image image
ಬ್ರೇಕಿಂಗ್ ನ್ಯೂಸ್
ಬ್ರೇಕಿಂಗ್ ನ್ಯೂಸ್
ದೇಶ

ಎಕ್ಸ್‌ನಲ್ಲಿ 18+ ವೀಡಿಯೊಗಳು ಮತ್ತು ಅಶ್ಲೀಲ ಕಂಟೆಂಟ್ ಮೇಲೆ ಭಾರತದಲ್ಲಿ ದಿಢೀರ್ ನಿರ್ಬಂಧಗಳು ಜಾರಿಗೆ

ಎಕ್ಸ್‌ನಲ್ಲಿ 18+ ವೀಡಿಯೊಗಳು ಮತ್ತು ಅಶ್ಲೀಲ ಕಂಟೆಂಟ್ ಮೇಲೆ ಭಾರತದಲ್ಲಿ ದಿಢೀರ್ ನಿರ್ಬಂಧಗಳು ಜಾರಿಗೆ

ನವದೆಹಲಿ : ಸೋಷಿಯಲ್ ಮೀಡಿಯಾ ಪ್ಲಾಟ್‌ಫಾರ್ಮ್ ಆದ ಎಕ್ಸ್ ಭಾರತದಲ್ಲಿ ಒಂದು ಪ್ರಮುಖ ನಿರ್ಧಾರ ಕೈಗೊಂಡಿದೆ. ಎಕ್ಸ್‌ನಲ್ಲಿ 18+ ವೀಡಿಯೊಗಳು ಮತ್ತು ಅಶ್ಲೀಲ ಕಂಟೆಂಟ್ ಮೇಲೆ ಭಾರತದಲ್ಲಿ ದಿಢೀರ್ ನಿರ್ಬಂಧಗಳು ಜಾರಿಗೆ ಬಂದಿವೆ ಎಂಬ ವರದಿಯಾಗಿದೆ. ಈ ನಿರ್ಬಂಧಗಳು ನಿಜವಾಗಿಯೂ ಎಲಾನ್ ಮಸ್ಕ್ ಅವರ ವೈಯಕ್ತಿಕ ನಿರ್ಧಾರವೇ ಅಥವಾ ಭಾರತ ಸರ್ಕಾರದ ನಿಯಮಗಳ ಪ್ರಭಾವವೇ ಎಂಬ ಬಗ್ಗೆ ಚರ್ಚೆಗಳು ನಡೆಯುತ್ತಿವೆ. ಕೆಲವು ಬಳಕೆದಾರರ ಅಭಿಪ್ರಾಯದಂತೆ, ಭಾರತದ ಡಿಜಿಟಲ್ ಕಂಟೆಂಟ್ ನಿಯಂತ್ರಣ ನಿಯಮಗಳಿಂದಾಗಿ ಈ ನಿರ್ಬಂಧಗಳು ಜಾರಿಗೆ ಬಂದಿರಬಹುದು ಎನ್ನಲಾಗುತ್ತಿದೆ. ಭಾರತದಲ್ಲಿ ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳ ಮೇಲೆ ಕಂಟೆಂಟ್ ನಿಯಂತ್ರಣಕ್ಕೆ ಸಂಬಂಧಿಸಿದ ಕಾನೂನುಗಳು ಕಟ್ಟುನಿಟ್ಟಾಗಿ ಜಾರಿಯಾಗುತ್ತಿರುವ ಹಿನ್ನೆಲೆಯಲ್ಲಿ, ಇದು ಸಂಸ್ಥೆಯು ತೆಗೆದುಕೊಂಡ ಅನಿವಾರ್ಯ ಕ್ರಮವಾಗಿರಬಹುದು ಎಂದು ವಿಶ್ಲೇಷಕರು ಭಾವಿಸಿದ್ದಾರೆ. ಕೆಲವು ಬಳಕೆದಾರರು VPN ಸಹಾಯದಿಂದ ಈ ನಿರ್ಬಂಧಗಳನ್ನು ಮೀರಿ ಕಂಟೆಂಟ್ ನೋಡಲು ಪ್ರಯತ್ನಿಸುತ್ತಿದ್ದಾರೆ ಎಂಬ ಮಾಹಿತಿಯಿದೆ. ಆದರೆ, ಈ ನಿರ್ಧಾರದಿಂದಾಗಿ ಪ್ಲಾಟ್‌ಫಾರ್ಮ್ ಬಳಕೆದಾರರ ಸಂಖ್ಯೆ ಕಡಿಮೆಯಾಗುವ ಸಾಧ್ಯತೆಯಿದೆ ಎಂದು ಕೆಲವರು ಅಂದಾಜಿಸಿದ್ದಾರೆ. ಭಾರತದ ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯವು ಜನವರಿ 2026ರ ಆರಂಭದಲ್ಲಿ ಎಕ್ಸ್‌ಗೆ 72 ಗಂಟೆಗಳ ಗಡುವು ನೀಡಿ ನೋಟಿಸ್ ನೀಡಿತ್ತು. ಅಶ್ಲೀಲ ಕಂಟೆಂಟ್ ತೆಗೆಯದಿದ್ದರೆ ಐಟಿ ಕಾಯ್ದೆಯಡಿ ಕಠಿಣ ಕ್ರಮದ ಎಚ್ಚರಿಕೆ ನೀಡಿತ್ತು. ಅದರ ಪರಿಣಾಮವಾಗಿ, ಮಾರ್ಚ್ 3, 2026 ರ ಹೊತ್ತಿಗೆ ಭಾರತೀಯ ಬಳಕೆದಾರರಿಗೆ ಇಂತಹ ಚಿತ್ರಗಳು ಅಥವಾ ವೀಡಿಯೊಗಳನ್ನು ನೋಡಲು ಸಾಧ್ಯವಾಗುತ್ತಿಲ್ಲ. “ಸ್ಥಳೀಯ ನಿಯಮಗಳ ಕಾರಣದಿಂದಾಗಿ ಈ ಕಂಟೆಂಟ್ ಅನ್ನು ನಿರ್ಬಂಧಿಸಲಾಗಿದೆ” ಎಂಬ ನೋಟಿಸ್ ಪರದೆಯ ಮೇಲೆ ಕಾಣಿಸಿಕೊಳ್ಳುತ್ತಿದೆ.

Category
ಕರಾವಳಿ ತರಂಗಿಣಿ