image image
ಬ್ರೇಕಿಂಗ್ ನ್ಯೂಸ್
ಬ್ರೇಕಿಂಗ್ ನ್ಯೂಸ್
ದೇಶ

ಶಬರಿಮಲೆ ಕೇಸ್‌ : ಸೋನಿಯಾ ಗಾಂಧಿ ಜೊತೆಗಿದ್ದ ಆರೋಪಿಗಳ ಫೋಟೋ ಹಂಚಿಕೊಂಡ ಪಿಣರಾಯಿ ವಿಜಯನ್!

ಶಬರಿಮಲೆ ಕೇಸ್‌ : ಸೋನಿಯಾ ಗಾಂಧಿ ಜೊತೆಗಿದ್ದ ಆರೋಪಿಗಳ ಫೋಟೋ ಹಂಚಿಕೊಂಡ ಪಿಣರಾಯಿ ವಿಜಯನ್!

ತಿರುವನಂತಪುರಂ: ಶಬರಿಮಲೆ ದೇವಸ್ಥಾನದಿಂದ ಚಿನ್ನ ಕಳ್ಳತನವಾಗಿದ್ದ ವಿವಾದ ಬೂದಿ ಮುಚ್ಚಿದ ಕೆಂಡದಂತಿದ್ದು, ಸರ್ಕಾರದ ವಿರುದ್ಧದ ಆರೋಪಗಳನ್ನು ತಿರಸ್ಕರಿಸಿರುವ ಮುಖ್ಯಮಂತ್ರಿ ಪಿಣರಾಯಿ ವಿಜಯನ್, ಪ್ರಮುಖ ಆರೋಪಿ ಮತ್ತು ಪಕ್ಷದ ನಾಯಕಿ ಸೋನಿಯಾ ಗಾಂಧಿ ನಡುವಿನ ಭೇಟಿಯನ್ನು ಉಲ್ಲೇಖಿಸಿ ಕಾಂಗ್ರೆಸ್‌ ವಿರುದ್ಧ ತೀವ್ರ ಹರಿಹಾಯ್ದಿದ್ದಾರೆ. ಮಾಧ್ಯಮಗಳನ್ನುದ್ದೇಶಿಸಿ ಮಾತನಾಡಿದ ಸಿಎಂ ವಿಜಯನ್, ಶಬರಿಮಲೆ ಚಿನ್ನ ಕಳವು ಪ್ರಕರಣದ ಪ್ರಮುಖ ಆರೋಪಿಯಾಗಿರುವ ಉನ್ನಿಕೃಷ್ಣನ್ ಪೊಟ್ಟಿ ಸೋನಿಯಾ ಗಾಂಧಿ ಜೊತೆಯಲ್ಲಿದ್ದಾರೆ ಎನ್ನಲಾದ ಫೋಟೋವನ್ನು ಉಲ್ಲೇಖಿಸಿ , ಆರೋಪಿಗಳಾದವರು ದೊಡ್ಡ ಮಟ್ಟದ ಭದ್ರತೆ ಇರುವಂತಹ ನಾಯಕರನ್ನು ಭೇಟಿಯಾಗಿದ್ದು ಹೇಗೆ ಎಂದು ಪ್ರಶ್ನಿಸಿದ್ದಾರೆ.

