ಶಬರಿಮಲೆ: ಮಂಡಲ - ಮಕರವಿಳಕ್ಕು ಮಹೋತ್ಸವಕ್ಕಾಗಿ ಶಬರಿಮಲೆ ದೇವಸ್ಥಾನ ತೆರೆದ ಅನಂತರ ವೃಶ್ಚಿಕ ಮಾಸದ ಎರಡನೇ ದಿನ ಮಂಗಳವಾರ ಮಧ್ಯಾಹ್ನ ವೇಳೆಗೆ ಕ್ಷೇತ್ರ ತಲುಪಿದ ಭಕ್ತರ ಸಂಖ್ಯೆ ಎರಡು ಲಕ್ಷ ತಲುಪಿದ್ದು, ಕೆಲವರು ದಿನ ಪೂರ್ತಿ ಸರತಿನಲ್ಲಿ ನಿಂತು ಕೂಡ ಅಯ್ಯಪ್ಪನ ದರ್ಶನ ಸಾಧ್ಯವಾಗದೆ ನಿರಾಶರಾಗಿದ್ದಾರೆ. ಕೆಲವರು ಸಕಾಲದಲ್ಲಿ ಆಹಾರ, ನೀರು ಸೇವಿಸಲು ಸಾಧ್ಯವಾಗದೆ ತೊಂದರೆ ಅನುಭವಿಸಿದ್ದಾರೆ. ದೊಡ್ಡ ಸಂಖ್ಯೆಯ ಭಕ್ತರು ಬ್ಯಾರಿಕೇಡ್ ಜಿಗಿದು ಕ್ಯೂ ಕಾಂಪ್ಲೆಕ್ಸ್ ಬಿಟ್ಟು ಇತರ ಮಾರ್ಗಗಳಿಂದ ಸನ್ನಿದಾನ ತಲುಪಲು ಪ್ರಯತ್ನಿಸಿರುವುದು ಪರಿಸ್ಥಿತಿ ಬಿಗಡಾಯಿಸಲು ಮುಖ್ಯ ಕಾರಣ ಎಂದು ಜಯಕುಮಾರ್‌ತಿಳಿಸಿದ್ದಾರೆ. ಇಷ್ಟು ದೊಡ್ಡ ಭಕ್ತರ ಪ್ರವಾಹವನ್ನು ನಿಯಂತ್ರಿಸಲು ಕೇವಲ 18,000 ಪೊಲೀಸರು ಮಾತ್ರ ಸ್ಥಳದಲ್ಲಿದ್ದರು. ರಾಷ್ಟ್ರೀಯ ಪ್ರಾಕೃತಿಕ ವಿಕೋಪ ನಿರ್ವಹಣೆ ಪಡೆ (ಎನ್.ಡಿ.ಆರ್.ಎಫ್) ಮಂಗಳವಾರ ಮಧ್ಯಾಹ್ನ ತನಕ ಶಬರಿಮಲೆ ತಲುಪಿಲ್ಲ. ಸಂಜೆ ವೇಳೆ ತಲುಪಬಹುದು. ಹೆಚ್ಚುವರಿ ಪೊಲೀಸರು ಕೂಡ ತಲುಪಲಿದ್ದಾರೆ ಎನ್ನುವುದು ನಿರೀಕ್ಷೆ ಎಂದು ಸ್ಥಳದಲ್ಲಿ ಮಾಧ್ಯಮ ಪ್ರತಿನಿಧಿಗಳು ವರದಿ ಮಾಡಿದ್ದಾರೆ. ಶಬರಿಮಲೆ ಕ್ಷೇತ್ರದಿಂದ 23 ಕಿ.ಮೀ ದೂರದ ನಿಲಕ್ಕಲ್ ನಲ್ಲಿ ಏಳು ಹೊಸ ಬುಕ್ಕಿಂಗ್ ಕೌಂಟರ್‌ತೆರೆಯಲಾಗಿದೆ.
