image image
ಬ್ರೇಕಿಂಗ್ ನ್ಯೂಸ್
ಬ್ರೇಕಿಂಗ್ ನ್ಯೂಸ್
ದೇಶ

ತಮಗೆ ಜಾಮೀನು ಸಿಗದಿದ್ದರೂ, ಉಳಿದವರಿಗೆ ಜಾಮೀನು ದೊರೆತಿರುವುದು ಸಮಾಧಾನ ತಂದಿದೆ : ಉಮರ್ ಖಾಲಿದ್

ತಮಗೆ ಜಾಮೀನು ಸಿಗದಿದ್ದರೂ, ಉಳಿದವರಿಗೆ ಜಾಮೀನು ದೊರೆತಿರುವುದು ಸಮಾಧಾನ ತಂದಿದೆ : ಉಮರ್ ಖಾಲಿದ್

ನವದೆಹಲಿ: ತಮಗೆ ಜಾಮೀನು ಸಿಗದಿದ್ದರೂ, ತಮ್ಮೊಂದಿಗೆ ಬಂಧನಕ್ಕೊಳಗಾಗಿದ್ದ ಉಳಿದವರಿಗೆ ಜಾಮೀನು ದೊರೆತಿರುವುದು ಸಮಾಧಾನ ತಂದಿದೆ ಎಂದು 2020ರ ದೆಹಲಿ ಗಲಭೆ ಪ್ರಕರಣದ ಆರೋಪಿ ಉಮರ್ ಖಾಲಿದ್‌ ಹೇಳಿದ್ದಾರೆ. ಗಲಭೆಗೆ ಸಂಚು ರೂಪಿಸಿದ ಆರೋಪ ಎದುರಿಸುತ್ತಿರುವ ಅವರು ಹಾಗೂ ಶಾರ್ಜಿಲ್ ಇಮಾಮ್‌ಗೆ ಜಾಮೀನು ನೀಡಲು ಸುಪ್ರೀಂ ಕೋರ್ಟ್ ನಿರಾಕರಿಸಿದೆ. ನ್ಯಾಯಮೂರ್ತಿಗಳಾದ ಅರವಿಂದ ಕುಮಾರ್ ಹಾಗೂ ಎನ್‌.ವಿ ಅಂಜಾರಿಯ ಅವರಿದ್ದ ಪೀಠ, ಇತರೆ ಐವರು ಆರೋಪಿಗಳಾದ ಹೋರಾಟಗಾರರಾದ ಗುಲ್‌ಫಿಶಾ ಫಾತಿಮಾ, ಮೀರನ್‌ ಹೈದರ್‌, ಶಿಫಾ ಉರ್‌ ರೆಹಮಾನ್‌, ಮೊಹಮ್ಮದ್‌ ಸಲೀಮ್‌ ಖಾನ್‌ ಮತ್ತು ಶಾದಬ್‌ ಅಹ್ಮದ್‌ ಅವರಿಗೆ ಜಾಮೀನು ನೀಡಿದೆ. ಆದರೆ, ಪ್ರಕರಣದಲ್ಲಿ ಉಮರ್ ಖಾಲಿದ್ ಮತ್ತು ಶಾರ್ಜಿಲ್ ಇಮಾಮ್ ಅವರ ಪಾತ್ರ ಭಿನ್ನವಾಗಿದೆ ಎಂದು ಅಭಿಪ್ರಾಯಪಟ್ಟಿದೆ.

ಉಮರ್‌ ಹೇಳಿಕೆ ಕುರಿತು ಸಾಮಾಜಿಕ ಮಾಧ್ಯಮ ವೇದಿಕೆ ಎಕ್ಸ್‌ನಲ್ಲಿ ಪೋಸ್ಟ್‌ ಹಂಚಿಕೊಂಡಿರುವ ಬನೊಜ್ಯೋತ್ಸ್ನಾ ಎಂಬವರು, 'ಉಮರ್ ಅವರು, ಜೈಲೇ ನನ್ನ ಜೀವನ. ಇತರರಿಗೆ ಜಾಮೀನು ದೊರಕಿರುವುದಕ್ಕೆ ಸಂತಸವಾಗಿದೆ. ತುಂಬಾ ನಿರಾಳನಾಗಿದ್ದೇನೆ ಎಂದಿದ್ದಾರೆ' ಎಂದು ಬರೆದುಕೊಂಡಿದ್ದಾರೆ. 

Category
ಕರಾವಳಿ ತರಂಗಿಣಿ