ಗೋರಖ್‌ಪುರ: 'ಭಾರತದ ಇತಿಹಾಸದಲ್ಲಿ ಬ್ರಿಟಿಷ್ ಮತ್ತು ಫ್ರೆಂಚ್ ವಸಾಹತುಶಾಹಿಯನ್ನು ಹೆಚ್ಚಾಗಿ ಚರ್ಚಿಸಲಾಗುತ್ತದೆಯಾದರೂ, "ರಾಜಕೀಯ ಇಸ್ಲಾಂ" ಬಗ್ಗೆ ಹೆಚ್ಚು ಉಲ್ಲೇಖವಿಲ್ಲ, ಅದು ಸನಾತನ ಧರ್ಮದ ಮೇಲೆ ದೊಡ್ಡ ಹೊಡೆತವನ್ನು ನೀಡಿದೆ' ಎಂದು ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಹೇಳಿಕೆ ನೀಡಿದ್ದಾರೆ. ಗೋರಖ್‌ಪುರದಲ್ಲಿ ನಡೆದ ಆರ್‌ಎಸ್‌ಎಸ್‌ನ ಶತಮಾನೋತ್ಸವ ವರ್ಷ ಗುರುತಿಸಲು ಆಯೋಜಿಸಿದ್ದ 'ವಿಚಾರ-ಪರಿವಾರ್ ಕುಟುಂಬ್ ಸ್ನೇಹ ಮಿಲನ್' ಮತ್ತು 'ದೀಪೋತ್ಸವ್ ಸೇ ರಾಷ್ಟ್ರೋತ್ಸವ' ಕಾರ್ಯಕ್ರಮದಲ್ಲಿ ಮಾತನಾಡಿದ ಸಿಎಂ ಯೋಗಿ, ಛತ್ರಪತಿ ಶಿವಾಜಿ ಮಹಾರಾಜ್, ಗುರು ಗೋವಿಂದ ಸಿಂಗ್, ಮಹಾರಾಣಾ ಪ್ರತಾಪ್ ಮತ್ತು ಮಹಾರಾಣಾ ಸಂಗ ಅವರಂತಹ ಮಹಾನ್ ಯೋಧರು "ಅಪಾಯಕಾರಿ ರಾಜಕೀಯ ಇಸ್ಲಾಂ" ವಿರುದ್ಧ ಯುದ್ಧಗಳನ್ನು ನಡೆಸಿದ್ದರು ಎಂದು ಹೇಳಿದರು. "ನಮ್ಮ ಪೂರ್ವಜರು ರಾಜಕೀಯ ಇಸ್ಲಾಂ ವಿರುದ್ಧ ಪ್ರಮುಖ ಹೋರಾಟಗಳನ್ನು ನಡೆಸಿದ್ದರು, ಆದರೆ ಇತಿಹಾಸದಲ್ಲಿ "ರಾಜಕೀಯ ಇಸ್ಲಾಂ" ಅಂಶವು ಹೆಚ್ಚಾಗಿ ಕಡೆಗಣಿಸಲ್ಪಟ್ಟಿದೆ" ಎಂದರು.
