image image
ಬ್ರೇಕಿಂಗ್ ನ್ಯೂಸ್
ಬ್ರೇಕಿಂಗ್ ನ್ಯೂಸ್
ದೇಶ

ಖಾಸಗಿ ವಾಹನಗಳಲ್ಲಿ ಎಲ್‌ಇಡಿ ಹೆಡ್ ಲೈಟ್ ನಿಷೇಧಕ್ಕೆ ಸುಪ್ರೀಂ ಕೋರ್ಟ್ ಸೂಚನೆ

ಖಾಸಗಿ ವಾಹನಗಳಲ್ಲಿ ಎಲ್‌ಇಡಿ ಹೆಡ್ ಲೈಟ್ ನಿಷೇಧಕ್ಕೆ ಸುಪ್ರೀಂ ಕೋರ್ಟ್ ಸೂಚನೆ

ನವದೆಹಲಿ: ಖಾಸಗಿ ವಾಹನಗಳಲ್ಲಿ ಎಲ್‌ಇಡಿ ಹೆಡ್ ಲೈಟ್, ಕೆಂಪು -ನೀಲಿ ಬಣ್ಣದ ಬೀಕನ್ ಗಳ ಖಾಸಗಿ ಬಳಕೆ, ತುರ್ತು ವಾಹನದ ಸೌಂಡ್ ನಿಷೇಧಿಸುವಂತೆ ಸುಪ್ರೀಂಕೋರ್ಟ್ ಸೂಚನೆ ನೀಡಿದೆ. ಕಾನೂನು ಬಾಹಿರ ಎಲ್‌ಇಡಿ ಲೈಟ್ ಗಳು ರಸ್ತೆ ಅಪಘಾತಗಳನ್ನು ಹೆಚ್ಚಿಸುತ್ತಿವೆ. ತುರ್ತು ವಾಹನಗಳಿಗೆಂದು ಇರುವ ಕೆಂಪು- ನೀಲಿ ಬೀಕನ್ ಗಳನ್ನು ಖಾಸಗಿ ವಾಹನಗಳಲ್ಲಿ ಬಳಸಲಾಗುತ್ತಿದೆ. ಇದು ಜನರಿಗೆ ತಪ್ಪು ಸಂದೇಶ ನೀಡುತ್ತಿದೆ ಎಂದು ಸುಪ್ರೀಂ ಕೋರ್ಟ್ ಹೇಳಿದ್ದು, ಖಾಸಗಿ ವಾಹನಗಳಲ್ಲಿ ಎಲ್‌ಇಡಿ ಹೆಡ್ ಲೈಟ್, ಕೆಂಪು -ನೀಲಿ ಬಣ್ಣದ ಬೀಕನ್ ಗಳ ಬಳಕೆ ನಿಷೇಧಿಸುವಂತೆ ರಾಜ್ಯಗಳಿಗೆ ಸೂಚನೆ ನೀಡಿದೆ. ತುರ್ತು ವಾಹನಗಳ ಎಚ್ಚರಿಕೆ ಶಬ್ದವನ್ನು ಸಹ ಖಾಸಗಿ ವಾಹನದವರು ಬಳಕೆ ಮಾಡುತ್ತಿದ್ದಾರೆ. ಇದರಿಂದ ಸಂಚಾರ ವೇಳೆ ಅಪಘಾತ, ಪಾದಚಾರಿಗಳಿಗೆ ಗಾಬರಿಯಾಗುತ್ತಿದೆ ಎಂದು ಸುಪ್ರೀಂಕೋರ್ಟ್ ಕಿಡಿಕಾರಿದ್ದು, ಕ್ರಮ ಕೈಗೊಳ್ಳುವಂತೆ ರಾಜ್ಯಗಳಿಗೆ ಸೂಚನೆ ನೀಡಿದೆ.

Category
ಕರಾವಳಿ ತರಂಗಿಣಿ