ಜೋಹಾನ್ಸ್ ಬರ್ಗ್ - ಇಲ್ಲಿ ನಡೆಯಲಿರುವ ಜಿ-20 ಸಮಾವೇಶಕ್ಕೂ ಮುನ್ನವೇ ಕೆಲವು ಸಂಘಟನೆಗಳು ಮುಸ್ಲಿಂ ವಕೀಲರ ಸಂಘದ ಸಾರಥ್ಯದಲ್ಲಿ ಭಾರತದ ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಅಂತಾರಾಷ್ಟ್ರೀಯ ಅಪರಾಧ ಕಾನೂನಿನಡಿ ವಿಚಾರಣೆ ನಡೆಸಬೇಕೆಂದು ದಕ್ಷಿಣ ಆಫ್ರಿಕಾ ಪೊಲೀಸ್ ಮುಖ್ಯಸ್ಥರಿಗೆ, ಅಪರಾಧ ತನಿಖಾ ಸಂಸ್ಥೆಗಳಿಗೆ ದೂರು ನೀಡಿದೆ. ಕಾಶೀರದಲ್ಲಿ ಮಾನವ ಹಕ್ಕು ಉಲ್ಲಂಘನೆಯಾಗುತ್ತಿದೆಯೆಂದು ಆರೋಪಿಸಿರುವ ದಿ ಸೌತ್ ಆಫ್ರಿಕಾ ಕಾಶೀರ ಆಯಕ್ಷನ್ ಗ್ರೂಪ್ ಮತ್ತು ಮುಸ್ಲಿಂ ವಕೀಲ ಸಂಘ ಜೋಹಾನ್ಸ್ ಬರ್ಗ್‌ಗೆ ಆಗಮಿಸಲಿರುವ ಭಾರತದ ಪ್ರಧಾನಿಯನ್ನು ಬಂಧಿಸಬೇಕೆಂದು ಮನವಿ ಸಲ್ಲಿಸಿದೆ. ಇದು ವಿದೇಶದ ಹಲವಾರು ನಾಯಕರ ಆಕ್ರೋಶಕ್ಕೆ ಕಾರಣವಾಗಿದ್ದು, ಕೆಲವು ಮೂಲಭೂತವಾದಿಗಳು ಭಾರತದ ಬೆಳವಣಿಗೆಯನ್ನು ಸಹಿಸದೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ಕಪ್ಪು ಮಸಿ ಬಳಿಯಲು ಪ್ರಯತ್ನಿಸುತ್ತಿದ್ದಾರೆ. ಭಾರತದ ಶಾಂತಿ ಮಂತ್ರ ಮತ್ತು ಸಾಮರ್ಥ್ಯವನ್ನು ಕದಡಲು ಇಂತಹ ಸಂಘಟನೆಗಳು ಅಂತಾರಾಷ್ಟ್ರೀಯ ಸಮಾವೇಶ ಸಂದರ್ಭದಲ್ಲಿ ಧಕ್ಕೆ ತರುವ ಹೇಳಿಕೆಗಳನ್ನು ನೀಡಿ ತಪ್ಪು ಮಾಹಿತಿಗಳನ್ನು ಹರಡುತ್ತಿದ್ದಾರೆ. ಭಾರತದಲ್ಲಿ ಅದರಲ್ಲೂ ಕಾಶೀರದಲ್ಲಿ ಯಾವುದೇ ಮಾನವ ಹಕ್ಕು ಉಲ್ಲಂಘನೆ ಅಥವಾ ಹಿಂಸಾಚಾರದ ಘಟನೆಗಳು ನಡೆಯದೇ ಇದ್ದರೂ ಜನರಲ್ಲಿ ದ್ವೇಷ ಭಾವನೆ ಹುಟ್ಟಿಸಲು ಭಾರೀ ಪ್ರಮಾಣದ ನಿಧಿ ಸಂಗ್ರಹಿಸಲಾಗಿದೆ.
ಇದು ದಕ್ಷಿಣ ಆಫ್ರಿಕಾ ನಾಗರಿಕರನ್ನೂ ಕೂಡ ಕೆರಳಿಸಿದ್ದು, ಇದು ದುಷ್ಟರ ದುರಂಹಕಾರದ ಪರಮಾವಧಿಯೆಂದು ಬಣ್ಣಿಸುತ್ತಿದ್ದಾರೆ. ಇಷ್ಟೆಲ್ಲಾ ಬೆಳವಣಿಗೆಯಾಗುತ್ತಿದ್ದರೂ. ದಕ್ಷಿಣ ಆಫ್ರಿಕಾದಲ್ಲಿರುವ ಭಾರತೀಯ ರಾಯಭಾರಿ ಕಚೇರಿ, ಯಾವುದೇ ಕ್ರಮ ಗಳನ್ನು ಕೈಗೊಳ್ಳದೆ ಸುಮನಿರುವುದು ಆಕ್ರೋಶಕ್ಕೆ ಕಾರಣವಾಗಿದೆ. ಭಾರತದ ವಿರುದ್ಧ ನಡೆಯುತ್ತಿರುವ ಸುಳ್ಳು ಮಾಹಿತಿಗಳು ಮತ್ತು ಹೋರಾಟದ ಬಗ್ಗೆ ರಾಜತಾಂತ್ರಿಕವಾಗಿ ಕಾರ್ಯನಿರ್ವಹಿಸುವ ಅಗತ್ಯತೆ ಇದೆ, ಆದರೆ ಈ ಬಗ್ಗೆ ಈವರೆಗೆ ಚಕಾರ ಎತ್ತದಿರುವುದು ವಿಷಾದನೀಯ ಎಂದು ಅಲ್ಲಿ ಪ್ರಜೆಗಳೇ ವಿಷಾದ ವ್ಯಕ್ತಪಡಿಸಿದ್ದಾರೆ.