"ಸಮಾಜವಾದಿ ಪಕ್ಷ, ಕಾಂಗ್ರೆಸ್ ಮತ್ತು ಇಂಡಿಯಾ ಮೈತ್ರಿಕೂಟದ ಸದಸ್ಯ ಪಕ್ಷಗಳು ರಾಮ ಮಂದಿರ ನಿರ್ಮಾಣವನ್ನು ಪ್ರಶ್ನಿಸಿದರೆ, ಆರ್‌ಎಸ್‌ಎಸ್ ಸ್ವಯಂಸೇವಕರು ರಾಮ ಮಂದಿರವನ್ನು ನಿರ್ಮಿಸುವ ತಮ್ಮ ದೃಢಸಂಕಲ್ಪದಲ್ಲಿ ದೃಢವಾಗಿ ಉಳಿದರು.ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣದಲ್ಲಿ ಪ್ರಮುಖ ಪಾತ್ರ ವಹಿಸಿದ್ದು ಆರ್‌ಎಸ್‌ಎಸ್. 100 ವರ್ಷಗಳ ಪ್ರಯಾಣದಲ್ಲಿ ಅಸಾಧ್ಯವಾದದ್ದು ಸಾಧ್ಯವಾಯಿತು. ಸಂಘವು ನಿರ್ಬಂಧಗಳನ್ನು ಸಹಿಸಿಕೊಂಡಿತು, ಸ್ವಯಂಸೇವಕರು ಲಾಠಿ ಚಾರ್ಜ್ ಮತ್ತು ಗುಂಡುಗಳನ್ನು ಎದುರಿಸಿದರು. ಇಂದು, ಭವ್ಯವಾದ ರಾಮ ಮಂದಿರವು ಅವರ ಅಚಲ ಬದ್ಧತೆಗೆ ಸಾಕ್ಷಿಯಾಗಿದೆ"ಎಂದು ಸಿಎಂ ಯೋಗಿ ಹೇಳಿದರು. ಸಾಮಾಜಿಕ ಸಾಮರಸ್ಯ, ಕೌಟುಂಬಿಕ ಮೌಲ್ಯಗಳು, ಪರಿಸರ ಸಂರಕ್ಷಣೆ, ಸ್ಥಳೀಯ ವಸ್ತುಗಳ ಮೂಲಕ ಸ್ವಾವಲಂಬನೆ ಮತ್ತು ನಾಗರಿಕ ಜವಾಬ್ದಾರಿ, ಇವುಗಳನ್ನು ವಿಕ್ಷಿತ ಭಾರತದ ಅಡಿಪಾಯ ಎಂದು ಕರೆಯಲಾಗುತ್ತದೆ ಎಂದು ಯೋಗಿ ಹೇಳಿದರು. ಉತ್ತರ ಪ್ರದೇಶ ಸರಕಾರವು ಹಲಾಲ್ ಪ್ರಮಾಣೀಕೃತ ಉತ್ಪನ್ನಗಳ ಮಾರಾಟವನ್ನು ನಿಷೇಧಿಸಿದೆ.ಕೇಂದ್ರ ಅಥವಾ ರಾಜ್ಯ ಸರಕಾರಗಳಿಂದ ಅಧಿಕೃತ ಮಾನ್ಯತೆ ಪಡೆಯದಿದ್ದರೂ, ಹಲಾಲ್ ಪ್ರಮಾಣೀಕೃತ ಲೇಬಲ್‌ಗಳು ದೇಶಾದ್ಯಂತ ಒಟ್ಟಾರೆಯಾಗಿ ಸುಮಾರು 25,000 ಕೋಟಿ ರೂ. ಗಳಿಸಲಾಗುತ್ತಿದ್ದು, ಅಂತಹ ಮಾರಾಟದಿಂದ ಬರುವ ಲಾಭವನ್ನು ಮತಾಂತರ, ಲವ್ ಜಿಹಾದ್ ಮತ್ತು ಭಯೋತ್ಪಾದನೆಗೆ ಬಳಸಲಾಗುತ್ತಿತ್ತು'' ಎಂದು ಹೇಳಿದರು. ''ಹಲಾಲ್ ಪ್ರಮಾಣೀಕರಣದ ಹೆಸರಿನಲ್ಲಿ ಭಾರತೀಯ ಗ್ರಾಹಕರನ್ನು ಶೋಷಿಸುವವರ ವಿರುದ್ಧ ಕಠಿನ ಕ್ರಮ ಕೈಗೊಳ್ಳಬೇಕು. ಈ ದೊಡ್ಡ ಪಿತೂರಿ ಯಾವ ಮಟ್ಟದಲ್ಲಿ ನಡೆಯುತ್ತಿದೆ? ಇದಕ್ಕೆ ಸಾಕ್ಷಿಯಾಗಿ ನಾವು ಬಲರಾಂಪುರದಲ್ಲಿ ಜಲಾಲುದ್ದೀನ್ (ಚಂಗೂರ್ ಬಾಬಾ)ನನ್ನು ಬಂಧಿಸಿದ್ದೇವೆ'' ಎಂದರು.