image image
ಬ್ರೇಕಿಂಗ್ ನ್ಯೂಸ್
ಬ್ರೇಕಿಂಗ್ ನ್ಯೂಸ್
ದೇಶ

ಪಶ್ಚಿಮ ಬಂಗಾಲದ ಹಲ್ದಿಯಾದಲ್ಲಿ ನೌಕಾನೆಲೆ ಸ್ಥಾಪಿಸಲು ಮುಂದಾದ ಭಾರತ!

ಪಶ್ಚಿಮ ಬಂಗಾಲದ ಹಲ್ದಿಯಾದಲ್ಲಿ ನೌಕಾನೆಲೆ ಸ್ಥಾಪಿಸಲು ಮುಂದಾದ ಭಾರತ!

ನವದೆಹಲಿ : ಬಂಗಾಲಕೊಲ್ಲಿಯಲ್ಲಿ ಚೀನದ ನೌಕಾ ಚಟುವಟಿಕೆಗಳು ಹೆಚ್ಚುತ್ತಿದ್ದು, ಇತ್ತ ಪಾಕಿಸ್ಥಾನ ಹಾಗೂ ಬಾಂಗ್ಲಾದೇಶದಿಂದಾಗಿ ಪ್ರಾದೇಶಿಕ ಭದ್ರತ ಕಳವಳ ಹೆಚ್ಚುತಿದೆ. ಈ ಹಿನ್ನೆಲೆಯಲ್ಲಿ ಪಶ್ಚಿಮ ಬಂಗಾಲದ ಹಲ್ದಿಯಾದಲ್ಲಿ ನೌಕಾನೆಲೆ ಸ್ಥಾಪಿಸಲು ಭಾರತ ಮುಂದಾಗಿದೆ ಎಂದು ರಕ್ಷಣ ಇಲಾಖೆಯ ಉನ್ನತ ಮೂಲಗಳು ತಿಳಿಸಿವೆ. ಈ ನೌಕಾನೆಲೆಯು ಸಣ್ಣ ಯುದ್ಧನೌಕೆಗಳನ್ನು ನಿಯೋಜಿಸುವ ನಿಟ್ಟಿನಲ್ಲಿ ಕಾರ್ಯನಿರ್ವಹಿಸಲಿದೆ ಎನ್ನಲಾಗಿದೆ. ಅಲ್ಲದೇ ಬಂದರು ನಗರಿ ಹಲ್ದಿಯಾದಲ್ಲಿ ಈಗಾಗಲೇ ಇರುವ ಡಾಕಿಂಗ್‌ ಸಂಕೀರ್ಣವನ್ನು ಈ ನೌಕಾನೆಲೆಯು ಬಳಸಿಕೊಳ್ಳಲಿದೆ ಎನ್ನಲಾಗಿದೆ. ಇತ್ತೀಚಿನ ದಿನಗಳಲ್ಲಿ ಬಂಗಾಲ ಕೊಲ್ಲಿ ಕಡಲ ಮೂಲಕ ಬಾಂಗ್ಲಾವು ಒಳನುಸುಳುಕೋರರನ್ನು ಕಳುಹಿಸುತ್ತಿದೆ. ಇದಲ್ಲದೇ ಹಿಂದೂ ಮಹಾಸಾಗರದಲ್ಲಿ ಚೀನದ ನೌಕಾಪಡೆಯ ಚಲನವಲನ ಹೆಚ್ಚುತ್ತಿದ್ದು, ಈ ನಿಟ್ಟಿನಲ್ಲಿ ನೌಕಾನೆಲೆ ನಿರ್ಮಾಣ ಮಹತ್ವ ಪಡೆದಿದೆ. ಇನ್ನು ಈ ನೌಕಾನೆಲೆಯಲ್ಲಿ ಸುಮಾರು ಸೇನಾಧಿಕಾರಿಗಳು, ನಾವಿಕರು ಸೇರಿ 100 ಸಿಬಂದಿ ನಿಯೋಜಿಸಲಾಗುವುದು ಎಂದು ತಿಳಿದುಬಂದಿದೆ. ಕೋಲ್ಕತಾದಿಂದ 100 ಕಿ.ಮೀ. ದೂರದಲ್ಲಿರುವ ಹಲ್ದಿಯಾದಲ್ಲಿ ನೌಕಾನೆಲೆ ನಿರ್ಮಾಣವಾದರೆ ನೌಕಾಪಡೆಗೆ ಇನ್ನಷ್ಟು ಸುಲಭವಾಗಿ ಬಂಗಾಲ ಕೊಲ್ಲಿಗೆ ನೇರ ಪ್ರವೇಶ ಸಿಗಲಿದೆ ಎನ್ನಲಾಗಿದೆ.

Category
ಕರಾವಳಿ ತರಂಗಿಣಿ