ನವದೆಹಲಿ : ವಿರೋಧ ಪಕ್ಷದ ಹಲವಾರು ಮಹಿಳಾ ಸಂಸದರು ಸದನದ ಬಾವಿಗಿಳಿದು, ಪ್ರಧಾನಿಯವರ ಕುರ್ಚಿಯ ಕಡೆಗೆ ಸಾಗಿದರು. ತಮ್ಮ ಸ್ಥಾನಗಳಿಗೆ ಮರಳುವಂತೆ ಹಿರಿಯ ಸಚಿವರು ಮನವಿ ಮಾಡಿದರು ಅವರೆಲ್ಲಾ ನಿರ್ಲಕ್ಷಿಸಿದ್ದಾರೆ, ಪರಿಸ್ಥಿತಿ ನಿಯಂತ್ರಣ ತಪ್ಪಿದ್ದರಿಂದ ಪ್ರಧಾನಮಂತ್ರಿಗಳ ಭಾಷಣವನ್ನು ಮುಂದೂಡಬೇಕಾಯಿತು ಎಂದು ತಿವಾರಿ ಮಾಹಿತಿ ನೀಡಿದರು. ಪ್ರಧಾನಿ ನರೇಂದ್ರ ಮೋದಿ ಕುಳಿತುಕೊಳ್ಳುವ ಆಸನದ ಬಳಿ ದೊಡ್ಡ ಗದ್ದಲ ಸೃಷ್ಟಿಸಿದರು, ವಿರೋಧ ಪಕ್ಷದ ಸಂಸದರು ಆಕ್ರಮಣಕಾರಿಯಾಗಿ ವರ್ತಿಸಿದರು, ಈ ವೇಳೆ ಗಂಭೀರ ಭದ್ರತಾ ಕಾಳಜಿ ಪ್ರಶ್ನೆಯೂ ಉದ್ಭವವಾಯಿತು, ಪ್ರಧಾನಿಯವರ ಮೇಲೆಯೂ ದಾಳಿ ಮಾಡುವ ಸಾಧ್ಯತೆಯೂ ಇತ್ತು ಎಂದು ಮನೋಜ್ ತಿವಾರಿ ಹೇಳಿದ್ದಾರೆ.
ಪ್ರಧಾನಿ ಕುರ್ಚಿಯನ್ನು ತಡೆದ ಮಹಿಳಾ ಸದಸ್ಯರ ಉದ್ದೇಶವೇನಿರಬಹುದು? ಚುನಾವಣಾ ಸೋಲಿನಿಂದ ನೀವು ತುಂಬಾ ಗೊಂದಲಕ್ಕೊಳಗಾಗಿದ್ದೀರಿ, ನೀವು ಪ್ರಧಾನಿಯ ಮೇಲೆ ದಾಳಿ ಮಾಡಲು ಸಿದ್ಧರಿದ್ದೀರಿ ಎಂದು ತಿವಾರಿ ವಿರೋಧ ಪಕ್ಷದ ಮೇಲೆ ವಾಗ್ದಾಳಿ ನಡೆಸಿದರು. ಈ ಗದ್ದಲದ ಸಮಯದಲ್ಲಿ ಪ್ರಧಾನಿ ನರೇಂದ್ರ ಮೋದಿ, ಗೃಹ ಸಚಿವ ಅಮಿತ್ ಶಾ ಮತ್ತು ರಕ್ಷಣಾ ಸಚಿವ ರಾಜನಾಥ್ ಸಿಂಗ್ ಸದನದಲ್ಲಿ ಇರಲಿಲ್ಲ ಎಂದು ವರದಿಯಾಗಿದೆ. ವಿರೋಧ ಪಕ್ಷದ ಮಹಿಳಾ ಸಂಸದರ ಗುಂಪೊಂದು ಪೀಠಗಳ ಕಡೆಗೆ ತೆರಳಿ ಬಿಜೆಪಿ ಸಂಸದ ನಿಶಿಕಾಂತ್ ದುಬೆ ಅವರನ್ನು ಎದುರಿಸಿತು, ಇದು ಬಿಸಿ ಮಾತಿನ ಚಕಮಕಿಗೆ ಕಾರಣವಾಯಿತು. ಸಂಸದರಾದ ಜ್ಯೋತಿಮಣಿ ಮತ್ತು ವರ್ಷಾ ಗಾಯಕ್ವಾಡ್ ಸೇರಿದಂತೆ ಅನೇಕರು ದುಬೆ ಕಡೆಗೆ ಸಾಗುತ್ತಿರುವುದು ಕಂಡುಬಂದಿತು, ಇದಕ್ಕೆ ತಿರುಗೇಟು ಎಂಬಂತೆ ಬಿಜೆಪಿ ಮಹಿಳಾ ಸಂಸದರು ಕೂಡ ವಿಪಕ್ಷ ಸದಸ್ಯರತ್ತ ಸಾಗಿದರು ಎನ್ನಲಾಗಿದೆ