ಅಹಮದಬಾದ್ : ಜರ್ಮನಿ ಫೆಡರಲ್ ಚಾನ್ಸಿಲರ್ ಫೆಡ್ರಿಕ್ ಮೆರ್ಜ್ ಭಾರತ ಪ್ರವಾಸದಲ್ಲಿ ಹಲವು ಮಹತ್ವದ ಒಪ್ಪಂದಗಳಿಗೆ ಸಹಿ ಹಾಕಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಹಾಗೂ ಫೆಜ್ರಿಕ್ ಮೆರ್ಜ್ ಇಂದು ಅಹಮ್ಮದಾಬಾದ್‌ನಲ್ಲಿ ಭೇಟಿಯಾಗಿ ದಿಪಕ್ಷೀಯ ಮಾತುಕತೆ ನಡೆಸಿದ್ದಾರೆ. ಭಾರತ ಹಾಗೂ ಜರ್ಮನಿ ನಡುವಿನ ವ್ಯಾಪಾರ ವಹಿವಾಟು, ಭದ್ರತೆ, ಮಾನವ ಸಂಪನ್ಮೂಲ ವಿನಿಮಯ ಸೇರಿದಂತೆ ಹಲವು ಒಪ್ಪಂದಗಳಿಗೆ ಸಹಿ ಬಿದ್ದಿದೆ. ಉಭಯ ರಾಷ್ಟ್ರಗಳು ಜಂಟಿಯಾಗಿ ಕೈಗೊಳ್ಳಬೇಕಾದ ಹಲವು ನಿರ್ಣಯಗಳು ಕುರಿತು ಚರ್ಚೆಯಾಗಿದೆ. ಈ ಪೈಕಿ ಫ್ರೀ ವೀಸಾ ಟ್ರಾನ್ಸಿಟ್ ಸೌಲಭ್ಯ ಭಾರತೀಯರ ಗಮನಸೆಳೆದಿದೆ.
ಭಾರತ ಹಾಗೂ ಜರ್ಮನಿ ನಡುವಿನ ಒಪ್ಪಂದದಲ್ಲಿ ಪ್ರಮುಖವಾಗಿ ಫ್ರಿ ವೀಸಾ ಟ್ರಾನ್ಸಿಟ್ ಅತ್ಯಂತ ಪ್ರಮುಖವಾಗಿದೆ. ಭಾರತೀಯರು ಜರ್ಮನಿ ಮೂಲಕ ಇತರ ದೇಶಗಳಿಗೆ ಪ್ರಯಾಣ ಮಾಡುವಾಗ ಟ್ರಾನ್ಸಿಟ್ ವೀಸಾ ಪಡೆಯುವ ಅಗತ್ಯವಿಲ್ಲ. ಮುಕ್ತವಾಗಿ ಪ್ರಯಾಣ ಮಾಡಲು ಅವಕಾಶ ನೀಡಲಾಗಿದೆ. ಇದರು ಹಲವು ಭಾರತೀಯರಿಗೆ ಪ್ರಯೋಜನವಾಗಲಿದೆ. ವಿಶೇಷವಾಗಿ ಜರ್ಮನಿ ವಿಮಾನ ನಿಲ್ದಾಣಗಳ ಮೂಲಕ ಅಮೆರಿಕ, ಕೆನಾಡ ಸೇರಿದಂತೆ ಬೇರೆ ಬೇರೆ ದೇಶಗಳಿಗೆ ಪ್ರಯಾಣ ಮಾಡುವ ಭಾರತೀಯರು ಈ ಒಪ್ಪಂದಿಂದ ಪ್ರತ್ಯೇಕವಾಗಿ ಜರ್ಮನಿಯ ಟ್ರಾನ್ಸಿಟ್ ವೀಸಾ ಪಡೆಯುವ ಅಗತ್ಯವಿಲ್ಲ.