image image
ಬ್ರೇಕಿಂಗ್ ನ್ಯೂಸ್
ಬ್ರೇಕಿಂಗ್ ನ್ಯೂಸ್
ದೇಶ

ಅಶೋಕ ಚಕ್ರವನ್ನು ಭಾರತದ ಜನರ ಸಾಮೂಹಿಕ ಆಶೀರ್ವಾದ ಎಂದು ಬಣ್ಣಿಸಿದ ಶುಭಾಂಶು ಶುಕ್ಲ

ಅಶೋಕ ಚಕ್ರವನ್ನು ಭಾರತದ ಜನರ ಸಾಮೂಹಿಕ ಆಶೀರ್ವಾದ ಎಂದು ಬಣ್ಣಿಸಿದ ಶುಭಾಂಶು ಶುಕ್ಲ

ಬೆಂಗಳೂರು : ಭಾರತದ ಎರಡನೇ ಗಗನಯಾತ್ರಿ ಮತ್ತು ಅಂತರರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣದಲ್ಲಿ (ISS) ಉಳಿದುಕೊಂಡ ದೇಶದ ಮೊದಲ ಗಗನಯಾತ್ರಿ ಗ್ರೂಪ್ ಕ್ಯಾಪ್ಟನ್ ಶುಭಾಂಶು ಶುಕ್ಲಾ, ಭಾರತದ ಅತ್ಯುನ್ನತ ಶಾಂತಿಕಾಲದ ಮಿಲಿಟರಿ ಪದಕ ಅಶೋಕ ಚಕ್ರವನ್ನು ಭಾರತದ ಜನರ ಸಾಮೂಹಿಕ ಆಶೀರ್ವಾದ ಎಂದು ಬಣ್ಣಿಸಿದ್ದಾರೆ. 77ನೇ ಗಣರಾಜ್ಯೋತ್ಸವ ಸಂಭ್ರಮದಲ್ಲಿ ಸೋಮವಾರ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರಿಂದ ಈ ಪ್ರಶಸ್ತಿ ಸ್ವೀಕರಿಸಿದರು. ಭಾರತೀಯ ಸೇನೆಯಲ್ಲಿ ಪರಮವೀರ ಚಕ್ರ ಹಾಗೂ ಅಶೋಕ ಚಕ್ರ ಸರ್ವಶ್ರೇಷ್ಠ ಪದಕಗಳಾಗಿವೆ. ಯುದ್ಧಕಾಲದಲ್ಲಿನ ವೀರತೆಗೆ ಪರಮವೀರ ಚಕ್ರ ಪದಕ ನೀಡಲಾಗುತ್ತದೆ. ಉಳಿದೆಲ್ಲಾ ಸಮಯದ ಅಥವಾ ಶಾಂತಿಕಾಲದ ವೀರತೆಗೆ ಅಶೋಕ ಚಕ್ರ ಪದಕ ನೀಡಿ ಗೌರವಿಸಲಾಗುತ್ತದೆ. ಅಶೋಕ ಚಕ್ರ ಪದಕದ ಬಗ್ಗೆ ಭಾನುವಾರ ಮಾತನಾಡಿದ ಶುಭಾಂಶು ಶುಕ್ಲಾ, 'ನಗೆ ನೀಡಲಾದ ಗೌರವಕ್ಕಾಗಿ ನಾನು ಅಪಾರ ಹೆಮ್ಮೆ ಮತ್ತು ಕೃತಜ್ಞತೆಯನ್ನು ಸಲ್ಲಿಸುತ್ತೇನೆ. ನಾನು [ಗಗನಯಾತ್ರಿಯಾಗಿ] ಈ ಪ್ರಯಾಣವನ್ನು ಪ್ರಾರಂಭಿಸಿದಾಗ, ನಾನು ಪ್ರತಿಯೊಬ್ಬ ಭಾರತೀಯನ ಪ್ರತಿನಿಧಿಯಾಗಿ ಹಾಗೆ ಮಾಡಿದೆ. ಇಂದು, ನಾನು ಈ ಮನ್ನಣೆಯನ್ನು ಪಡೆಯುತ್ತಿದ್ದಂತೆ, ನಾನು ಅದನ್ನು ಭಾರತದ ಜನರ ಸಾಮೂಹಿಕ ಆಶೀರ್ವಾದವೆಂದು ಅನುಭವಿಸುತ್ತೇನೆ. ಈ ಪ್ರಶಸ್ತಿಯಿಂದ ನಾನು ನಿಜವಾಗಿಯೂ ವಿನಮ್ರನಾಗಿದ್ದೇನೆ' ಎಂದು ಸ್ನೇಹಿತರಿಂದ ಶುಕ್ಸ್‌ ಎಂದೇ ಕರೆಯಲ್ಪಡುವ ಶುಭಾಂಶು ಶುಕ್ಲಾ ಹೇಳಿದ್ದಾರೆ.

Category
ಕರಾವಳಿ ತರಂಗಿಣಿ