image image
ಬ್ರೇಕಿಂಗ್ ನ್ಯೂಸ್
ಬ್ರೇಕಿಂಗ್ ನ್ಯೂಸ್
ದೇಶ

ಕಲ್ಲಿದ್ದಲು ಹಗರಣದಲ್ಲಿ ಕೇಂದ್ರ ಗೃಹಸಚಿವ ಅಮಿತ್‌ ಶಾ ಕೂಡ ಭಾಗಿ, ಪೆನ್ ಡ್ರೈವ್ ನನ್ನ ಬಳಿ ಇವೆ : ಮಮತಾ ಹೊಸ ಬಾಂಬ್

ಕಲ್ಲಿದ್ದಲು ಹಗರಣದಲ್ಲಿ ಕೇಂದ್ರ ಗೃಹಸಚಿವ ಅಮಿತ್‌ ಶಾ ಕೂಡ ಭಾಗಿ, ಪೆನ್ ಡ್ರೈವ್ ನನ್ನ ಬಳಿ ಇವೆ : ಮಮತಾ ಹೊಸ ಬಾಂಬ್

ಕೊಲ್ಕತಾ: ಕಲ್ಲಿದ್ದಲು ಹಗರಣದಲ್ಲಿ ಕೇಂದ್ರ ಗೃಹಸಚಿವ ಅಮಿತ್‌ ಶಾ ಕೂಡ ಭಾಗಿಯಾಗಿದ್ದಾರೆ. ಅದಕ್ಕೆ ಸಂಬಂಧಿಸಿದ ಪೆನ್‌ಡ್ರೈವ್‌ಗಳು ನನ್ನ ಬಳಿ ಇವೆ ಎಂದು ಶುಕ್ರವಾರ ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಪೆನ್‌ಡ್ರೈವ್‌ ಬಾಂಬ್‌ ಸಿಡಿಸಿದ್ದಾರೆ. ಐ-ಪ್ಯಾಕ್‌ ಕಚೇರಿ ಮತ್ತು ಅದರ ನಿರ್ದೇಶಕರ ನಿವಾಸದ ಮೇಲೆ ಜಾರಿ ನಿರ್ದೇಶನಾಲಯ (ಇ.ಡಿ.) ದಾಳಿ ನಡೆಸಿ ಒಂದು ದಿನದ ಬಳಿಕ ಕೋಲ್ಕತಾದಲ್ಲಿ ತನಿಖಾ ಸಂಸ್ಥೆ ವಿರುದ್ಧ ಪ್ರತಿಭಟನೆ ನಡೆಸಿದ ಬಳಿಕ ಕೇಂದ್ರ ಸರ್ಕಾರದ ವಿರದ್ಧ ವಾಗ್ದಾಳಿ ನಡೆಸಿದರು. ಅಮಿತ್ ಶಾ ಸೇರಿ ಹಿರಿಯ ಬಿಜೆಪಿ ನಾಯಕರು ಕಲ್ಲಿದ್ದಲು ಹಗರಣದ ಆದಾಯದಿಂದ ಲಾಭ ಪಡೆದಿದ್ದಾರೆ. ಶಾ ಅವರ ವಿರುದ್ಧದ ಪೆನ್‌ಡ್ರೈವ್‌ಗಳು ನನ್ನ ಬಳಿ ಇವೆ. ನನ್ನ ಮೇಲೆ ಒತ್ತಡ ಹೇರಿದರೆ ನಾನು ಎಲ್ಲವನ್ನೂ ಬಹಿರಂಗ ಪಡಿಸುತ್ತೇನೆ ಎಂದು ಬೆದರಿಕೆ ಹಾಕಿದ್ದಾರೆ.

ಚುನಾವಣಾ ಆಯೋಗದಿಂದ ಬಿಜೆಪಿ ಮಹಾರಾಷ್ಟ್ರದಲ್ಲಿ ಗೆದ್ದಿದೆ. ಬಂಗಾಳದಲ್ಲೂ ಅದನ್ನೇ ಪುನರಾವರ್ತನೆ ಮಾಡಲು ಹೊರಟಿದೆ. ನಾವು ಇದನ್ನು ಖಂಡಿಸುತ್ತೇವೆ. ಯಾರಾದರೂ ರಾಜಕೀಯವಾಗಿ ನನ್ನನ್ನು ಮುಗಿಸಲು ಹೊರಟರೆ, ಅದರಿಂದಲೇ ನಾನು ರಾಜಕೀಯ ಪುನಃಶ್ಚೇತನ ಪಡೆದುಕೊಳ್ಳುತ್ತೇನೆ. ಐಪ್ಯಾಕ್ ಕಚೇರಿ ದಾಳಿ ಮೂಲಕ ಬಿಜೆಪಿ ನಮ್ಮ ಪಕ್ಷದ ಕಾರ್ಯತಂತ್ರವನ್ನು ಕಳವು ಮಾಡಲು ಹೊರಟಿದೆ ಎಂದು ಆರೋಪಿಸಿದ್ದರು. 

ಪಶ್ಚಿಮ ಬಂಗಾಳದ ಕಲ್ಲಿದ್ದಲು ಹಗರಣದಿಂದ ಬಂದಂತಹ ಹಣವನ್ನು ಗೋವಾ ಚುನಾವಣೆಯಲ್ಲಿ ಬಳಸಿಕೊಳ್ಳಲಾಗಿದೆ ಎಂದು ತನಿಖೆಯಿಂದ ತಿಳಿದು ಬಂದಿದ್ದು, ಈ ಹಿನ್ನೆಲೆಯಲ್ಲಿ ಜಾರಿ ನಿರ್ದೇಶನಾಲಯ ಐಪ್ಯಾಕ್‌ ಹಾಗೂ ಅದರ ನಿರ್ದೇಶಕರ ನಿವಾಸದ ಮೇಲೆ ದಾಳಿ ಮಾಡಿತ್ತು. 2020ರಲ್ಲಿ ಈ ಹಗರಣಕ್ಕೆ ಸಂಬಂಧಿಸಿದಂತೆ ಸಿಬಿಐ ಎಫ್‌ಐಆರ್‌ ದಾಖಲಸಿಕೊಂಡಿತ್ತು. ಈ ಹಿನ್ನೆಲೆಯಲ್ಲಿ ಇ.ಡಿ. ತನಿಖೆ ನಡೆಸಿದ್ದು, ಈ ವೇಳೆ ಹಗರಣದಿಂದ ಬಂದ 20 ಕೋಟಿ ರೂ. ಹಣವನ್ನು ಗೋವಾ ಚುನಾವಣೆಯಲ್ಲಿ ಬಳಸಿಕೊಳ್ಳಲಾಗಿದೆ ಎಂದು ಆರೋಪಿಸಿದೆ. ಈ ಅಕ್ರಮದ ಹಣವನ್ನು ಈ ಐಪ್ಯಾಕ್‌ ಸಂಸ್ಥೆಯು ಹವಾಲಾ ಮೂಲಕ ವಿವಿಧ ಈವೆಂಟ್‌ ಮ್ಯಾನೇಜ್‌ಮೆಂಟ್‌ ಸಂಸ್ಥೆಗಳಿಗೆ ವರ್ಗಾಯಿಸಲಾಗಿದೆ ಎಂದು ಆರೋಪಿಸಿದೆ ಎಂದು ವರದಿಯಾಗಿದೆ.

Category
ಕರಾವಳಿ ತರಂಗಿಣಿ