನ್ನು ಅಟ್ಟಾಡಿಸಿದ ಗೂಳಿ!

ಬಿಹಾರ : ಬಿಹಾರ ಸಿಎಂ ನಿತೀಶ್ ಕುಮಾರ್ ಅವರ ಬೇಗುಸರಾಯ್ ಭೇಟಿಯ ವೇಳೆ ಭದ್ರತಾ ಲೋಪ ಉಂಟಾಗಿದೆ. ಸಿಎಂ ಹೆಲಿಕಾಪ್ಟರ್ ಇಳಿಯುವ ಕೆಲವೇ ಕ್ಷಣಗಳ ಮೊದಲು, ಹೆಲಿಪ್ಯಾಡ್‌ಗೆ ಗೂಳಿಯೊಂದು ನುಗ್ಗಿ ಪೊಲೀಸರನ್ನು ಅಟ್ಟಾಡಿಸಿದ್ದು, ಕೆಲಕಾಲ ಆತಂಕದ ವಾತಾವರಣ ಸೃಷ್ಟಿಯಾಗಿತ್ತು. ಬಿಹಾರ ಸಿಎಂ ನಿತೀಶ್ ಕುಮಾರ್ ಅವರು ತಮ್ಮ ಸಮೃದ್ಧಿ ಯಾತ್ರೆಯ ಭಾಗವಾಗಿ ಬೇಗುಸರಾಯ್‌ಗೆ ಭೇಟಿ ನೀಡಿದ ಸಂದರ್ಭದಲ್ಲಿ ಪ್ರಮುಖ ಭದ್ರತಾ ಲೋಪ ಸಂಭವಿಸಿದೆ. ಇಲ್ಲಿ ಮುಖ್ಯಮಂತ್ರಿಯವರ ಹೆಲಿಕಾಪ್ಟರ್ ಇಳಿಯುವುದಕ್ಕು ಕೆಲ ಕ್ಷಣ ಮೊದಲು ಹೆಲಿಪ್ಯಾಡ್‌ಗೆ ಗೂಳಿಯೊಂದು ನುಗ್ಗಿ ಪೊಲೀಸರನ್ನೇ ಕಕ್ಕಾಬಿಕ್ಕಿಯಾಗುವಂತೆ ಮಾಡಿದೆ. ಸಿಎಂ ಬೇಗುಸರಾಯ್‌ಗೆ ಆಗಮಿಸುವುದಕ್ಕೆ ಇನ್ನೇನು ಕೆಲ ನಿಮಿಷಗಳಷ್ಟೇ ಬಾಕಿ ಇದ್ದಾಗ ಗೂಳಿಯೊಂದು ಅವರು ಇಳಿಯಬೇಕಿದ್ದ ಹೆಲಿಪ್ಯಾಡ್‌ಗೆ ನುಗ್ಗಿದ್ದು, ಅಲ್ಲಿ ಭದ್ರತೆಗಿದ್ದ ಪೊಲೀಸರನ್ನೇ ಬೆನ್ನಟ್ಟಿ ಓಡಿಸಿದೆ. ಗೂಳಿಗೆ ಬೆದರಿ ಜೀವ ಉಳಿಸಿಕೊಳ್ಳಲು ಪೊಲೀಸರು ಓಡುತ್ತಿರುವ ದೃಶ್ಯಗಳು ಸೋಶಿಯಲ್ ಮೀಡಿಯಾಗಳಲ್ಲಿ ವೈರಲ್ ಆಗಿವೆ.

Category
ಕರಾವಳಿ ತರಂಗಿಣಿ