ವಂಚಕರಾದವರು ದೇಶದ ಅತ್ಯುನ್ನತ ಮಟ್ಟದ ಭದ್ರತೆಯನ್ನು ಹೊಂದಿರುವ ನಾಯಕಿ ಸೋನಿಯಾ ಗಾಂಧಿಯವರಿಗೆ ಹತ್ತಿರವಾಗಲು ಸಾಧ್ಯವಾಗಿದ್ದು ಹೇಗೆ..? ಈ ಭೇಟಿಗೆ ಅವಕಾಶ ನೀಡಲು ಯಾರು ಜವಾಬ್ದಾರರು? ಮೊದಲು ಉತ್ತರಿಸಬೇಕಾದ ಪ್ರಶ್ನೆಗಳು ಇವು ಎಂದಿರುವ ವಿಜಯನ್, ಫೋಟೋದಲ್ಲಿ ಯುಡಿಎಫ್ ಸಂಚಾಲಕ ಅಡೂರ್ ಪ್ರಕಾಶ್ ಮತ್ತು ಪಟ್ಟಣಂತಿಟ್ಟ ಸಂಸದ ಆಂಟೋ ಆಂಟನಿ ಇದ್ದಾರೆ ಎಂದು ಉಲ್ಲೇಖಿಸಿ, ಚಿತ್ರದಲ್ಲಿರುವ ಇತರ ವ್ಯಕ್ತಿಗಳಲ್ಲಿ ಒಬ್ಬರು ಪ್ರಕರಣದ ಪ್ರಮುಖ ಆರೋಪಿ ಪಾಟಿ ಇನ್ನೊಬ್ಬರು ಕದ್ದ ಚಿನ್ನವನ್ನು ಖರೀದಿಸಿದ ವ್ಯಕ್ತಿ ಎಂದು ಆರೋಪಿಸಿದರು.

ಹೈಕೋರ್ಟ್ ಮೇಲ್ವಿಚಾರಣೆಯಲ್ಲಿರುವ ವಿಶೇಷ ತನಿಖಾ ತಂಡ (ಎಸ್‌ಐಟಿ) ತನಿಖೆಯಲ್ಲಿ ಸಿಎಂಒ ಹಸ್ತಕ್ಷೇಪ ಮಾಡಿದೆ ಎಂಬ ಕಾಂಗ್ರೆಸ್‌ನ ಆರೋಪಗಳನ್ನು ತಿರಸ್ಕರಿಸಿದ ವಿಜಯನ್​, ವಿಪಕ್ಷಗಳು ಮುಖ್ಯಮಂತ್ರಿ ಕಚೇರಿ ವಿರುದ್ಧ ಆರೋಪ ಮಾಡುವ ಬದಲು, ನನ್ನ ಈ ಪ್ರಶ್ನೆಗಳಿಗೆ ಉತ್ತರಿಸಬೇಕು ಎಂದರು. ತನಿಖೆ ಸರಿಯಾಗಿ ನಡೆಯುತ್ತಿದ್ದು, ಇದಕ್ಕೆ ಸಂಬಂಧಪಟ್ಟಂತೆ ಯಾವುದೇ ದೂರು ಬಂದಿಲ್ಲ, ಈ ವಿಷಯದಲ್ಲಿ ನಾನಾಗಲಿ, ನನ್ನ ಕಚೇರಿಯಾಗಲಿ ಹಸ್ತಕ್ಷೇಪ ಮಾಡಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

ಮಾಜಿ ಸಚಿವ ಸುರೇಂದ್ರನ್ ವಿಚಾರಣೆಯನ್ನು ರಹಸ್ಯವಾಗಿಡಲಾಗಿತ್ತು ಎಂಬ ಹೇಳಿಕೆಗಳನ್ನು ತಳ್ಳಿಹಾಕಿದ್ದು, ಎಸ್‌ಐಟಿ ಯಾರನ್ನು ಪ್ರಶ್ನಿಸುತ್ತಿದೆ ಎಂಬುದನ್ನು ಮುಂಚಿತವಾಗಿ ಘೋಷಿಸುವುದಿಲ್ಲ, ಯಾರನ್ನೂ ವಿಚಾರಣೆ ಮಾಡಲು ಸರ್ಕಾರದ ಅನುಮತಿ ಅಗತ್ಯವಿಲ್ಲ ಎಂದರು. ಮಾಧ್ಯಮ ವರದಿಗಳ ಮೂಲಕ ಪ್ರಸ್ತಾವಿತ ವಿಚಾರಣೆಯ ಬಗ್ಗೆ ತಿಳಿದುಕೊಂಡೆ ಎಂದು ಯುಡಿಎಫ್ ಸಂಚಾಲಕ ಅಡೂರ್ ಪ್ರಕಾಶ್ ಹೇಳಿಕೆ ನೀಡಿದ್ದಾರೆ.

Category
ಕರಾವಳಿ ತರಂಗಿಣಿ