ದರ್ಶನ ಅವಧಿಯನ್ನು ಮಧ್ಯಾಹ್ನ ಎರಡು ಗಂಟೆ ತನಕ ವಿಸ್ತರಿಸಲಾಗಿದೆ ಎಂದು ಸ್ಥಳದಲ್ಲಿರುವ ತಿರುವಾಂಕೂರು ದೇವಸ್ವಂ ಮಂಡಳಿ ಅಧ್ಯಕ್ಷ ಜಯಕುಮಾರ್‌ಅವರು ಇಲ್ಲಿಯ ಸನ್ನಿವೇಶ ಭಯಾನಕ ಇದೆ. ಪರಿಸ್ಥಿತಿ ನಿಯಂತ್ರಣಕ್ಕೆ ಎಲ್ಲ ಅಗತ್ಯ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ ಎಂದು ಮಾಧ್ಯಮ ಪ್ರತಿನಿಧಿಗಳಿಗೆ ಪ್ರತಿಕ್ರಿಯಿಸಿದ್ದಾರೆ. ಭಕ್ತರ ದಟ್ಟಣೆ ಗಮನದಲ್ಲಿರಿಸಿ ದಿನದಲ್ಲಿ ಸ್ಥಳದಲ್ಲೇ ನೋಂದಣಿಯನ್ನು 20,000 ಜನರಿಗೆ ಸೀಮಿತಗೊಳಿಸಲು ದೇವಸ್ವಂ ಮಂಡಳಿ ತೀರ್ಮಾನಿಸಿದೆ. ಬಳಿಕ ಬಂದ ಭಕ್ತರಿಗೆ ಅನಂತರದ ದಿನದಲ್ಲಿ ಆಯ್ಯಪ್ಪ ದರ್ಶನ ಅವಕಾಶ ಒದಗಿಸಲು ನಿರ್ಧರಿಸಲಾಗಿದೆ. ಕ್ಯೂ ಕಾಂಪ್ಲೆಕ್ಸ್ ಗಳಲ್ಲಿ ಹೆಚ್ಚುವರಿ ಸಿಬಂದಿ ನಿಯೋಜಿಸಲು ಕ್ರಮ ಕೈಗೊಳ್ಳಲಾಗಿದೆ, ಉತ್ಸವದಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಊಟ ಉಪಾಹಾರ ಪೂರೈಕೆ ವಿಷಯದಲ್ಲಿಯೂ ಕೂಡ ಸಮಸ್ಯೆಯಾಗಿದೆ. ಸದ್ಯ ಸಾರ್ವಜನಿಕ ಅನ್ನದಾನ ಸ್ಥಳದಲ್ಲಿಯೇ ಸಿಬಂದಿಗೆ ಪ್ರತ್ಯೇಕ ಕ್ಯೂ ವ್ಯವಸ್ಥೆ ಮಾಡಲಾಗಿದೆ. ಎರಡು ದಿನದಲ್ಲಿ ಪ್ರತ್ಯೇಕ ಉಪಾಹಾರ ಕೇಂದ್ರ ಕಾರ್ಯಾರಂಭಿಸುವ ಕುರಿತು ಆಡಳಿತ ವ್ಯವಸ್ಥೆ ಭರವಸೆ ನೀಡಿದೆ.
ಕ್ಯೂ ವ್ಯವಸ್ಥೆ ಮಾಡಲಾಗಿದೆ. ಎರಡು ದಿನದಲ್ಲಿ ಪ್ರತ್ಯೇಕ ಉಪಾಹಾರ ಕೇಂದ್ರ ಕಾರ್ಯಾರಂಭಿಸುವ ಕುರಿತು ಆಡಳಿತ ವ್ಯವಸ್ಥೆ ಭರವಸೆ ನೀಡಿದೆ.
ಅಧಿಕೃತ ಅಂಕಿಅಂಶ ಪ್ರಕಾರ ನ. 16ರಂದು ಸಂಜೆ 5 ಗಂಟೆಗೆ ದೇವಾಲಯದ ಬಾಗಿಲು ತೆರೆದ ಅನಂತರ 53,278 ಜನರು ದೇವಾಲಯಕ್ಕೆ ಭೇಟಿ ನೀಡಿದರು. ನ. 17ರಂದು 98,915 ಜನರು ಮತ್ತು ನ. 18 ರಂದು ಮಧ್ಯಾಹ್ನ 12ರ ವರೆಗೆ 44,401 ಜನರು ಆಗಮಿಸಿದ್ದಾರೆ. ಶಬರಿಮಲೆಯಲ್ಲಿ ದೇವರ ದರುಶನ ಪ್ರಯತ್ನದ ನಡುವೆ ಮಹಿಳೆಯೋರ್ವರು ಕುಸಿದು ಬಿದ್ದು ಮೃತಪಟ್ಟಿದ್ದಾರೆ. ಕೇರಳ ಕೋಯಿಕೋಡು ಜಿಲ್ಲೆಯ ಕೊಯಿಲಾಂಡಿ ನಿವಾಸಿ ಸತಿ (68) ಮೃತಪಟ್ಟ ಮಹಿಳೆ. ಅಪ್ಪಚ್ಚಿಮೇಡು ಪರ್ವತ ಹತ್ತುವ ಸಂದರ್ಭದಲ್ಲಿ ಮಹಿಳೆ ಕುಸಿದು ಬಿದ್ದಿದ್ದು, ಆಸ್ಪತ್ರೆಗೆ ಸೇರಿಸಲಾಯಿತಾದರೂ ಪ್ರಯೋಜನವಾಗಲಿಲ್ಲ.